Advertisement
“ಗೋಧಿ ಬಣ್ಣ ಮುದ್ದಾದ ಮೈ ಕಟ್ಟು …’– ಸಂಗೀತಾ ಭಟ್‌ನ ಕಂಡಾಗ ಈಗ ಈ ತರಹದ್ದೊಂದು ಡೈಲಾಗ್ ಹೇಳಿ ಸ್ಮೈಲ್ ಕೊಡುವ ಜನ ಹೆಚ್ಚಾಗಿದ್ದಾರೆ. ಸಂಗೀತಾ ಕೂಡಾ ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತಾರೆ. ಅವರಿಗೆ ಯಾವ ಬೇಜಾರೂ ಇಲ್ಲ. ಜನ ಗುರುತಿಸುತ್ತಿದ್ದಾರೆಂಬ ಖುಷಿಯಂತೂ ಇದ್ದೇ ಇದೆ. ಈ “ಮುದ್ದಾದ ಮೈ ಕಟ್ಟು’ಗೆ ಕಾರಣವಾಗಿರೋದು ಸಂಗೀತಾ ಭಟ್‌ನ ಬೋಲ್ಡ್‌ನೆಸ್. ನೀವು “ಎರಡನೇ ಸಲ’ ಚಿತ್ರದ ಟ್ರೇಲರ್ ನೋಡಿದ್ದರೆ ನಿಮಗೆ ಸಂಗೀತಾ ಭಟ್ ಅವರ ಬೋಲ್ಡ್‌ಸ್ಟೆಪ್ ಬಗ್ಗೆ ಗೊತ್ತಾಗುತ್ತದೆ. ಸಂಗೀತಾ ಭಟ್ ಬೋಲ್ಡ್ ಆಗಿ ಖಾಲಿ ಬೆನ್ನು ತೋರಿಸಿದ್ದಾರೆ. ಕನ್ನಡದ ನಟಿಯಾಗಿ ಈ ತರಹದ ಒಂದು ನಿರ್ಧಾರ ಮಾಡಿರುವ ಬಗ್ಗೆ ಅನೇಕರು ಅಚ್ಚರಿಪಟ್ಟಿದ್ದಾರೆ ಕೂಡಾ. ಆದರೆ, ಸಂಗೀತಾ ಭಟ್‌ಗೆ ಮಾತ್ರ ಈ ನಿರ್ಧಾರದ ಬಗ್ಗೆ ಯಾವುದೇ ಬೇಸರವಾಗಲೀ, ಅಂಜಿಕೆಯಾಗಲೀ ಇಲ್ಲ. ಕಾರಣ, ಚಿತ್ರದ ಪಾತ್ರ. ಒಂದು ಪಾತ್ರವನ್ನು ಒಪ್ಪಿಕೊಂಡ ಮೇಲೆ ಅದು ಬಯಸಿದ್ದನ್ನು ನೀಡೋದು ಕಲಾವಿದರ ಕರ್ತವ್ಯ ಎಂದು ನಂಬಿದವರು ಸಂಗೀತಾ ಭಟ್. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಗುರುಪ್ರಸಾದ್ ತೀರ್ಮಾನದ ಮೇಲಿನ ನಂಬಿಕೆ. “ಬೆನ್ನು ಎಕ್ಸ್‌ಫೋಸ್ ಮಾಡಿರುವ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಏಕೆಂದರೆ ಆ ಸನ್ನಿವೇಶಕ್ಕೆ ಅದು ಬೇಕಿತ್ತು. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಗುರುಪ್ರಸಾದ್ ಅವರಿಗೆ ಸರಿಯಾದ ಆದ ಜಡ್ಜ್ಮೆಂಟ್ ಇದೆ. ಸುಖಾಸುಮ್ಮನೆ ಅವರು ಎಕ್ಸ್‌ಫೋಸ್ ಮಾಡಿಸೋದಿಲ್ಲ. ಅದೇ ಕಾರಣದಿಂದ ಧೈರ್ಯವಾಗಿ ಮಾಡಿದ್ದೇನೆ. ನನಗೆ ಅದರಿಂದ ಪ್ಲಸ್ ಆಯಿತೇ ಹೊರತು ಮೈನಸ್ ಏನೂ ಆಗಿಲ್ಲ’ ಎನ್ನುತ್ತಾರೆ ಸಂಗೀತಾ ಭಟ್.
Related Articles
Advertisement
ಗಾಂಧಿನಗರದಲ್ಲಿ ಬ್ರಾಂಡ್ ಮಾಡಿಬಿಡುವವರ ಸಂಖ್ಯೆ ಹೆಚ್ಚಿದೆ. ಒಂದು ಬಾರಿ ಬೋಲ್ಡ್ ಆಗಿ ಕಾಣಿಸಿಕೊಂಡರೆ ಮತ್ತೆ ಅಂತಹುದೇ ಪಾತ್ರವಿಟ್ಟುಕೊಂಡು ಬರುತ್ತಾರೆ. ಆದರೆ, ಸಂಗೀತಾ ಮಾತ್ರ ಮತ್ತೆ ಆ ತರಹ ಕಾಣಿಸಿಕೊಳ್ಳೋದಿಲ್ಲವಂತೆ. “ಸುಖಾಸುಮ್ಮನೆ ಬೋಲ್ಡ್ ಆದರೆ ಅದಕ್ಕೆ ಅರ್ಥವಿಲ್ಲ. ಪಾತ್ರ ಬಯಸಿದಾಗ ಮತ್ತು ಅದಕ್ಕೊಂದು ಅರ್ಥವಿದ್ದಾಗ ಮಾತ್ರ ಈ ತರಹದ ನಿರ್ಧಾರ ಮಾಡಬೇಕಾಗುತ್ತದೆ’ ಎನ್ನುವ ಮೂಲಕ ಬ್ರಾಂಡ್ ಆಗಲ್ಲ ಎನ್ನುತ್ತಾರೆ. ಮೊದಲೇ ಹೇಳಿದಂತೆ ಸಂಗೀತಾ ಭಟ್ ಚಿತ್ರರಂಗಕ್ಕೆ ಬಂದು ಏಳೆಂಟು ವರ್ಷ ಆಗಿದೆ. ಆದರೂ ಅವರಿಗೆ ದೊಡ್ಡ ಯಶಸ್ಸು, ಗುರುತಿಸಿಕೊಳ್ಳುವಂತ ಅವಕಾಶ ಸಿಕ್ಕಿಲ್ಲ. ಆ ಬೇಸರ ಕೂಡಾ ಸಂಗೀತಾಗಿದೆ. ಆ ಎಲ್ಲಾ ಬೇಸರಗಳನ್ನು ಮುಂದಿನ ಸಿನಿಮಾದ ಪಾತ್ರಗಳು ಮರೆಸುತ್ತವೆ ಎಂಬ ವಿಶ್ವಾಸವಿದೆ. ಇನ್ನು, ಸಿನಿಮಾ ಬಿಟ್ಟರೆ ಸಂಗೀತಾ ತಮ್ಮದೇ ಒಂದು ತಂಡದೊಂದಿಗೆ ಸ್ಟಾಂಡಪ್ ಕಾಮಿಡಿ ಸೇರಿದಂತೆ ಒಂದಷ್ಟು ಕಾರ್ಯ ಕ್ರಮಗಳನ್ನು ನಡೆಸಿಕೊ ಡುತ್ತಾರೆ. ಅವೆಲ್ಲವೂ ಅವರಿಗೆ “ಬ್ಯಾಕ್’ಬೋನ್ ಆಗಿವೆ.
– ರವಿಪ್ರಕಾಶ್ ರೈ