Advertisement

ಅರ್ಜಿ ವಿಚಾರಣೆಯಿಂದ ಹಿಂದಕ್ಕೆ 

11:51 AM Jul 29, 2017 | Team Udayavani |

ಬೆಂಗಳೂರು: ಗಿರಿನಗರದಲ್ಲಿ ಬಿಬಿಎಂಪಿಗೆ ಸೇರಿದೆ ಎನ್ನಲಾದ 2.600 ಚದರ ಅಡಿ ಸಿ.ಎ. ನಿವೇಶನವನ್ನು ಹೊಸನಗರ ರಾಮಚಂದ್ರಾಪುರದ ಶಾಖಾಮಠವು ಒತ್ತುವರಿ ಮಾಡಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಮುಖ್ಯನ್ಯಾಯಮೂರ್ತಿ ಎಸ್‌.ಕೆ ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ಹಿಂದೆ ಸರಿದಿದೆ.

Advertisement

ಈ ಸಂಬಂಧ ಜೆ.ಪಿ ನಗರದ ಎಂ.ಪವನ ಪ್ರಸಾದ್‌ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ  ಶುಕ್ರವಾರ ಮುಖ್ಯನ್ಯಾಯಮೂರ್ತಿ ಎಸ್‌.ಕೆ ಮುಖರ್ಜಿ ಹಾಗೂ  ಪಿ.ಎಸ್‌ ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಬಂದಿತ್ತು. ಆದರೆ ನ್ಯಾಯಪೀಠ, ಈ ಅರ್ಜಿ ವಿಚಾರಣೆಯನ್ನ ನಮ್ಮಲ್ಲಿನ ಒಬ್ಬರು ವೈಯಕ್ತಿಕ ಕಾರಣಗಳಿಂದ  ವಿಚಾರಣೆ ನಡೆಸಲು ಸಿದ್ಧರಿಲ್ಲ. ಹೀಗಾಗಿ  ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದೆ.

ರಾಮಚಂದ್ರಾಪುರ ಮಠವು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ 2.600 ಅಡಿ ನಿವೇಶನ  ಜಾವನ್ನು ಒತ್ತುವರಿ ಮಾಡಿಕೊಂಡಿದೆ.  ಹೀಗಾಗಿ ಈ ಸಿ.ಎ ಜಾಗವನ್ನು ವಾಪಾಸ್‌ ಪಡೆದುಕೊಳ್ಳಲು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ವಾದವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next