Advertisement

ಕೃಷಿ ಕಾನೂನು ಹಿಂದಕ್ಕೆ: ಶಿರಸಿಯಲ್ಲಿ ವಿಜಯೋತ್ಸವ

01:05 PM Nov 19, 2021 | Team Udayavani |

ಶಿರಸಿ: ದೇಶದಾದ್ಯಂತ ರೈತರ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮೂರು ಕೃಷಿ ಕಾನೂನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಭೂಮಿ ಹಕ್ಕು ಹೋರಾಟಗಾರರು ಶಿರಸಿಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿಕೊಂಡರು.

Advertisement

ಶಿರಸಿಯ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಮಾಲಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯಿದೆ ಹಿಂದಕ್ಕೆ ಪಡೆದಿರುವುದು ರೈತರ ಹೋರಾಟಕ್ಕೆ ದೊರಕಿರುವ ಐತಿಹಾಸಿಕ ಜಯವಾಗಿದೆ. ಹಿಂದೆ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಭಾರತಕ್ಕೆ ಇಂದು ಮತ್ತೆ ಕಾರ್ಪೊರೆಟ್ ಕಂಪನಿಯ ಮೂಲಕ ದೇಶದ ಆಡಳಿತ ರೈತರ ವ್ಯವಹಾರ ನಿಯಂತ್ರಿಸಲು ಸರಕಾರ ಹೊರಟಿರುವ ಕ್ರಮ ಖಂಡನೀಯವಾಗಿತ್ತು ಎಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಸಂದರ್ಭದಲ್ಲಿ ಹೇಳಿದರು.

15 ತಿಂಗಳುಗಳ ದೀರ್ಘ ರೈತ ಹೋರಾಟ ಸಂದರ್ಭದಲ್ಲಿ 357 ರೈತರು ಮೃತರಾಗಿದ್ದು, ಸಾವಿರಾರು ಸಂಖ್ಯೆಯ ರೈತರಿಗೆ ನಷ್ಟ ಉಂಟಾಗಿರುವುದಲ್ಲದೇ ಮತ್ತು ನಿರಪರಾಧಿ ರೈತರ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಕೇಸ್ ಹಿಂದಕ್ಕೆ ಪಡೆಯಲು ಹಾಗೂ ಸಂತ್ರಸ್ಥ ರೈತರಿಗೆ ಸೂಕ್ತ ಪರಿಹಾರ ನೀಡಲು ಈ ಸಂಧರ್ಭದಲ್ಲಿ ಆಗ್ರಹಿಸಿದರು.

ಇದನ್ನೂ ಓದಿ:ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು: ಸಿದ್ದರಾಮಯ್ಯ

Advertisement

ಈ ಸಂಧರ್ಭದಲ್ಲಿ ಲಕ್ಷ್ಮಣ ಮಾಳ್ಳಕ್ಕನವರ, ರಾಜು ನರೇಬೈಲ್, ತಿಮ್ಮ ಮರಾಠಿ, ಶಿವಪ್ಪ ಹಂಚಿನಕೇರಿ, ಅಬ್ದುಲ್ ಸಾಬ, ಇಬ್ರಾಹಿಂ ಇಸಳೂರು, ಗಣಪತಿ ನಾಯ್ಕ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next