Advertisement

ಚಿಕ್ಕಬಳ್ಳಾಪುರದಲ್ಲಿ ಇತಿಹಾಸ ಸೃಷ್ಟಿಸಿದ ಬಚ್ಚೇಗೌಡ

01:38 PM May 25, 2019 | Team Udayavani |

ದೇವನಹಳ್ಳಿ: ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ಗೆಲ್ಲುವುದರ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಾದ ದೇವನಹಳ್ಳಿ, ಹೊಸಕೋಟೆ, ದೆಡ್ಡಬಳ್ಳಾಪುರ, ನೆಲಮಂಗಲ ಹೊಂದಿದ್ದು, ಈ ತಾಲೂಕುಗಳಲ್ಲೂ ಬಿಜೆಪಿಗೆ ಹೆಚ್ಚಿನ ಮತಗಳು ಬರುವಂತಾಗಿದೆ. ದೇವನಹಳ್ಳಿಯಲ್ಲಿ ಬಿಜೆಪಿಗೆ 83,966, ಕಾಂಗ್ರೆಸ್‌ಗೆ 73,382 ಮತಗಳು ಲಭಿಸಿದ್ದು,10,584 ಅಂತರ ಬಿಜೆಪಿಗೆ ಬಂದಿದೆ.

Advertisement

ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿಗೆ 87,967, ಕಾಂಗ್ರೆಸ್‌ ಅಭ್ಯರ್ಥಿಗೆ 67,403 ಮತಗಳು ಲಭಿಸಿವೆ. 20 ಸಾವಿರ ಅಂತರದಲ್ಲಿ ಬಿಜೆಪಿ ಮುನ್ನಡೆಯಾಗಿದೆ. ನೆಲಮಂಗಲದಲ್ಲಿ ಬಿಜೆಪಿಗೆ 83,529, ಕಾಂಗ್ರೆಸ್‌ಗೆ 63,983 ಮತಗಳು ಲಭಿಸಿದ್ದು, 19,546 ಅಂತರ ದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಹೊಸಕೋಟೆಯಲ್ಲಿ ಬಿಜೆಪಿಗೆ 95,702 ಮತಗಳು ಬಂದಿದ್ದು, ಕಾಂಗ್ರೆಸ್‌ಗೆ 85,552 ಮತಗಳು ಬಂದಿದೆ. 10,150 ಮತಗಳ ಅಂತರದಲ್ಲಿ ಮತ್ತೆ ಬಿಜೆಪಿ ಮುನ್ನಡೆಯಲ್ಲಿದೆ.

ಮೋದಿ ಅಲೆ: ಕಳೆದ ಬಾರಿ ಬಿ.ಎನ್‌. ಬಚ್ಚೇಗೌಡ 10ಸಾವಿರ ಅಂತರದಲ್ಲಿ ಸೋಲು ಕಂಡಿದ್ದರು. ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧಿಸಿದ್ದರಿಂದ ಮತಗಳು ವಿಭಜನೆಯಾಗಿ ಸೋಲು ಕಂಡಿದ್ದರು. ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದರ ಮೂಲಕ ವಿಜಯದ ಬಾವುಟ ಹಾರಿಸಿದೆ. ವೀರಪ್ಪ ಮೊಯ್ಲಿಯವರು ಕಳೆದ ಹತ್ತು ವರ್ಷಗಳಿಂದ ಗೆಲ್ಲುತ್ತಲೇ ಬರುತ್ತಿದ್ದರು. ಹ್ಯಾಟ್ರಿಕ್‌ ಆಸೆ ಇಟ್ಟು ಕೊಂಡಿದ್ದರು. ಬಚ್ಚೇಗೌಡರು ಕಳೆದ ಬಾರಿ ಸೋತಿರುವ ಅನುಕಂಪದ ಅಲೆ ಮತ್ತು ನರೇಂದ್ರ ಮೋದಿಯವರ ಅಲೆ ಯಿಂದ ಈ ಬಾರಿ ಗೆಲುವು ಸಾಧಿಸಿದ್ದಾರೆ.

ಮೊದಲ ಗೆಲುವು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಕಾಂಗ್ರೆಸ್‌ ಗೆಲ್ಲುತ್ತಲೇ ಬರುತ್ತಿದೆ. ಕೃಷ್ಣ ರಾವ್‌ ಮತ್ತು ಆರ್‌.ಎಲ್‌.ಜಾಲಪ್ಪ ಗೆದ್ದಿದ್ದರು. ತದನಂತರ ವೀರಪ್ಪ ಮೊಯ್ಲಿ ಎರಡು ಬಾರಿ ಗೆದ್ದಿದ್ದರು. ಬಿಜೆಪಿ ಇಲ್ಲಿ ಗೆದ್ದಿರುವ ಉದಾಹರಣೆಯೇ ಇರಲಿಲ್ಲ. ಇದೇ ಮೊದಲ ಬಾರಿಗೆ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಒಕ್ಕಲಿಗ ಮತಗಳು ನಿರ್ಣಾಯಕವಾಗಿದ್ದವು. ಒಕ್ಕಲಿಗ ಮತಗಳು ಸಹ ಲಭಿಸಿದೆ. ಎಸ್‌ಸಿ, ಎಸ್‌ಟಿ ಹಾಗೂ ಇತರೆ ಮತಗಳು ಸಹ ಬಂದಿರುವುದು ಗೆಲುವಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳ ಬಲವೂ ಬಿ.ಎನ್‌. ಬಚ್ಚೇಗೌಡರಿಗೆ ಲಬಿಸಿರುವುದರಿಂದ ಗೆಲುವು ಇನ್ನಷ್ಟು ಸುಲಭವಾಗಿದೆ.

ಖಾತೆ ತೆರೆದ ಬಿಜೆಪಿ: ಜನರು ಈ ಬಾರಿ ಕಳೆದ ಹತ್ತು ವರ್ಷಗಳಿಂದ ವೀರಪ್ಪ ಮೊಯ್ಲಿ ಅವರನ್ನು ಗೆಲ್ಲಿಸಿ ಕೊಂಡು ಬರುತ್ತಿದ್ದರು. ಈ ಬಾರಿ ಬದಲಾವಣೆ ಬಯಸಿದ್ದರು. ಜಿಲ್ಲೆಯ ಎಲ್ಲಾ ಕ್ಷೇತ್ರ ಗಳಲ್ಲೂ ಬಿಜೆಪಿಗೆ ಲೀಡ್‌ ದೊರೆತಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಐದು ಶಾಸಕರು, ಜೆಡಿಎಸ್‌ ಇಬ್ಬರು ಶಾಸಕರು, ಕೇವಲ ಬಿಜೆಪಿ ಶಾಸಕರು ಒಬ್ಬರೇ ಇದ್ದಾರೆ. ಆದರೆ 1.81ಲಕ್ಷ ಮತಗಳಅಂತರದಲ್ಲಿ ಗೆಲುವು ಸಾಧಿಸಿರುವುದು ಇತಿಹಾಸ ಸೃಷ್ಟಿಯಾದಂತಾಗಿದೆ. ಇದೀಗ ಬಿಜೆಪಿ ಖಾತೆ ತೆರೆದಿದೆ. ಹೊಸಕೋಟೆವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಹಾಗೂ ಅವರ ಪುತ್ರ ಸೋತಿದ್ದರು.

Advertisement

ಕಳೆದ ಲೋಕಸಭಾ ಚುನಾವಣೆಯಲ್ಲೂಸಹ ಸೋಲನ್ನು ಅನುಭವಿಸಿದ್ದರು. ಈ ಬಾರಿ ಜನರು ಕೈಹಿಡಿದಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಆಶೀರ್ವಾದದಿಂದ ಗೆದ್ದಿದ್ದೇನೆ. ದೇಶಕ್ಕಾಗಿ ಮೋದಿ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನಾನು ಎಂಬ ಘೋಷಣೆಯಡಿ ಜನರಲ್ಲಿ ಮತಯಾಚನೆ ಮಾಡಿದ್ದೆ. ಅದೇ ರೀತಿ, ಜನರು ಇಲ್ಲಿ ನನ್ನನ್ನು ಗೆಲ್ಲಿಸುವುದರ ಮೂಲಕ ದೇಶದಲ್ಲಿ ನಮ್ಮ ಲೆಕ್ಕಾಚಾರಕ್ಕೂ ಮೀರಿ ಹೆಚ್ಚಿನ ಮತ ನೀಡಿದ್ದಾರೆ. ಎಲ್ಲಾ ಮತದಾರರಿಗೂ ನನ್ನ ಕೃತಜ್ಞತೆಸಲ್ಲಿಸುತ್ತೇನೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮೊದಲ ಆದ್ಯತೆಯಾಗಿ ಕುಡಿವ ನೀರು, ಮೂಲಭೂತ ಸೌಕರ್ಯಕ್ಕೆಹೆಚ್ಚಿನ ಒತ್ತು ಕೊಡಲಾಗುವುದು ಎಂದು ನೂತನ ಸಂಸದ ಬಿ.ಎನ್‌.ಬಚ್ಚೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next