Advertisement

ಸಿಂಗಲ್ಲಾಗಿದ್ರೆ ಲೈಫ್ ಜಿಂಗಾಲಾಲಾ

06:00 AM Aug 07, 2018 | |

ಜೋಡಿ ಹಕ್ಕಿಗಳನ್ನು ನೋಡಿದಾಗ ಮನಸ್ಸು ಮುದದಿಂದ ಪುಟಿಯತೊಡಗುತ್ತದೆ. ಕಾಲೇಜಿನ ಜೋಡಿಹಕ್ಕಿಗಳು ಲೈಬ್ರರಿಯಲ್ಲಿ ಅಂಟಿಕೊಂಡು ಕೂತಿರುವಾಗ, ಮೈದಾನದಲ್ಲಿ ಕೈ ಕೈ ತಾಗಿಸಿಕೊಂಡು ನಡೆಯುವಾಗ, ಕ್ಯಾಂಟೀನ್‌ನಲ್ಲಿ ಒಟ್ಟಿಗೆ ಕಾಫಿ ಹೀರುವುದನ್ನು ನೋಡಿದಾಗ ಯಾರಿಗೇ ಆದರೂ ತಮಗೂ ಒಬ್ಬಳು ಗರ್ಲ್ಫ್ರೆಂಡ್‌ ಅಥವಾ ಬಾಯ್‌ಫ್ರೆಂಡ್‌ ಇರಬಾರದಿತ್ತೆ ಎಂದು ಅನ್ನಿಸುವುದು ಸಹಜ. ಆದರೆ ಹಾಗೆ ಅಂದುಕೊಳ್ಳುವಾಗ ಸಿಂಗಲ್‌ ಆಗಿರುವುದರ ಉಪಯೋಗಗಳಾವುವೂ ನಮ್ಮ ನೆನಪಿಗೆ ಬರುವುದೇ ಇಲ್ಲ. ನಮಗೆ ಕಾಣುವುದು ಜೋಡಿಹಕ್ಕಿಗಳು ಸಂತಸದಿಂದ ಹಕ್ಕಿಯಂತೆ ಸ್ವಚ್ಚಂದವಾಗಿ ಹಾರಿಕೊಂಡಿರುವ ಚಿತ್ರಣ. ಆದರೆ ವಿದ್ಯಾರ್ಥಿ ಜೀವನದಲ್ಲಿ ಸಿಂಗಲ್‌ ಆಗಿರುವುದರಿಂದ ಏನೇನೆಲ್ಲಾ ಉಪಯೋಗಗಳಿವೆ ಗೊತ್ತೇ?

Advertisement

1. ನನ್ನ ಹಾಡು ನನ್ನದು
“ಸುಪ್ರಭಾತ’ ಸಿನಿಮಾದಲ್ಲಿ ವಿಷ್ಣುವರ್ಧನ್‌ ಹೀಗೆ ಹಾಡು ಹೇಳುತ್ತಾ ಲೈಫ್ ಎಂಜಾಯ್‌ ಮಾಡುವುದನ್ನು ನೋಡಿರುತ್ತೀರಿ. ಅದರರ್ಥ ಸಿಂಗಲ್‌ ಆಗಿರುವುದೆಂದರೆ ಸ್ವಚ್ಚಂದವಾಗಿರುವುದು. ರಿಲೇಷನ್‌ಶಿಪ್‌ನಲ್ಲಿ ಇರುವುದು ಎಂದರೆ ಜವಾಬ್ದಾರಿ ಹೊರುವುದು ಎಂದರ್ಥ. ತಮ್ಮ ಮಕ್ಕಳು ಓದಿಕೊಳ್ಳಲಿ ಎಂದು ಮನೆಯವರೇ ನಮಗೆ ಮನೆಯ ಯಾವ ತಾಪತ್ರಯಗಳನ್ನು ಗೊತ್ತಾಗದೆ ಇರುವಂತೆ ನೋಡಿಕೊಳ್ಳುತ್ತಾರೆ. ಮನೆಗೆ ಸಂಬಂಧಿಸಿದ ಯಾವ ಜವಾಬ್ದಾರಿಯನ್ನೂ ಹೊರಿಸುವುದಿಲ್ಲ. ಇಂಥಾ ಸಮಯದಲ್ಲಿ ಸುಖಾಸುಮ್ಮನೆ ನಮ್ಮ ಕೈಯಾರೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳೋದು ಎಷ್ಟು ಸರಿ?

2. ಸಿಂಗಲ್‌ ಆಗಿರುವವರೆಲ್ಲರೂ ಅರ್ಜುನರು
ಬಿಲ್ವಿದ್ಯೆ ಕಲಿಯುವಾಗ ಸಹಪಾಠಿಗಳೆಲ್ಲರೂ ಗುರು ಹೇಳಿದ ಗಿಣಿಗೆ ಗುರಿ ಇಡಲು ಪರಿತಪಿಸಿದರೆ, ಅರ್ಜುನ ಮಾತ್ರ ಗಿಣಿಯ ಕಣ್ಣಿಗೆ ಗುರಿಯಿಟ್ಟ ಕತೆ ನೆನಪಿದೆ ತಾನೇ? ಸಿಂಗಲ್‌ ಆಗಿ ಇರುವವರೆಲ್ಲರೂ ಅರ್ಜುನರೇ. ಏಕೆಂದರೆ, ಅವರ ತಲೆಯಲ್ಲಿ ಗುರಿಯೊಂದು ಬಿಟ್ಟು ಬೇರೇನೂ ಇರುವುದಿಲ್ಲ. ರಿಲೇಶನ್‌ಶಿಪ್‌ನಲ್ಲಿದ್ದಾಗ ತಲೆಯಲ್ಲಿ ಹಲವಾರು ಆಲೋಚನೆಗಳೇ ತುಂಬಿರುತ್ತವೆ. ಆಗ ನಾವು ಗುರಿಯಿಂದ ದೂರವಾಗುವ ಅಪಾಯವಿರುತ್ತದೆ.

3. ಸ್ಮಾರ್ಟ್‌ಫೋನ್‌ ಭೂತದಿಂದ ದೂರವಿರಬಹುದು
ವಿದ್ಯಾರ್ಥಿಜೀವನವನ್ನು ಸ್ಮಾರ್ಟ್‌ಫೋನ್‌ ಭೂತ ಹಾಳು ಮಾಡುತ್ತಿದೆ  ಎನ್ನುವುದು ಹಳೆಯ ದೂರು. ಅದನ್ನು ಬಳಸಿಕೊಳ್ಳುವುದರ ಮೇಲೆ, ಒಳಿತು- ಕೆಡುಕು ನಿಂತಿದೆ ಎನ್ನುವುದು  ಅಷ್ಟೇ ಸತ್ಯವಾದ ಮಾತು. ರಿಲೇಶನ್‌ಶಿಪ್‌ನಲ್ಲಿ ಇದ್ದಾಗ ಮೊದ ಮೊದಲು ಫೋನ್‌ ಸಂಭಾಷಣೆ, ಸಂದೇಶಗಳು ಥ್ರಿಲ್‌ ಕೊಡುತ್ತೆ. ಆಮೇಲೆ ನಿಧಾನವಾಗಿ ಸಂದೇಶ ಕಳಿಸಲೇಬೇಕಾದ ಅನಿವಾರ್ಯತೆ ಜೊತೆಯಾಗುತ್ತೆ. ಅದೂ ಒಂದು ಕೆಲಸದಂತೆ ತೋರತೊಡಗುತ್ತೆ. ಒಂದು ವೇಳೆ ಕರೆಗಳಿಗೆ, ಸಂದೇಶಗಳಿಗೆ ರಿಪ್ಲೆ„ ಮಾಡಲಿಲ್ಲ ಅಂತಿಟ್ಟುಕೊಳ್ಳಿ, ಒಂದು ಮಹಾಯುದ್ಧ ಆಗೋದು ಗ್ಯಾರೆಂಟಿ. 

4. ಜಗತ್ತೇ ನಿಮ್ಮ ಫ್ಯಾಮಿಲಿ
ಸಿಂಗಲ್‌ ಆಗಿದ್ದಾಗ ಇಡೀ ಪ್ರಪಂಚವೇ ನಿಮ್ಮ ಫ್ಯಾಮಿಲಿ ಆಗಿರುತ್ತೆ. ಎಲ್ಲರೊಂದಿಗೂ ನೀವು ಟಚ್‌ನಲ್ಲಿರುತ್ತೀರಿ. ಎಲ್ಲರಿಗೂ ನೀವು ಬೇಕಾದವರಾಗಿರುತ್ತೀರಿ. ಸ್ನೇಹಿತರ ವಲಯದಲ್ಲಂತೂ ಸಿಂಗಲ್‌ಗ‌ಳಿಗೆ ಮರ್ಯಾದೆ, ಗೌರವ ಹೆಚ್ಚು. ಜೋಡಿಹಕ್ಕಿಗಳಿಗೆ ಸಿಗುವ ಗೌರವ ತಾತ್ಕಾಲಿಕವಾದುದು. ಕರೆದಾಗ ಬರುವ, ನೆರವು ಬೇಕೆಂದಾಗ ಮಾಡುವವರು ಸಿಂಗಲ್‌ಗ‌ಳೇ ಆಗಿರುವುದರಿಂದ ಸ್ನೇಹಿತರ ನಡುವೆ ಬಾಂಧವ್ಯ ಬೆಳೆಯುವುದು. ಜೋಡಿಹಕ್ಕಿಗಳು ಸ್ವಾರ್ಥಿಗಳಾಗುತ್ತಾರೆ ಎನ್ನುವುದು ಗುಟ್ಟೇನಲ್ಲ, ಅದು ತಪ್ಪೂ ಅಲ್ಲ. ಆದರೆ ವಿದ್ಯಾರ್ಥಿ ಜೀವನದಲ್ಲಿಯೇ ಆ ಹಂತವನ್ನು ತಂದುಕೊಳ್ಳುವುದು ಸರಿಯೇ ಎಲ್ಲರೂ ಯೋಚಿಸಬೇಕಾದ ವಿಷಯ. 

Advertisement

5. ಶ್ರೀಮಂತರಾಗುತ್ತೀರಿ
“ಟೈಮ್‌ ಈಸ್‌ ಮನಿ’ ಎಂಬ ಘೋಷವಾಕ್ಯವನ್ನು ಕೇಳಿರುತ್ತೀರಿ. ಸಿಂಗಲ್‌ ಆಗಿರುವವರ ಬಳಿ ತುಂಬಾ ಸಮಯ ಮಿಗುತ್ತದೆ. ಅದರರ್ಥ ಸಿಂಗಲ್‌ ಆಗಿರುವವರೆಲ್ಲರೂ ಶ್ರೀಮಂತರು ಎಂದಾಯ್ತಲ್ಲವೆ? ಇನ್ನೊಂದು ವಿಷಯ ಗೊತ್ತಾ? “ಟೈಮ್‌ ಈಸ್‌ ಮನಿ’ ಎನ್ನುವ ಘೋಷ ವಾಕ್ಯ ಜಗತ್ತಿನ ಅಷ್ಟೂ ಶ್ರೀಮಂತರದು. ಬಹುತೇಕ ಕೋಟ್ಯಧಿಪತಿಗಳು ತಮ್ಮ ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದು ಸಿಂಗಲ್‌ ಆಗಿದ್ದಾಗಲೇ. ಉದಾಹರಣೆಗೆ, ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌. ಆತ ಫೇಸ್‌ಬುಕ್‌ ಸೃಷ್ಟಿಸಿದ್ದು ತನ್ನ ಗರ್ಲ್ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಂಡ ನಂತರ!

ಹವನ

Advertisement

Udayavani is now on Telegram. Click here to join our channel and stay updated with the latest news.

Next