ಚಿಕ್ಕಬಳ್ಳಾಪುರ: ನಾನು ರಾಜಕಾರಣಕ್ಕೆ ಹೊಸಬ ಅಲ್ಲ . ನನ್ನನ್ನು ಯಾರು ಏನು ಮಾಡಕ್ಕೂ ಆಗುವುದಿಲ್ಲ. ಎಂಟಿಬಿ ನಾಗರಾಜ್ ನೀಡಿರುವ ದೂರಿಗೆ ನಾನು ಹೆದರುವನಲ್ಲ. ಅದಕ್ಕೆಲ್ಲಾ ಡೋಂಟ್ ಕೇರ್ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ವೇಗೌಡ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ದಿಶಾ ಸಭೆಯ ಬಳಿಕ ಸುದ್ದಿಗೋಷ್ಢಿಯನ್ನು ಉದ್ದೇಶಿಸಿ ಮಾತನಾಡಿದರು.
ಮತದಾರರು ಇಂದು ಭ್ರಷ್ಟಾಚಾರ ಆಗಿದ್ದಾರೆಂದು ಉಪ ಚುನಾವಣೆಯಲ್ಲಿ ಸೋತ ಬಳಿಕ ಕೋಲಾರದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೊಸಕೋಟೆ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾರು ಭ್ರಷ್ಟರು ಅಗಿಲ್ಲ. ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟರು ಅಗಿಲ್ಲವೇ ಎಂದು ಬಚ್ಚೇಗೌಡ ಪ್ರಶ್ನಿಸಿದರು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಮತದಾರರನ್ನು ಅವಮಾನಿಸುವುದು ಸರಿಯಲ್ಲ ಎಂದರು. ಜನ ಸ್ವಾಭಿಮಾನ ಎತ್ತಿ ಹಿಡಿದು ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿರಬಹುದು. ಅಂದ ಮಾತ್ರಕ್ಕೆ ಮತದಾರರು ಹೇಗೆ ಭ್ರಷ್ಡರು ಆಗುತಾರೆಂದು ಸಂಸದ ಬಚ್ಚೇಗೌಡ ಪ್ರಶ್ನೆ ಮಾಡಿದರು.
ಮಾಜಿ ಸಚಿವ ಎಂಟಿಬಿ ನಾಗರಾಜ್, ತಮ್ಮ ವಿರುದ್ದ ಸಿಎಂಗೆ ದೂರು ಕೊಟ್ಟಿರುವ ಕುರಿತು ಕೇಳಿದ ಪ್ರಶ್ನಗೆ ಖಾರವಾಗಿಯೆ ಪ್ರಶ್ನಿಸಿದ ಬಚ್ಚೇಗೌಡ ಕೊಟ್ಟರೆ ಕೊಡಲಿ ಬಿಡಿ. ನನ್ನನ್ನು ಯಾರು ಏನು ಮಾಡಕ್ಕೆ ಅಗಲ್ಲ. ಕ್ಷೇತ್ರದ ಜನ ಪ್ರೀತಿಯಿಂದ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ತಂದುಕೊಟ್ಟಿದ್ದಾರೆ ಎಂದರು. ನಾನು ರಾಜಕಾರಣಕ್ಕೆ ಹೊಸಬ ಅಲ್ಲ ಎಂದರು. ನನ್ನ ವಿರುದ್ದ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತಾ ಇಲ್ಲ ಪಕ್ಷದಿಂದ ಉಚ್ಚಾಟನೆ ಮಾಡುತ್ತಾ ಮಾಡಲಿ. ಅವರಿಗೆ ನಷ್ಟ ಎಂದರು.