ಇಟಾ(ಉತ್ತರಪ್ರದೇಶ): ಎರಡೂವರೆ ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಗು ಕೊನೆಯುಸಿರೆಳೆದ ಘಟನೆಯಲ್ಲಿ ನಕಲಿ ವೈದ್ಯನ ವಿರುದ್ಧ ಎಫ್ ಐಆರ್ ದಾಖಲಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಕುಷ್ಟಗಿ: ಕೆಲಸ ಆರಂಭದ ಮುನ್ನ ರಾಷ್ಟ್ರಗೀತೆ; ಸಮಯಕ್ಕೆ ಸರಿಯಾಗಿ ಪೌರ ಕಾರ್ಮಿಕರು ಹಾಜರ್
ತಿಲಕ್ ಸಿಂಗ್ ಎಂಬ ನಕಲಿ ವೈದ್ಯ ಮಗುವಿಗೆ ಸರ್ಜರಿ ನಡೆಸಿದ ನಂತರ ಭಾರೀ ಪ್ರಮಾಣದಲ್ಲಿ ರಕ್ತ ಹರಿದು ಹೋದ ಪರಿಣಾಮ ಕೊನೆಯುಸಿರೆಳೆದಿತ್ತು. ಘಟನೆ ನಡೆದ ನಂತರ ಮಗುವಿನ ಬಗ್ಗೆ ಪೋಷಕರಿಗೆ ಯಾವ ಮಾಹಿತಿಯನ್ನೂ ನೀಡದೆ ಕಾಲ್ಕಿತ್ತಿರುವುದಾಗಿ ಆರೋಪಿಸಲಾಗಿದೆ.
ಎರಡೂವರೆ ವರ್ಷದ ಮಗುವಿನ ಪ್ರಕರಣ ಸಂಬಂಧ ತಿಲಕ್ ಸಿಂಗ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಉಮೇಶ್ ಚಂದ್ರ ತ್ರಿಪಾಠಿ ತಿಳಿಸಿರುವುದಾಗಿ ವರದಿಯಾಗಿದೆ.