Advertisement

Manipal ಕಸ್ತೂರ್ಬಾ ಆಸ್ಪತ್ರೆ ; ಎಂಡೋಸ್ಕೋಪಿಕ್‌ ಕಾರ್ಯವಿಧಾನ ಯಶಸ್ವಿ

12:23 AM Jul 24, 2024 | Team Udayavani |

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನವೀನ ಮಾದರಿಯ ಎಂಡೋಸ್ಕೋಪಿಕ್‌ ಕಾರ್ಯ ವಿಧಾನವನ್ನು ನಡೆಸಲಾಯಿತು.

Advertisement

ಎಂಡೋಲ್ಟ್ರಾಸೌಂಡ್‌-ಗೈಡೆಡ್‌ ಗ್ಯಾಸ್ಟ್ರೋಜೆಜುನೋಸ್ಟೊಮಿ ಕಾರ್ಯ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮೊದಲ ಆಸ್ಪತ್ರೆ ಇದಾಗಿದೆ. ತೀವ್ರ ರೀತಿಯ ಗ್ಯಾಸ್ಟ್ರಿಕ್‌ ಔಟ್ಲೆಟ್‌ ಅಡಚಣೆಯಿಂದ ಬಳಲುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರಿಗೆ ಇದನ್ನು ಮಾಡಲಾಯಿತು.

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಪ್ರಾಧ್ಯಾಪಕ ಡಾ| ಶಿರನ್‌ ಶೆಟ್ಟಿ ನೇತೃತ್ವದ ವೈದ್ಯಕೀಯ ತಂಡವು ಕನಿಷ್ಟ ಅರಿವಳಿಕೆಯಲ್ಲಿ ಈ ಅತ್ಯಾಧುನಿಕ ವಿಧಾನವನ್ನು ಕೈಗೊಳ್ಳಲು ನಿರ್ಧರಿಸಿತು. ಇದು ಜಪಾನಿನ ಎಂಡೋಸ್ಕೋಪಿಸ್ಟ್‌ಗಳ ಆವಿಷ್ಕಾರವಾಗಿದೆ. ಈ ಕಾರ್ಯವಿಧಾನದ ಮೂಲಕ ಹೊಟ್ಟೆಯನ್ನು ಸಣ್ಣ ಕರುಳಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಆಹಾರ ಸೇವಿಸಲು ಇದ್ದ ಅಡಚಣೆಯನ್ನು ತಪ್ಪಿಸಲಾಗುತ್ತದೆ ಮತ್ತು ರೋಗಿಯು ಮೌಖಿಕವಾಗಿ ಆಹಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಗಣೇಶ್‌ ಭಟ್‌, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಅವರು ವೈದ್ಯರ ತಂಡ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next