Advertisement

Shankarpura ಸಾಲ್ಮರ ಕೃಷ್ಣವೇಣಿ ಆಶ್ರಯಧಾಮ, ಆಯುರ್ವೇದ ಆಸ್ಪತ್ರೆ ಉದ್ಘಾಟನೆ

12:29 AM Jul 16, 2024 | Team Udayavani |

ಉಡುಪಿ: ಸಾಲ್ಮರ ಗೋವಿಂದ ಭಟ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಶಂಕರಪುರ ಸಾಲ್ಮರದಲ್ಲಿ ನೂತನವಾಗಿ ನಿರ್ಮಿಸಿರುವ ಕೃಷ್ಣವೇಣಿ ಆಶ್ರಯಧಾಮ ಹಾಗೂ ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನೆ ಸೋಮವಾರ ನಡೆಯಿತು.

Advertisement

ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಕಟ್ಟಡವನ್ನು ಉದ್ಘಾಟಿಸಿ, ಆಶ್ರಯಧಾಮ ವಿದೇಶಿಯರ ಕಲ್ಪನೆಯಾದರೂ ಪ್ರಸ್ತುತ ನಮ್ಮ ದೇಶಕ್ಕೂ ಇದರ ಆವಶ್ಯಕತೆ ಎದುರಾಗಿದೆ.

ತಂದೆ ಮಾಡಿದ ಕಸುಬನ್ನೇ ಮಕ್ಕಳು ಮುಂದುವರಿಸಿಕೊಂಡು ಬರುತ್ತಿದ್ದರು. ಆದರೆ ಪ್ರಸ್ತುತ ಮಕ್ಕಳು ಉದ್ಯೋಗ ನಿಮಿತ್ತ ಬೇರೆ ಬೇರೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಹಿರಿಯರಿಗೆ ಬೇಕಾದ ಎಲ್ಲ ವ್ಯವಸ್ಥೆಗಳು ಇರುವುದಿಲ್ಲ.

ಆದುದರಿಂದ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಆಶ್ರಯಧಾಮ ಅನಿರ್ವಾಯವಾಗಿದೆ. ಆಶ್ರಯಧಾಮದ ಸ್ಥಾಪನೆಯು ಸಮಾಜಸೇವೆಯೊಂದಿಗೆ ದೇವರ ಕಾರ್ಯವನ್ನೂ ಮಾಡಿದಂತಾಗಿದೆ ಎಂದು ಆಶೀ ರ್ವ ಚನ ನೀಡಿದರು.

ಸಾಲ್ಮರ ಗೋವಿಂದ ಭಟ್‌ ಫ್ಯಾಮಿಲಿ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಹರಿದಾಸ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತ ನಾಡಿ, ಮನೆಯಿಂದ ಹೊರ ಬಿದ್ದವರು ಮಾತ್ರ ಆಶ್ರಮದಲ್ಲಿ ಇರಬೇಕು ಎಂದೇನೂ ಇಲ್ಲ. ಆದರೆ ತನ್ನ ಏಕಾಂಗಿ ಜೀವನದ ಮಧ್ಯದಲ್ಲೂ ಸಾಧನೆ ಮಾಡುತ್ತೇವೆ ಎನ್ನುವ ಕನಸು ಕಾಣುವವರಿಗೆ ಈ ಆಶ್ರಯಧಾಮ ಒಂದು ನೆಲ ಅಥವಾ ತಳಗಟ್ಟು ಆಗುತ್ತದೆ. ಅವರ ಬದುಕಿಗೆ ಒಂದು ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಈ ಆಶ್ರಯಧಾಮವನ್ನು ಗೋವಿಂದ ಭಟ್‌ ಫ್ಯಾಮಿಲಿ ಟ್ರಸ್ಟ್‌ ಸ್ಥಾಪಿಸಿದೆ.

ಪ್ರಾಯ ತನ್ನ ಮಿತಿಯನ್ನು ಮೀರಿದಾಗಲೂ ಬದುಕಿನ ಜೀವನೋತ್ಸಾಹಗಳಿಗೆ ಈ ಆಶ್ರಯಧಾಮ ಶಕ್ತಿಯನ್ನು ಕೊಡಬಹುದು. ಸಾಮಾನ್ಯವಾಗಿ ಬದುಕಿನಲ್ಲಿ ನೋವುಂಡು ಬಂದ ಜನರಿಗೆ ಆಶ್ರಯ ನೀಡಿ ಆತ್ಮಶಕ್ತಿಯನ್ನು ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ನಿಟ್ಟೆ ಎನ್‌ಎಂಎಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್‌ ಎನ್‌. ಚಿಪ್ಳೂಣರ್‌, ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್‌ ಪೂಜಾರಿ, ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಮುಖ್ಯ ವೈದ್ಯಾಧಿಕಾರಿ ಡಾ| ಕೆ.ಲಕ್ಷ್ಮೀಶ್ ಉಪಾಧ್ಯಾಯ, ಅಮರನಾಥ್‌ ಭಟ್‌, ಗುರುರಾಜ್‌ ಭಟ್‌ ಉಪಸ್ಥಿತರಿದ್ದರು.

ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯ ಸಿಇಒ ಡಾ| ಐ. ರಮೇಶ್‌ ಮಿತ್ತಂತಾಯ ನಿರೂಪಿಸಿ, ಪದ್ಮನಾಭ ಭಟ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next