Advertisement

ಬೆಳಗಾವಿ : ಗದ್ದೆಯಲ್ಲಿ ಹೆಣ್ಣು ಮಗು ಬಿಸಾಕಿದ ಪಾಪಿಗಳು

06:27 PM Sep 24, 2021 | Team Udayavani |

ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಮನಕಲಕುವಂತಹ ಘಟನೆ ನಡೆದಿದೆ. ಏನೂ ಅರಿಯದ ಕಂದಮ್ಮನನ್ನು ಗದ್ದೆಯಲ್ಲಿ ಬಿಸಾಕಿ ಹೋಗಿದ್ದಾರೆ.

Advertisement

ಅಡಹಳ್ಳಿ ಸಮೀಪದ ಹಲ್ಯಾಳ ಗ್ರಾಮದ ಜಾಬಗೌಡರ ಗದ್ದೆಯಲ್ಲಿ ಹೆಣ್ಣು ಮಗುವನ್ನು ಬಿಸಾಕಿ ಹೋದ ಘಟನೆ ಗುರುವಾರ ಸಂಜೆ ನಡೆದಿದೆ. ಒಂದು ವರ್ಷದ ಹೆಣ್ಣು ಮಗುವಾಗಿದ್ದು, ಇದು ಯಾರದ್ದು ಎಂದು ತಿಳಿದುಬಂದಿಲ್ಲ.

ಈ ಮಗುವಿನ ಹೊಟ್ಟೆ ಮೇಲೆ ಸುಟ್ಟ ಗುರುತುಗಳು ಪತ್ತೆಯಾಗಿದ್ದು, ಮಗುವಿಗೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಕುರಿತು ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next