ನವದೆಹಲಿ; ಮಕ್ರೋವೇವ್ ಓವನ್ ನೊಳಗೆ ಎರಡು ತಿಂಗಳ ಹೆಣ್ಣುಮಗುವಿನ ಶವ ಪತ್ತೆಯಾಗಿರುವ ಘಟನೆ ದಕ್ಷಿಣ ದೆಹಲಿಯ ಚಿರಾಗ್ ದಿಲ್ಲಿ ಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೇಕೆದಾಟು ಕುರಿತ ತಮಿಳುನಾಡು ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ: ಕುಮಾರಸ್ವಾಮಿ
ಸೋಮವಾರ (ಮಾರ್ಚ್ 21) ಮಧ್ಯಾಹ್ನ 3.15ಕ್ಕೆ ಮಗುವಿನ ಸಾವಿನ ಕುರಿತ ಮಾಹಿತಿ ಬಂದಿರುವುದಾಗಿ ತಿಳಿಸಿರುವ ಡೆಪ್ಯುಟಿ ಕಮಿಷನರ್ ಬೆನಿಟಾ ಮೇರಿ ಜೈಕರ್ ತಿಳಿಸಿದ್ದು, ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳ ಕುರಿತು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಳಳಲಾಗಿದೆ ಎಂದರು.
ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಮಗುವಿನ ಪೋಷಕರಾಗಿದ್ದು, ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ್ದೇವೆ. ತನಿಖೆ ಮುಂದುವರಿದಿರುವುದಾಗಿ ಜೈಕರ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಮಗುವಿನ ತಾಯಿಯೇ ಮುಖ್ಯ ಶಂಕಿತ ಆರೋಪಿಯಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹೆಣ್ಣು ಮಗು ಹುಟ್ಟಿದ್ದರಿಂದ ಡಿಂಪಲ್ ಅಸಮಾಧಾನಗೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಜನವರಿ ತಿಂಗಳಿನಲ್ಲಿ ಗುಲ್ಶನ್ ಮತ್ತು ಡಿಂಪಲ್ ದಂಪತಿಗೆ ಹೆಣ್ಣು ಮಗು ಅನನ್ಯ ಜನಿಸಿದ್ದಳು. ಬಳಿಕ ಡಿಂಪಲ್ ಈ ವಿಚಾರದಲ್ಲಿ ಗಂಡನ ಜೊತೆ ಜಗಳವಾಡುತ್ತಿದ್ದಳು ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ. ಗುಲ್ಶನ್ ದಂಪತಿಗೆ ನಾಲ್ಕು ವರ್ಷದ ಗಂಡು ಮಗುವೊಂದಿದೆ.