Advertisement

ಆಸ್ಪತ್ರೆ ದಾರಿಯಲ್ಲೇ ಕಾಣಿಸಿಕೊಂಡಿತು ಹೆರಿಗೆ ನೋವು; ಅಲ್ಲಿದ್ದ ಪೊಲೀಸರು ಮಾಡಿದ್ದಾದರೂ ಏನು?

08:20 AM May 09, 2020 | Hari Prasad |

ಲಾಕ್‌ಡೌನ್‌ ಅವಧಿಯಲ್ಲೇ ಜೋಧ್‌ಪುರದಲ್ಲಿ ಮಹಿಳೆಯೊಬ್ಬರಿಗೆ ಸರಿಸುಮಾರು ರಾತ್ರಿ 7.30ರ ಹೊತ್ತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.

Advertisement

ತತ್‌ಕ್ಷಣ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ದುರದೃಷ್ಟವಶಾತ್‌ ಅವರ ಕಾರು ಏಕಾಏಕಿ ಕೆಟ್ಟು ಹೋಗಿ, ರಸ್ತೆ ಮಧ್ಯೆ ನಿಲ್ಲುವಂತಾಯಿತು.

ಈ ಸಂದರ್ಭದಲ್ಲಿ ಸ್ವಲ್ಪ ದೂರದಲ್ಲೇ ಇದ್ದ ಪೊಲೀಸರು ಬ್ಯಾರಿಕೇಡ್‌ ಹಾಕಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾರು ನಿಂತಿದ್ದನ್ನು ಕಂಡು ಪೊಲೀಸರು ಅಲ್ಲಿಗೆ ತೆರಳಿದಾಗ, ಒಳಗೆ ಗರ್ಭಿಣಿಯು ನೋವಿನಲ್ಲಿ ಅರಚುತ್ತಿದ್ದುದು ಕಂಡುಬಂತು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್‌ ಸಿಬಂದಿ, ಹೊದಿಕೆಗಳ ಸಹಾಯದಿಂದ ಆ ಗರ್ಭಿಣಿ ಇರುವ ಸ್ಥಳವನ್ನು ಹೊರಗಿನವರಿಗೆ ಕಾಣದಂತೆ ನಾಲ್ಕೂ ಕಡೆಯಿಂದ ಮುಚ್ಚಿದರು. ಜತೆಗೆ ವೈದ್ಯರು ಮತ್ತು ದಾದಿಯರನ್ನು ಸ್ಥಳಕ್ಕೆ ಕರೆತಂದರು. ರಸ್ತೆಯಲ್ಲೇ ಆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಅನಂತರ ಆಂಬುಲೆನ್ಸ್‌ ಮೂಲಕ ತಾಯಿ-ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಉಪ ಪೊಲೀಸ್‌ ಆಯುಕ್ತೆ ಪ್ರೀತಿ ಚಂದ್ರ ಮತ್ತು ಅವರ ಮಹಿಳಾ ಕಾನ್‌ ಸ್ಟೇಬಲ್‌ಗ‌ಳ ಸಮಯ ಪ್ರಜ್ಞೆಯು ಎರಡು ಜೀವಗಳನ್ನು ಉಳಿಸಿದ್ದು ಇದೀಗ ಅವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next