ನವದೆಹಲಿ: ಮರಿ ಎಮ್ಮೆಯೊಂದು ಆನೆಯನ್ನೇ ಅಟ್ಟಾಡಿಸಿ ಓಡಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನೆಯನ್ನು ನೋಡಿದರೆ ಉಳಿದ ಪ್ರಾಣಿಗಳು ಬೆಚ್ಚಿ ಬೀಳುತ್ತವೆ. ಆದರೆ ಇಲ್ಲೊಂದು ಮರಿ ಎಮ್ಮೆ, ದೊಡ್ಡ ಗಾತ್ರದ ಆನೆಯನ್ನು ಯಾವುದೇ ಭಯಾತಂಕವಿಲ್ಲದೆ ಓಡಿಸಿದೆ. ಮರಿ ಎಮ್ಮೆಯ ಈ ದಾಳಿಯಿಂದ ಕಂಗಾಲಾದ ಆನೆ, ಏನು ಮಾಡಬೇಕೆಂದು ತೋಚದೆ ಅತ್ತಿಂದಿತ್ತ ಓಡಾಡಿದೆ. ಮತ್ತೊಂದೆಡೆ ಮರಿ ಎಮ್ಮೆಯನ್ನು ಆನೆ ಏನು ಮಾಡಿಬಿಡುತ್ತೋ ಎಂಬ ಆತಂಕದಲ್ಲಿ ದೊಡ್ಡ ಎಮ್ಮೆ ಅದರ ಹಿಂದೆಯೇ ಹೆಜ್ಜೆ ಹಾಕಿದೆ.
ಈ ವಿಡಿಯೋವನ್ನು ನೇಚರ್ ಈಸ್ ಲಿಟ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮರಿ ಎಮ್ಮೆಯ ದಾಳಿಯಿಂದ ಆನೆ ತಪ್ಪಿಸಿಕೊಳ್ಳಲು ಪರದಾಡಿದೆ ಎಂದು ಕ್ಯಾಪ್ಸನ್ ನೀಡಲಾಗಿದೆ.
Related Articles
17 ಸೆಕೆಂಡ್ ಗಳ ಈ ವಿಡಿಯೋ 93,500ಕ್ಕಿಂತಲೂ ಹೆಚ್ಚು ವಿವ್ಸ್ ಪಡೆದಿದ್ದು, 1500 ರೀಟ್ವೀಟ್ ಆಗಿದ್ದು,7,700 ಲೈಕ್ಸ್ ಪಡೆದಿದೆ.
ಈ ವಿಡಿಯೋಗೆ ನೆಟ್ಟಿಗರು ತರೆಹವಾರಿ ಕಮೆಂಟ್ ಗಳನ್ನು ಮಾಡಿದ್ದು ಮನಸೆಳೆಯುವತಿದೆ.
ಬೇಡ ಮಗು ಬೇಡ….ಅದನ್ನು ಹೊಡೆಯಬೇಡ ಎಂದು ತಾಯಿ ಎಮ್ಮೆ ಕೂಗುತ್ತಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ”ಹೇ ನೋ ನಾನು ನಿನಗೆ ತೊಂದರೆ ಕೊಡಲ್ಲ, ಬೇಡ ಬೇಡ’ ಎಂದು ಆನೆಯೇ ಹಿಂದೆ ಹೋಗುತ್ತಿದೆ ಎಂದು ಮತ್ತೊಂದು ಕಾಮೆಂಟ್ ಮಾಡಿದ್ದಾರೆ.