Advertisement

ವಿಮಾನದೊಳಗೆ ಗಂಡು ಮಗುವಿಗೆ ಜನ್ಮ;ಜೀವಮಾನವಿಡೀ ಉಚಿತ ಪ್ರಯಾಣ;Airways

10:42 AM Jun 19, 2017 | |

ಹೊಸದಿಲ್ಲಿ, ಜೂ. 18: ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಅನಿರೀಕ್ಷಿತ ಅತಿಥಿಯೊಬ್ಬರ ಆಗಮನವಾಗಿದೆ! ಹೌದು, ಸೌದಿ
ಅರೇಬಿಯಾದಿಂದ ಭಾರತಕ್ಕೆ ಬರುವ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.  ಈ ಮಗು ಜೀವಮಾನವಿಡೀ(ಲೈಫ್ ಟೈಮ್) ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಜೆಟ್ ಏರ್ ವೇಸ್ ಘೋಷಿಸಿದೆ.

Advertisement

ದಮ್ಮಾಮ್‌ ನಿಂದ ಕೊಚ್ಚಿಗೆ ಹೊರಟಿದ್ದ ವಿಮಾನ ಅರಬ್ಬಿ ಸಮುದ್ರದ ಮೇಲೆ ಸಂಚರಿಸುತ್ತಿದ್ದ ಸಂದರ್ಭದಲ್ಲೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಸಿಬಂದಿಯು ಕೇರಳಕ್ಕೆ ಪ್ರಯಾಣಿಸುತ್ತಿದ್ದ ನರ್ಸ್‌ವೊಬ್ಬರ
ನೆರವು ಪಡೆದು, ಹೆರಿಗೆ ಮಾಡಿಸಿದ್ದಾರೆ. ಜತೆಗೆ, ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಿ, ವಿಮಾನವನ್ನು ಮುಂಬಯಿನತ್ತ ತಿರುಗಿಸಿದ್ದಾರೆ. ಮುಂಬಯಿನಲ್ಲಿ ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಾದ ಬಳಿಕ ಜೆಟ್‌ ಏರ್‌ ವೇಸ್‌ ಮುಂಬಯಿನಿಂದ ಮತ್ತೆ ಕೊಚ್ಚಿಗೆ ತೆರಳಿದೆ.

Advertisement

Udayavani is now on Telegram. Click here to join our channel and stay updated with the latest news.

Next