ಗದಗ: ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಜಿಲ್ಲೆಯ ವಿವಿಧದಲಿತ ಸಂಘಟನೆಗಳ ಆಶ್ರಯದಲ್ಲಿ ಹಸಿರುಕ್ರಾಂತಿ ಹರಿಕಾರ ಮತ್ತು ಮಾಜಿ ಉಪ ಪ್ರಧಾನಿ ಡಾ|ಬಾಬು ಜಗಜೀವನರಾಂ ಅವರ 114ನೇ ಜಯಂತಿಯನ್ನು ಜಿಲ್ಲಾಡಳಿತ ಭವನದಮುಖ್ಯ ಸಭಾಂಗಣದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಜಗಜೀವನರಾಂ ಅವರ ಭಾವಚಿತ್ರಕ್ಕೆಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿ, ಜಗಜೀವನರಾಂ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ನಾಯಕ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸದೃಢ ದೇಶದ ನಿರ್ಮಾಣ ಸಾಧ್ಯ ಎಂದರು.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ., ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಪೌರಾಯುಕ್ತ ರಮೇಶ ಜಾಧವ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತವರಗಪ್ಪನವರ, ಪ್ರೊ| ಕೆ.ಎಚ್.ಬೇಲೂರ, ಎಸ್.ಎನ್. ಬಳ್ಳಾರಿ ಮೊದಲಾದವರಿದ್ದರು.
ಸಮಾಜ ಸುಧಾರಣೆಯ ಹರಿಕಾರ: ಪ್ರೊ| ಚಟಪಲ್ಲಿ :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯ ಸಾಬರಮತಿ ಆಶ್ರಮದಲ್ಲಿಡಾ|ಬಾಬು ಜಗಜೀವನರಾಂ ಅವರ ಜನ್ಮದಿನ ಆಚರಿಸಲಾಯಿತು. ಕುಲಪತಿಪ್ರೊ| ವಿಷ್ಣುಕಾಂತ ಎಸ್. ಚಟಪಲ್ಲಿ ಮಾತನಾಡಿ, ಜಗಜೀವನರಾಮ್‌ಅವರು ಸಮಾಜ ಸುಧಾರಣೆಯ ಹರಿಕಾರರು. ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿ, ಸಾಮಾಜಿಕ ಸಾಮರಸ್ಯಕ್ಕಾಗಿ ಹೋರಾಡಿ, ದೇಶದ ಉನ್ನತ ಸ್ಥಾನಕ್ಕೆ ತಲುಪಿದ ಧೀಮಂತ ನಾಯಕ ಎಂದರು.
ಶ್ರೀಧರ ದೀಕ್ಷಿತ್ ಉಪನ್ಯಾಸ ನೀಡಿದರು. ಕುಲಸಚಿವ ಪ್ರೊ| ಬಸವರಾಜ ಲಕ್ಕಣ್ಣವರ,ಡಾ| ಅಬ್ದುಲ್ ಅಜೀಜ್, ಗಿರೀಶ ದೀಕ್ಷಿತ್,ವಿಶೇಷಾಧಿಕಾರಿ ಉಮೇಶ ಬಾರಕೇರ,ಸಾಬರಮತಿ ಆಶ್ರಮದ ಸಂಚಾಲಕ ಪ್ರಕಾಶಮಾಚೇನಹಳ್ಳಿ, ಡಾ| ಶ್ರೀಧರ ಹಾದಿಮನಿ, ದೇವರಾಜ ದೊಡ್ಡಮನಿ ಇದ್ದರು.