Advertisement

ಅಡ್ವಾಣಿ ದೋಷಿ: ಇಂದು ಸುಪ್ರೀಂನಿಂದ ತೀರ್ಪು?

03:45 AM Mar 23, 2017 | |

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ, ಕೇಂದ್ರದ ಮಾಜಿ ಸಚಿವ ಡಾ.ಮುರಳಿ ಮನೋಹರ ಜೋಶಿ, ಕೇಂದ್ರ ಸಚಿವೆ ಉಮಾ ಭಾರತಿ ಪ್ರಮುಖ ಆರೋಪಿಗಳಾಗಿರುವ ಹಿನ್ನೆಲೆಯಲ್ಲಿ ಈ ವಿಚಾರಣೆ ಮಹತ್ವ ಪಡೆದಿದೆ. ವಿವಾದಿತ ಕಟ್ಟಡ ಧ್ವಂಸ ಪ್ರಕರಣದಲ್ಲಿ ಆಡ್ವಾಣಿ ಮತ್ತಿತರರ ವಿರುದ್ಧ ಕೈಡಲಾಗಿರುವ ಕ್ರಿಮಿನಲ್‌ ಸಂಚಿನ ಪ್ರಕರಣದ ಬಗ್ಗೆ ವಿಚಾರಣೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಕೋರ್ಟ್‌ ತೀರ್ಮಾನ ಪ್ರಕಟಿಸಲಿದೆ.

Advertisement

ನ್ಯಾ. ಪಿ.ಸಿ.ಘೋಷ್‌ ಬುಧವಾರ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ನ್ಯಾ.ಆರ್‌.ಎಫ್. ನಾರಿಮನ್‌ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಬಿಜೆಪಿ ನಾಯಕರ ಪರ ಕೆ.ಕೆ. ವೇಣುಗೋಪಾಲ ವಾದ ಮಂಡಿಸಲಿದ್ದಾರೆ. 

ವಿವಾದ ಪರಿಹರಿಸುವ ಸುಪ್ರೀಂಕೋರ್ಟು ಸಲಹೆಗೆ ಮುಸ್ಲಿಂ ಸಂಘಟನೆಗಳೇ ಅಡ್ಡಗಾಲು ಹಾಕುವ ಪ್ರಯತ್ನ ನಡೆಸಿವೆ. ಮಾಧ್ಯಮಗಳ ಮುಂದೆಯೇ ಸಲಹೆ ತಿರಸ್ಕರಿಸಿವೆ. ಹೀಗಾಗಿ ನ್ಯಾಯಾಲಯವೇ ಅಂತಿಮ ತೀರ್ಮಾನ ಕೊಡುವುದು ಒಳ್ಳೆಯದು.
– ಡಾ.ಸುಬ್ರಹ್ಮಣ್ಯನ್‌ ಸ್ವಾಮಿ,  ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next