Advertisement

ಬಾಬರಿ ಕೇಸ್‌ ಮುಗಿಸಲು ಇನ್ನೆಷ್ಟು ಕಾಲ? ಲಕ್ನೋ ಜಡ್ಜ್ ಗೆ ಸುಪ್ರೀಂ

04:22 PM Sep 10, 2018 | udayavani editorial |

ಹೊಸದಿಲ್ಲಿ : ಬಾಬರಿ ಮಸೀದಿ ಕೇಸಿನ ವಿಚಾರಣೆಯನ್ನು ಮುಗಿಸಲು ಇನ್ನೂ ಎಷ್ಟು ಕಾಲ ತೆಗೆದುಕೊಳ್ಳುತ್ತೀರಿ ಎಂದು ಸುಪ್ರೀಂ ಕೋರ್ಟ್‌ ಇಂದು ಸೋಮವಾರ ಲಕ್ನೋ ನ್ಯಾಯಾಲಯದ ನ್ಯಾಯಾಧೀಶರನ್ನು ಪ್ರಶ್ನಿಸಿತು. 

Advertisement

ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಮುಗಿಸಲು ಅವಶ್ಯವಿರುವ ಕಾಲಾವಧಿಯನ್ನು ತನಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಲಕ್ನೋದ ಸೆಶನ್ಸ್‌ ನ್ಯಾಯಾಲಯಕ್ಕೆ ಆದೇಶಿಸಿತು. 

ಜಸ್ಟಿಸ್‌ ಆರ್‌ ಎಫ್ ನಾರಿಮನ್‌ ಮತ್ತು ಇಂದೂ ಮಲೋತ್ರ ಅವರನ್ನು ಒಳಗೊಂಡ ಪೀಠವು ಮುಚ್ಚಿದ ಲಕೋಟೆಯಲ್ಲಿ ವಿವರವನ್ನು ಸಲ್ಲಿಸುವಂತೆ ವಿಚಾರಣಾ ನ್ಯಾಯಾಧೀಶರನ್ನು ಕೇಳಿಕೊಂಡಿತು.

ಮಾತ್ರವಲ್ಲದೆ ವಿಚಾರಣಾ ಕೋರ್ಟ್‌ ನ್ಯಾಯಾಧೀಶ ಎಸ್‌ ಕೆ ಯಾದವ್‌ ಅವರ ಭಡ್ತಿಗೆ ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ಸಂಬಂಧ ಉತ್ತರ ಪ್ರದೇಶ ಸರಕಾರದ ಉತ್ತರವನ್ನೂ ಸುಪ್ರೀಂ ಕೋರ್ಟ್‌ ಕೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next