ದುಬಾೖ: ಪಾಕಿಸ್ಥಾನದ ನಾಯಕ ಬಾಬರ್ ಅಜಮ್ ಅವರು 2021 ರ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ.
ಆರು ಪಂದ್ಯಗಳಲ್ಲಿ 67.50 ಸರಾಸರಿಯಲ್ಲಿ 405 ರನ್ ಗಳಿಸಿದ ಅವರ ಸಾಧನೆ ಪರಿಗಣಿಸಿ ಆಯ್ಕೆ ಮಾಡಲಾಗಿದೆ.
27 ರ ಹರೆಯದ ಬಾಬರ್ ಅಜಮ್ ದಕ್ಷಿಣ ಆಫ್ರಿಕಾ ವಿರುದ್ಧದ 2-1 ಸರಣಿಯ ವಿಜಯದಲ್ಲಿ 228 ರನ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು ಮತ್ತು ಎರಡೂ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೊದಲ ಏಕದಿನದಲ್ಲಿ ಪಾಕಿಸ್ಥಾನದ 274 ರನ್ ಚೇಸಿಂಗ್ ನಲ್ಲಿ ಬಾಬರ್ ಶತಕ ಸಿಡಿಸಿದ್ದರು. ಅಂತಿಮ ಏಕದಿನ ಪಂದ್ಯದಲ್ಲಿ ನಲ್ಲಿ 82 ಎಸೆತಗಳಲ್ಲಿ 94 ರನ್‌ಗಳೊಂದಿಗೆ ಭರ್ಜರಿ ಆಟವಾಡಿದ್ದರು.
ಪಾಕಿಸ್ಥಾನದ ಮೊಹಮ್ಮದ್ ರಿಜ್ವಾನ್ 2021ರ ಐಸಿಸಿ ಟಿ20 ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದರು.