Advertisement
ಈ ಅಮೋಘ ಸಾಹಸದೊಂದಿಗೆ ಬಾಬರ್ ಆಜಂ 2022ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ದಾಖಲೆ ಬರೆದರು. ಅವರ ರನ್ ಗಳಿಕೆ 1,251ಕ್ಕೆ ಏರಿದೆ. ಇದು ಬಾಬರ್ ಅವರ 9 ಟೆಸ್ಟ್‌ಗಳ 16ನೇ ಇನ್ನಿಂಗ್ಸ್. ಪಾಕ್ ಕಪ್ತಾನನ ಬ್ಯಾಟಿಂಗ್ ಅಬ್ಬರದ ವೇಳೆ ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಅವರ 1,098 ರನ್ನುಗಳ ದಾಖಲೆ ಪತನಗೊಂಡಿತು. ರೂಟ್ ಇದಕ್ಕಾಗಿ 15 ಟೆಸ್ಟ್‌ಗಳ 27 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದರು.
ಇಂಗ್ಲೆಂಡ್ ವಿರುದ್ಧ ಸೋತು ಸುಣ್ಣವಾಗಿದ್ದ ಪಾಕಿಸ್ಥಾನ, ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧವೂ ಆಘಾತಕಾರಿ ಆರಂಭ ಪಡೆದಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ 48 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. 110ಕ್ಕೆ 4ನೇ ವಿಕೆಟ್ ಬಿತ್ತು. ಬಾಬರ್ ಆಜಂ ಹಾಗೂ 4 ವರ್ಷಗಳ ಬಳಿಕ ಟೆಸ್ಟ್ ಆಡಲಿಳಿದ ಸಫìರಾಜ್ ಅಹ್ಮದ್ ತಂಡದ ರಕ್ಷಣೆಗೆ ನಿಲ್ಲುವುದರೊಂದಿಗೆ ಕಿವೀಸ್ ಹಿನ್ನಡೆ ಕಾಣುತ್ತ ಹೋಯಿತು. ಇವರಿಂದ 5ನೇ ವಿಕೆಟಿಗೆ 196 ರನ್ ಒಟ್ಟುಗೂಡಿತು. ಅರ್ಥಾತ್, 4 ವಿಕೆಟ್‌ಗಳಿಂದ ಕೇವಲ 110 ರನ್ ಮಾಡಿದ್ದ ಪಾಕ್, ಅನಂತರ ಒಂದೇ ವಿಕೆಟ್ ಕಳೆದುಕೊಂಡು 207 ರನ್ ರಾಶಿ ಹಾಕಿತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-5 ವಿಕೆಟಿಗೆ 317 (ಬಾಬರ್ ಬ್ಯಾಟಿಂಗ್ 161, ಸಫìರಾಜ್ 86, ಇಮಾಮ್ 24, ಶಕೀಲ್ 22, ಮೈಕಲ್ ಬ್ರೇಸ್‌ವೆಲ್ 61ಕ್ಕೆ 2, ಅಜಾಜ್ ಪಟೇಲ್ 91ಕ್ಕೆ 2).