Advertisement

ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಪಾಕ್ ಗೆ ನೆರವಾದ ಬಾಬರ್ ಅಜಂ- ಶಾನ್ ಮಸೂದ್

01:36 PM Aug 06, 2020 | keerthan |

ಮ್ಯಾಂಚೆಸ್ಟರ್: ಕೋವಿಡ್-19 ಸೋಂಕು ಭೀತಿ ನಡುವೆ ಇಂಗ್ಲೆಂಡ್ ಮತ್ತೊಂದು ಟೆಸ್ಟ್ ಸರಣಿ ಆಡಲಿಳಿದಿದೆ. ಪ್ರವಾಸಿ ಪಾಕಿಸ್ಥಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ಬುಧವಾರ ಆರಂಭವಾಗಿದ್ದು, ಬಾಬರ್ ಅಜಂ ಅರ್ಧಶತಕ ಬಾರಿಸಿ ಪಾಕ್ ತಂಡವನ್ನು ಆಧರಿಸಿದ್ದಾರೆ.

Advertisement

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ತಂಡ ಎರಡು ವಿಕೆಟ್ ಬೇಗನೇ ಕಳೆದುಕೊಂಡಿತು. ಆರಂಭಿಕ ಅಬಿದ್ ಅಲಿ 16 ರನ್ ಗಳಿಸಿ ಆರ್ಚರ್ ಎಸೆತದಲ್ಲಿ ಬೌಲ್ಡ್ ಆದರು. ನಾಯಕ ಅಜರ್ ಅಲಿ ಶೂನ್ಯಕ್ಕೆ ಔಟಾದರು.

ನಂತರ ಜೊತೆಯಾದ ಶಾನ್ ಮಸೂದ್ ಮತ್ತು ಬಾಬರ್ ಅಜಂ ಅಜೇಯ 96 ರನ್ ಗಳ ಜೊತೆಯಾಟ ನಡೆಸಿದರು. ಬಾಬರ್ 69 ರನ್ ಗಳಿಸಿದರೆ, ಶಾನ್ ಮಸೂದ್ 46 ರನ್ ಗಳಿಸಿ ಆಡುತ್ತಿದ್ದರು. ಆಗ ಮಳೆರಾಯ ನ ಆಗಮನವಾಗಿದ್ದು, ದಿನದಾಟವನ್ನು ಅಂತ್ಯಗೊಳಿಸಲಾಯಿತು.

ಕ್ರಿಸ್ ವೋಕ್ಸ್ ಮತ್ತು ಜೋಫ್ರಾ ಆರ್ಚರ್ ತಲಾ ಒಂದು ವಿಕೆಟ್ ಪಡೆದರು. ಪಾಕಿಸ್ಥಾನ ಎರಡು ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next