Advertisement

Baba Budangiri Dargah: 2017ರಲ್ಲಿ ಗೋರಿ ಕೀಳಲು ಮುಂದಾಗಿದ್ದ 14 ಜನರಿಗೆ ಸಮನ್ಸ್ ಜಾರಿ

05:51 PM Jan 04, 2024 | Team Udayavani |

ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ 2017ರಲ್ಲಿ ಗೋರಿಗಳನ್ನು ಕಿತ್ತು ಹಾಕಲು ಮುಂದಾಗಿದ್ದ 14 ಜನ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

Advertisement

2018ರಲ್ಲಿ ನಡೆದ ದತ್ತಜಯಂತಿ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಗೋರಿಗಳನ್ನು ಕಿತ್ತು ಹಾಕಲು ಮುಂದಾಗಿದ್ದರು. ಈ ಸಂಬಂಧ 14 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು.

ಹಿಂದಿನ ರಾಜ್ಯ ಸರ್ಕಾರದ ವೇಳೆ ಇವರ ಮೇಲೆ ಪೊಲೀಸ್ ಇಲಾಖೆ ಮೂರು ಬಾರಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಸಂಬಂಧ ಅನುಮತಿ ಕೇಳಲಾಗಿತ್ತು. ಕೆಲವು ನ್ಯೂನತೆಗಳ ಕಾರಣ ನೀಡಿ ಅಂದಿನ ಸರ್ಕಾರ ತಳ್ಳಿ ಹಾಕಿತ್ತು. ಪೊಲೀಸ್ ಇಲಾಖೆ ನಾಲ್ಕನೇ ಬಾರಿ ಅನುಮತಿ ಕೋರಿದ್ದು ರಾಜ್ಯ ಸರ್ಕಾರ ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ನ್ಯಾಯಲಯಕ್ಕೆ ಸಲ್ಲಿಸಿದ್ದು, ಆರೋಪಿಗಳು ಜ.8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮಸ್ಸ್ ನೀಡಿದೆ.

ಅಯೋಧ್ಯೆ ವಿಚಾರ ಭಾರಿ ಚರ್ಚೆಯಲ್ಲಿರುವ ಹೊತ್ತಿನಲ್ಲಿ ಈ ಬೆಳವಣಿಗೆ ನಡೆದಿದ್ದು, ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ 2017ರಲ್ಲಿ ಗೋರಿಗಳನ್ನು ಕಿತ್ತು ಹಾಕಲು ಮುಂದಾದ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎಂಬ ಸುದ್ದಿ ಹರಡಿದ್ದು, ಅಂದಿನ ಪ್ರಕರಣವನ್ನು ರೀ ಓಪನ್ ಮಾಡಿಲ್ಲವೆಂದು ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next