Advertisement

ಬಾಹುಬಲಿ ಕನ್ನಡ ರಥಕ್ಕೆ ಚಾಲನೆ

04:06 PM Dec 02, 2019 | Team Udayavani |

ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು ಕೇಂದ್ರದಿಂದ ಮೈಸೂರಿಗೆ ಹೊಸದಾಗಿ ಸಂಚಾರ ಪ್ರಾರಂಭಿಸಿದ ರಾಜ್ಯ ರಸ್ತೆ ಸಾರಿಗೆಯ ಬಾಹುಬಲಿ ಕನ್ನಡ ರಥಕ್ಕೆ ಘಟಕದ ವ್ಯವಸ್ಥಾಪಕ ಪಿ.ಬಿ.ನಾಗರಾಜು ಚಾಲನೆ ನೀಡಿದರು.

Advertisement

ನಿತ್ಯ ಬೆಳಗ್ಗೆ 7.45ಕ್ಕೆ ಚನ್ನರಾಯ ಪಟ್ಟಣದಿಂದ ಹೊರಡುವ ಬಾಹುಬಲಿಕನ್ನಡ ರಥದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಓದಲು ಕನ್ನಡದಿನಪತ್ರಿಕೆಯನ್ನು ವ್ಯವಸ್ಥೆಮಾಡಲಾಗುತ್ತದೆ. ದಿನವಹಿ ನಾಲ್ಕುಬಾರಿ ಮೈಸೂರುಚನ್ನರಾಯಪಟ್ಟಣಸಂಚಾರ ಮಾಡಲಿದೆ. ಬಸ್‌ನ ಎಲ್ಲಾ ಕಿಟಕಿಗಳಿಗೆ ಕನ್ನಡ ಸಾಹಿತಿಗಳ ಭಾವ ಚಿತ್ರವನ್ನು ಹಾಕಲಾಗಿದ್ದು, ಕನ್ನಡ ಪ್ರೇಮವನ್ನು ಚಾಲಕ ಯೋಗೇಶ್‌ ಮತ್ತು ನಿರ್ವಾಹಕ ಗುರು ತೋರಿದ್ದಾರೆ.

ಈಗಾಗಲೇ ಏಳು ದಿನ ಪ್ರಯೋಗಿಕವಾಗಿ ಸಂಚಾರ ಮಾಡಿ ನಿತ್ಯ 13 ರಿಂದ 16 ಸಾವಿರ ಹಣ ಸಂಗ್ರಹವಾಗುತ್ತಿದೆ.ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಶಾಶ್ವತವಾಗಿ ಸಂಚಾರ ಮಾಡಲು ಘಟಕವು ತೀರ್ಮಾನ ಮಾಡಿದೆ.

ಬಾಹುಬಲಿ ನಾಡಿನಿಂದ ಚಾಮುಂಡಿ ಬೀಡಿಗೆ ಎಂಬ ವಾಕ್ಯವನ್ನು ಬಸ್‌ ಮೇಲೆ ಹಾಕಲಾಗಿದ್ದು, ಸಾಹಿತಿ ಎಸ್‌.ಎಲ್‌. ಭೈರಪ್ಪ, .ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಪು.ತಿ. ನರಸಿಂಹಾಚಾರ್‌, ಯು.ಆರ್‌.ಅನಂತಮೂರ್ತಿ,ಗಿರೀಶ್‌ ಕಾರ್ನಾಡ್‌, ಕುವೆಂಪು, ಹರಿಹರ, ಬಸವಣ್ಣ, ರಾಘವಾಂಕ, ಕುಮಾರವ್ಯಾಸ, ರನ್ನ, ಜನ್ನ, ಪೊನ್ನ, ಕೆ.ಎಸ್‌. ನರಸಿಂಹಸ್ವಾಮಿ ಚಿತ್ರಗಳು ಬಸ್ಸಿನಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next