Advertisement
ನೀವು ವ್ಯಾಯಾಮಕ್ಕೆ ಹೊಸಬರಾದರೆ ಇದನ್ನು ಕಡಿಮೆ ಸಮಯದಿಂದ ಆರಂಭಿಸಬೇಕಾಗುತ್ತದೆ. ನಿಮ್ಮ ದೇಹ ಈಗಾಗಲೇ ಒಳ್ಳೆಯ ಆಕಾರದಲ್ಲಿದ್ದರೆ ಬೈಸಿಕಲ್ ತುಳಿಯುವುದು ನಿಮ್ಮ ದೇಹವನ್ನು ಇನ್ನಷ್ಟು ಹುರಿಗಟ್ಟಿಸುವಲ್ಲಿಸಹಕಾರಿಯಾಗುತ್ತದೆ. ನೀವು ಈ ವ್ಯಾಯಾಮವನ್ನು ಮೊದಲು 10-15 ನಿಮಿಷಗಳಿಂದ ಪ್ರಾರಂಭಿಸಿ ನಿಧಾನವಾಗಿ
40-60 ನಿಮಿಷಗಳವರೆಗೂ ವಿಸ್ತರಿಸಬಹುದು.
ನೀವು ವೈದ್ಯರ ಸಲಹೆಯನ್ನು ಪಡೆದು ಈ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಹಿರಿಯ ನಾಗರೀಕರು
ಸೈಕ್ಲಿಂಗ್ ಮಾಡಬೇಕಿದ್ದರೆ ಒಳಾಂಗಣ ಪ್ರದೇಶವನ್ನು ಆಯ್ದುಕೊಳ್ಳುವುದು ಸೂಕ್ತ. ಹೊರಗೆ ಮಾಡಬೇಕಾದರೆ ಅವರ
ಜೊತೆ ರಕ್ಷಣೆಗಾಗಿ ಯಾರಾದರೂ ಇದ್ದರೆ ಒಳ್ಳೆಯದು.
Related Articles
ಸೈಕ್ಲಿಂಗ್ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನಿಯಂತ್ರಿಸುತ್ತದೆ. ದಿನಕ್ಕೆ 30-40 ನಿಮಿಷದ ಸೈಕ್ಲಿಂಗ್ ನಿಮ್ಮ ಹೃದಯದ ಹಾಗೂ ಶ್ವಾಸಕೋಶದ ಸ್ವಾಸ್ಥÂವನ್ನು ಕಾಪಾಡುತ್ತದೆ. ಹೃದಯಕ್ಕೆ ರಕ್ತಸಂಚಾರ ಸರಿಯಾಗಿ ಆಗುವಲ್ಲಿ
ಮುಖ್ಯ ಪಾತ್ರ ವಹಿಸುತ್ತದೆ. ಸೈಕ್ಲಿಂಗ್ ನಿಮ್ಮ ದೇಹವನ್ನು ಒಂದು ಒಳ್ಳೆಯ ಆಕಾರಕ್ಕೆ ತರುವಲ್ಲಿ ಸಹಕರಿಸುತ್ತದೆ. ದೇಹವನ್ನು ಹುರಿಗಟ್ಟಿಸುತ್ತದೆ. ಮೊಳಕಾಲು, ತೊಡೆ ಹಾಗೂ ನಿತಂಬಗಳನ್ನು ಗಟ್ಟಿಗೊಳಿಸುತ್ತದೆ. ಕೀಲುಸಂಬಂಧಿ ನೋವುಗಳಿಂದ ಬಳಲುತ್ತಿರುವವರು ಸಹ ಈ ವ್ಯಾಯಾಮ ಮಾಡಿ ಉತ್ತಮ ಫಲಿತಾಂಶ ಪಡೆಯಬಹುದು. ದೇಹದ ತೂಕದಲ್ಲಿ ಸಮತೋಲನೆಯನ್ನು ಸಾಧಿಸಬಹುದು.
Advertisement
ಮೊದಲೇ ಹೇಳದಂತೆ ಸೈಕ್ಲಿಂಗ್ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ದೇಹದಲ್ಲಿ ಅನಗತ್ಯವಾಗಿ ಸೇರಿಕೊಂಡಿರುವ ಕೊಬ್ಬನ್ನು ಕರಗಿಸುತ್ತದೆ. ದೇಹವನ್ನು ಹಗುರವಾಗಿಸುತ್ತದೆ, ಆರೋಗ್ಯವಾಗಿರಿಸುತ್ತದೆ. ಸೈಕ್ಲಿಂಗ್ ಮಾಡಿದರೆ ನಮ್ಮ ದೇಹ ಗಟ್ಟಿಯಾಗುವುದೇ ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಸೈಕ್ಲೈಂಗ್ ಮಾಡುವುದರಿಂದ ಅನೇಕ ಬಗೆಯ ಕ್ಯಾನ್ಸರನ್ನೂ ಸಹ ತಡೆಗಟ್ಟಬಹುದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು, ಸೈಕ್ಲಿಂಗ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚುಮಾಡುತ್ತದೆ.