Advertisement

ಕಾಂಗ್ರೆಸ್ ಅರೆಬರೆ ಬೆಂದ ಗ್ಯಾರಂಟಿಗಳನ್ನು‌ ನೀಡಿ ಜನರಿಗೆ ವಂಚಿಸುತ್ತಿದೆ: ಬಿ.ವೈ.ವಿಜಯೇಂದ್ರ

12:06 PM Nov 16, 2023 | Team Udayavani |

ಚಿತ್ರದುರ್ಗ: ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ಆಯೋಗದ ವರದಿ ಸಿದ್ದರಾಮಯ್ಯ ಸರಕಾರ‌ ಇದ್ದಾಗ 150 ಕೋಟಿ ಖರ್ಚು ಮಾಡಿ ಅವರಿಗೆ ಖುಷಿ‌ ಬಂದಂತೆ ಮಾಡಿಸಿಕೊಂಡಿದ್ದಾರೆ. ಅವರ ಸರ್ಕಾರ ಇದ್ದಾಗಲೇ ಮಾಡಿದ ವರದಿ, ಆದರೆ, ಯಾಕೆ ಈವರೆಗೆ ಬಿಡುಗಡೆ ಮಾಡಲಿಲ್ಲ. ಅದೊಂದು ಅರೆಬೆಂದ ವರದಿ, ಎಸಿ ರೂಂ ನಲ್ಲಿ ಕುಳಿತು ಸಿದ್ಧಪಡಿಸಿದ್ದಾರೆ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.

Advertisement

ಬಳಿಕ ಮಾತನಾಡಿದ ಅವರು ‘ನಿನ್ನೆ ಅಧಿಕೃತವಾಗಿ ಬಿಜೆಪಿ ರಾಜ್ಯ ಅಧ್ಯಕ್ಷನಾಗಿ ಜವಾಬ್ದಾರಿ ಸ್ವೀಕರಿಸಿದ್ದೇನೆ. ಇಂದು ಚಿತ್ರದುರ್ಗದ ಮಠಾಧೀಶರ ಭೇಟಿ ಮಾಡಿ‌ ಆಶೀರ್ವಾದ ಪಡೆಯಲು ಬಂದಿದ್ದೇನೆ.

ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲುವು ಮೂಲಕ ಹೊಸ ಇತಿಹಾಸ ಸೃಷ್ಠಿಸಬೇಕು ಎನ್ನುವುದು ನಮ್ಮ ಗುರಿ. ಒಂದು ದಿನವೂ ಮನೆಯಲ್ಲಿರದೆ ರಾಜ್ಯ ಪ್ರವಾಸ ಮಾಡುತ್ತೇನೆ. ಲೋಕಸಭೆ ಜೊತೆಗೆ ಜಿಪಂ, ತಾಪಂ ಚುನಾವಣೆಗೂ ಮಹತ್ವ ಕೊಟ್ಟು ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.

ಬಿಜೆಪಿ ಸರ್ಕಾರ ಇದ್ದಾಗ ಶೇ.40 ಭ್ರಷ್ಟಾಚಾರ ಎಂದು‌ ಕಾಂಗ್ರೆಸ್ ದಿನವೂ‌ ಆರೋಪ ಮಾಡುತ್ತಿತ್ತು.‌ಆದರೆ, ಈಗಿನ‌ ಕಾಂಗ್ರೆಸ್ ಸರ್ಕಾರ‌ ಮೊದಲ‌ ದಿನದಿಂದಲೇ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ.

ಐಟಿ ದಾಳಿಯಲ್ಲಿ ಕೋಟ್ಯಾಂತರ ಹಣ ಸಿಕ್ಕಿದಾಗ ಕಾಂಗ್ರೆಸ್‌ನವರು ಸ್ವಾಗತ ಮಾಡಲಿಲ್ಲ, ಅವರಿಗೆ‌ ನೋವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗಿದೆ. ಒಂದು ಹೊಸ ಯೋಜನೆ ಬಂದಿಲ್ಲ. ಅರೆಬರೆ ಬೆಂದಿರುವ ಗ್ಯಾರಂಟಿಗಳನ್ನು‌ ನೀಡಿ ಜನರಿಗೆ ವಂಚಿಸುತ್ತಿರುವ ಜೊತೆಗೆ ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಹೇಳಿದರು.

Advertisement

ಜಿ.ಎಚ್.ತಿಪ್ಪಾರೆಡ್ಡಿ, ಕೆ.ಎಸ್.ನವೀನ್, ಎಂ.ಪಿ‌.ರೇಣುಕಾಚಾರ್ಯ, ವೈ.ಎ.ನಾರಾಯಣಸ್ವಾಮಿ, ಎ.ಮುರುಳಿ,‌ ಎಸ್.ಲಿಂಗಮೂರ್ತಿ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಜೊತೆಗಿದ್ದರು.

ಇದನ್ನೂ ಓದಿ: War:ಗಾಜಾದ Al-Shifa ಆಸ್ಪತ್ರೆಯೊಳಗೆ ಹಮಾಸ್‌ ನ ಶಸ್ತ್ರಾಸ್ತ್ರ ಪತ್ತೆಹಚ್ಚಿದ ಇಸ್ರೇಲ್‌ ಪಡೆ

Advertisement

Udayavani is now on Telegram. Click here to join our channel and stay updated with the latest news.

Next