Advertisement

ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ: ಸಂಸತ್ತಿನ ಗಮನಸೆಳೆದ ಬಿ.ವೈ. ರಾಘವೇಂದ್ರ

10:14 AM Jul 08, 2019 | keerthan |

ಬೈಂದೂರು: ಗ್ರಾಮೀಣ ಜನರನ್ನು ನಿರಂತರ ಕಾಡುವ ಸಮಸ್ಯೆಯಾದ ಬಿಎಸ್‌ಎನ್‌ಎಲ್‌ ಮೊಬೈಲ್‌ ನೆಟ್‌ವರ್ಕ್‌ ಕುರಿತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಶುಕ್ರವಾರ ಸಂಸತ್ತಿನಲ್ಲಿ ಕೇಂದ್ರ ಸರಕಾರದ ಗಮನ ಸೆಳೆದರು.

Advertisement

ರಾಜ್ಯದ ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್‌ ಸಂಪರ್ಕದಲ್ಲಿ ತೀವ್ರ ಸಮಸ್ಯೆಯಾಗಿದೆ. ಮಲೆ ನಾಡಿನ ಬೆಟ್ಟ ಗುಡ್ಡ ಪ್ರದೇಶ ಮತ್ತು ಕರಾವಳಿ ಪ್ರದೇಶಗಳು ಅತೀ ಸಂಕಷ್ಟದಲ್ಲಿ ಸಿಲುಕಿವೆ ಎಂದರು.

ಬಿಎಸ್‌ಎನ್‌ಎಲ್‌ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಯಾಗಿದ್ದು, ಇಲ್ಲಿ ಕಾಲಕಾಲಕ್ಕೆ ಸರಿಯಾಗಿ ಯಾವುದೇ ದುರಸ್ತಿಯಾಗಲಿ, ನಿರ್ವಹಣೆಯಾಗಲಿ ನಡೆಯುತ್ತಿಲ್ಲ. ಈಗಾಗಲೇಚಾಲ್ತಿಯಲ್ಲಿರುವ ಟವರ್‌ ಗಳ ಜನರೇಟರ್‌ಗಳಿಗೆ ಸಮರ್ಪಕ ಡೀಸೆಲ್‌ ಪೂರೈಕೆಯಾಗುತ್ತಿಲ್ಲ. ಬ್ಯಾಟರಿಗಳು ನಿರ್ವಹಣೆ ಇಲ್ಲದೆ ಕೆಲಸ ನಿರ್ವಹಿಸುತ್ತಿಲ್ಲ. ಸಮಸ್ಯೆ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರದ ಡಿಜಿಟಲ್‌ ಇಂಡಿಯಾ ಕಲ್ಪನೆಯ ಅಡಿಯಲ್ಲಿ ಯುವ ಪೀಳಿಗೆ ತಮ್ಮ ಸ್ವಂತ ಖಾಸಗಿ ಕೆಲಸಗಳನ್ನು, ಸರಕಾರಿ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ನ ಅವಶ್ಯವಿದೆ. ಉದ್ಯೋಗವನ್ನು ಅರಸುತ್ತಾ ವೃದ್ಧ ತಂದೆ-ತಾಯಿಯರನ್ನು ತೊರೆದು ಮಹಾ ನಗರಗಳಿಗೆ ಸ್ಥಳಾಂತರಗೊಂಡಿರುವ ಗ್ರಾಮೀಣ ಯುವ ಜನರಿಗೆ ಹೆತ್ತವರೊಂದಿಗೆ ಸಂಪರ್ಕಕ್ಕೆ ಇರುವ ಏಕೈಕ ಸಾಧನ ಬಿಎಸ್‌ಎನ್‌ಎಲ್‌ ಮೊಬೈಲ್‌. ಆದರೆ ನೆಟ್‌ವರ್ಕ್‌ ಸಮಸ್ಯೆಯಿಂದ ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೇಂದ್ರ ಸರಕಾರವು ಸಮಸ್ಯೆ ಇರುವ ಕ್ಷೇತ್ರಗಳಲ್ಲಿ ಸುಸಜ್ಜಿತ ಟವರ್‌ಗಳನ್ನು ಅಳವಡಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next