ಸಾಗರ: ದೇಶವನ್ನು ಕಾಂಗ್ರೆಸ್ 67 ವರ್ಷ ಆಳ್ವಿಕೆ ಮಾಡಿದ್ದರೂ ದೇಶವಾಸಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವಲ್ಲಿ ಯಶಸ್ಸು ಕಂಡಿರಲಿಲ್ಲ. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 10 ವರ್ಷದಲ್ಲಿ ಭಾರತದ ಪ್ರಜೆಗಳು ಸ್ವಾಭಿಮಾನದ ಜೊತೆಗೆ ವಿಶ್ವಗುರುವಾಗಿ ಭಾರತ ಹೊರಹೊಮ್ಮುತ್ತಿದೆ
ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಗುರುವಾರ ಬಿಜೆಪಿ ಸಾಗರ ನಗರ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಪ್ರಬುದ್ಧರೊಂದಿಗೆ ಸಂಸದರ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಬಡತನವನ್ನು ಪ್ರೀತಿ ಮಾಡಿದ್ದು ಬಿಟ್ಟರೆ ಬಡವರನ್ನು ಪ್ರೀತಿ ಮಾಡಿಲ್ಲ. ನಿಜವಾಗಿಯೂ ಬಡವರನ್ನು ಕಾಂಗ್ರೆಸ್ ಗಮನಿಸಿದ್ದರೆ ಆಡಳಿತ ನಡೆಸಿದ 67 ವರ್ಷದಲ್ಲಿ ಬಡತನ ಸಂಪೂರ್ಣ ನಿರ್ಮೂಲನೆಯಾಗ ಬೇಕಾಗಿತ್ತು. ನರೇಂದ್ರ ಮೋದಿ ಅವರು ಆಡಳಿತ ನಡೆಸಿದ 10 ವರ್ಷಗಳ ಅಂಕಿ-ಅಂಶವನ್ನು ನೋಡಿದರೆ ದೇಶದ ಅಭಿವೃದ್ಧಿಪಥ ಅರ್ಥವಾಗುತ್ತದೆ. 2047ಕ್ಕೆ ಭಾರತ ಸ್ವಾತಂತ್ರÂಗೊಂಡು 100 ವರ್ಷ ತುಂಬಲಿದ್ದು, ಮೋದಿಯವರ ದೂರದರ್ಶಿತ್ವ ಯೋಜನೆಗೆ ಈಗಿನಿಂದಲೇ ಚಾಲನೆ ಸಿಕ್ಕಿದೆ ಎಂದು ಹೇಳಿದರು.
ವಾಗ್ಮಿ ರವೀಂದ್ರ ಜೋಷಿ ಮಾತನಾಡಿ, ದೇಶದ ನಾಡಿಮಿಡಿತ ಅರಿತಿರುವ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಭಾರತ ತನ್ನ ಸನಾತನ ಶಕ್ತಿಯಿಂದ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ. ಪ್ರಬುದ್ಧರು ಮತ್ತು ಕೆನೆಪದರ ಜನರು ಶಹಬ್ಟಾಸ್ ಎಂದಾಗ ಮಾತ್ರ ಓರ್ವ ಪ್ರಧಾನಿ ಯಶಸ್ವಿಯಾಗಿದ್ದಾನೆ ಎನ್ನುವುದನ್ನು ಅರಿತುಕೊಳ್ಳಬೇಕು. ಅಂತಹ ಶಹಬ್ಟಾಸ್‌ಗಿರಿಗೆ ನರೇಂದ್ರ ಮೋದಿಯವರು ಪಾತ್ರವಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್. ಗಣೇಶಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಇದ್ದರು. ಇದೇ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಬ್ರಾಸಂನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ
ಬ್ರಾಸಂನ ಕಾರ್ಯದರ್ಶಿ ಜನಾರ್ದನ ಹಕ್ರೆ, ಪ್ರಕಾಶ್ ಕಟ್ಟಿನಕೆರೆ, ಅ.ರಾ. ಲಂಬೋದರ್ ಇನ್ನಿತರರು ಇದ್ದರು.