ಕರ್ನಾಟಕದಲ್ಲಿ ಮಾತ್ರವೇ ಬಿಎಸ್‌ವೈಗೆ ಈ ಭದ್ರತೆ ಲಭ್ಯವಾಗಲಿದೆ. ಶೀಘ್ರದಲ್ಲೇ ಅವರ ಭದ್ರತೆ ಹೊಣೆಯನ್ನು ಸಿಆರ್‌ಪಿಎಫ್ ವಹಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
Advertisement
ಗಣ್ಯರಿಗಿರುವ ಬೆದರಿಕೆಯ ಸಾಧ್ಯತೆಗೆ ಅನುಗುಣವಾಗಿ ಗುಪ್ತಚರ ಸಂಸ್ಥೆ ಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯನ್ನು ಆಧರಿಸಿ ಈ ಭದ್ರತೆ ನೀಡಲಾಗುತ್ತದೆ. ರಾಜ್ಯದಲ್ಲಿ ತೀವ್ರಗಾಮಿ ಸಂಘಟನೆಗಳಿಂದ ಬಿಎಸ್‌ವೈ ಅವರಿಗೆ ಜೀವ ಬೆದರಿಕೆಯಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಮತ್ತು 2024ರ ಲೋಕಸಭೆ ಚುನಾವಣೆಗೂ ಮುನ್ನ ಪಕ್ಷವನ್ನು ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಬಿಎಸ್‌ವೈ ಘೋಷಿಸಿದ ಬೆನ್ನಲ್ಲೇ ಅವರಿಗೆ ಝೆಡ್ ಭದ್ರತೆ ಒದಗಿಸುವ ಆದೇಶ ಹೊರಬಿದ್ದಿದೆ.