Advertisement

ಮಾತಿಗೆ ತಪ್ಪ …ಬಿಜೆಪಿಯ ಈ ಯಡಿಯೂರಪ್ಪ !

01:04 AM Jun 19, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಎರಡನೇ ಬಾರಿಗೆ ಬಿಜೆಪಿ ಸರಕಾರ ರಚನೆಗಾಗಿ “ತ್ಯಾಗ’ ಮಾಡಿ ಬಂದವರ ಪೈಕಿ ಮತ್ತೆ ಇಬ್ಬರು ವಿಧಾನ ಪರಿಷತ್‌ ಪ್ರವೇಶಿಸಲು ಅನುಕೂಲವಾಗುವಂತೆ ಟಿಕೆಟ್‌ ಕೊಡಿಸುವಲ್ಲಿ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಈ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ.

Advertisement

ಇದು ಬಿಜೆಪಿಯ ವಿಶ್ವಾಸಾರ್ಹತೆಯನ್ನೂ ಹೆಚ್ಚಿಸಲಿದೆ. ಈ ಬೆಳವಣಿಗೆ ಪಕ್ಷವನ್ನು ಇನ್ನಷ್ಟು ಬಲ ಪಡಿಸಲು ಅನುಕೂಲವಾಗುವ ವಿಶ್ವಾಸವು ನಾಯಕರು, ಕಾರ್ಯಕರ್ತರಲ್ಲಿ ಮೂಡಿದೆ.

ಕಾಂಗ್ರೆಸ್‌ನ 13, ಜೆಡಿಎಸ್‌ನ ಮೂವರು ಮತ್ತು ಪಕ್ಷೇತರ ಶಾಸಕರೊಬ್ಬರ ರಾಜೀನಾಮೆಯಿಂದ ಕಳೆದ ಜುಲೈಯಲ್ಲಿ ಮೈತ್ರಿ ಸರಕಾರ ಪತನಗೊಂಡಿತ್ತು. ಈ ಪೈಕಿ ಎಂ.ಟಿ.ಬಿ. ನಾಗರಾಜ್‌, ಆರ್‌. ಶಂಕರ್‌ ಸಚಿವ ಸ್ಥಾನ ತೊರೆದು ರಾಜೀನಾಮೆ ಕೊಟ್ಟಿದ್ದರು. ಬಳಿಕ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆಯಿತು. ಆಗ 17 ಮಂದಿ ಪೈಕಿ 16 ಮಂದಿ ಬಿಜೆಪಿ ಸೇರಿದ್ದರು.

ಕಳೆದ ಡಿಸೆಂಬರ್‌ನ ಉಪಚುನಾವಣೆಯಲ್ಲಿ 13 ಮಂದಿಯಷ್ಟೇ ಸ್ಪರ್ಧಿಸಿದ್ದರು. ಈ ಪೈಕಿ 11 ಮಂದಿ ಜಯಶೀಲರಾಗಿದ್ದರು. ಇವರಲ್ಲಿ 10 ಮಂದಿಯನ್ನು ಬಿಎಸ್‌ವೈ ಸಚಿವ ರನ್ನಾಗಿಸಿದ್ದಾರೆ.

ರಮೇಶ್‌ ಜಾರಕಿಹೊಳಿ ಅವರಿಗೆ ಜಲಸಂಪ ನ್ಮೂಲ ಖಾತೆ ನೀಡಿದರು. ಇತ್ತೀಚೆಗೆ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನಾಗಿಸಿ ಭರವಸೆ ಈಡೇರಿಸಿದ್ದರು. ಬಳಿಕ ಪ್ರಭಾವಿ ಎನಿಸಿದ ಅರಣ್ಯ, ವೈದ್ಯಕೀಯ ಶಿಕ್ಷಣ, ನಗರಾಭಿವೃದ್ಧಿ, ಸಹಕಾರ, ಕೃಷಿ, ಆಹಾರ ಮತ್ತು ನಾಗರಿಕ ಸರಬ ರಾಜು ಖಾತೆಗಳನ್ನೂ ವಲಸಿಗ ಶಾಸಕರಿಗೆ ನೀಡುವ ಮೂಲಕ ಹಿತ ಕಾಪಾಡುವ ಭರವಸೆ ಮೂಡಿಸಿದ್ದರು.

Advertisement

ಶಂಕರ್‌, ನಾಗರಾಜ್‌ಗೆ ಸ್ಥಾನ
ಆರ್‌. ಶಂಕರ್‌, ಎಂ.ಟಿ.ಬಿ. ನಾಗರಾಜ್‌ ಮುಂದೆ ಮತ್ತೆ ಸಚಿವರಾಗುವುದು ಬಹುತೇಕ ನಿಚ್ಚಳವಾಗಿದೆ. ಆ ಮೂಲಕ ಪಕ್ಷೇತರ ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ ತೊರೆದಿದ್ದ 17ರಲ್ಲಿ 13 ಮಂದಿಗೆ ಕೊಟ್ಟ ಮಾತನ್ನು ಯಡಿಯೂರಪ್ಪ ಉಳಿಸಿಕೊಂಡಂತಾಗಿದೆ.

ಕುಮಟಳ್ಳಿಗೆ ನಿಗಮ
ಮಹೇಶ್‌ ಕುಮಟಳ್ಳಿ ಅವರನ್ನು ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನೇಮಕ ಮಾಡಲಾಯಿತು. ಆ ಮೂಲಕ ಪಕ್ಷ ಸೇರಿದ್ದ 11 ಮಂದಿಯ ಭರವಸೆಯನ್ನೂ ಯಡಿಯೂರಪ್ಪ ಈಡೇರಿಸಿದಂತಾಗಿತ್ತು.

ಮಾಜಿಗಳಿಗೂ ಉದಾರ ಸ್ಪಂದನೆ
ರಾಜರಾಜೇಶ್ವರಿನಗರ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಇನ್ನಷ್ಟೇ ಘೋಷಣೆಯಾಗಬೇಕಿದ್ದು, ಗೆದ್ದರೆ ಮಾಜಿ ಶಾಸಕ ಮುನಿರತ್ನ ಮತ್ತು ಪ್ರತಾಪಗೌಡ ಪಾಟೀಲ್‌ ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ.

ಇಬ್ಬರಿಗೆ ಪರಿಷತ್‌ ಸ್ಥಾನ
ಈಗ ಪರಿಷತ್‌ನಲ್ಲಿ ಬಿಜೆಪಿ ಗೆಲ್ಲಬಹುದಾದ 4 ಸ್ಥಾನಗಳ ಪೈಕಿ ಎರಡನ್ನು ವಲಸಿಗರಿಗೆ ಕೊಡಿಸುವ ಯಡಿಯೂರಪ್ಪ ಪ್ರಯತ್ನ ಫ‌ಲ ನೀಡಿದೆ. ಉಪ ಚುನಾವಣೆಗೆ ಸ್ಪರ್ಧಿಸದ ಆರ್‌. ಶಂಕರ್‌ ಮತ್ತು ಪರಾಭವಗೊಂಡಿದ್ದ ಎಂ.ಟಿ.ಬಿ. ನಾಗರಾಜ್‌ ಅವರಿಗೆ ಟಿಕೆಟ್‌ ದೊರಕಿದೆ.

Advertisement

Udayavani is now on Telegram. Click here to join our channel and stay updated with the latest news.

Next