Advertisement

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

12:22 AM Nov 29, 2024 | Team Udayavani |

ಬೆಂಗಳೂರು: ಕೋವಿಡ್‌ ಹಗರಣ ತನಿಖೆಗೆ ಎಸ್‌ಐಟಿ ರಚನೆ ಮಾಡಿದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೂಮ್ಮೆ ಗದಾಪ್ರಹಾರ ನಡೆ ಸುವುದಕ್ಕೆ ರಾಜ್ಯ ಸರ ಕಾರ ನಿರ್ಧರಿಸಿದೆ. 2020ರಲ್ಲಿ ಬಿಡಿಎ ಬಹುಮಹಡಿ ಅಪಾರ್ಟ್‌ ಮೆಂಟ್‌ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಯಡಿಯೂರಪ್ಪ ವಿರುದ್ಧ ತನಿಖೆ ನಡೆಸುವುದಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಮತ್ತೆ ಪರಿಗಣಿಸಿ ವಿಚಾರಣೆಗೆ ಪೂರ್ವಾನುಮತಿ ನೀಡುವಂತೆ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಲು ಗುರು ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

Advertisement

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಲಾಗಿದೆ. 2020ರಲ್ಲಿ ಟಿ.ಜೆ. ಅಬ್ರಹಾಂ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯ ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಆದರೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಅಂದಿನ ಬಿಡಿಎ ಆಯುಕ್ತ ಜಿ.ಸಿ. ಪ್ರಕಾಶ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17 (ಎ) ಅನ್ವಯ ತನಿಖೆಗೆ ಅನುಮತಿ ನೀಡಲಾಗಿದೆ. ಈ ಪ್ರಕರಣದ ವಿಚಾರಣೆ ಶುಕ್ರವಾರ ವಿಚಾರಣೆಗೆ ಲಿಸ್ಟ್‌ ಆಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನೂ ತನಿಖೆಗೆ ಒಳಪಡಿಸಲು 17 (ಎ) ಅನ್ವಯ ಪೂರ್ವಾನುಮತಿ ನೀಡಬೇಕೆಂದು ಕೋರಲು ಸಚಿವ ಸಂಪುಟ ನಿರ್ಣಯಿಸಿದೆ.

ಯಡಿಯೂರಪ್ಪ ಈಗ ಜನಪ್ರತಿನಿಧಿಯಲ್ಲ. ಆದರೆ ಪ್ರಕರಣ ನಡೆದಾಗ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಅವರು ಪ್ರಧಾನ ಆರೋಪಿಯಾಗುತ್ತಾರೆ. ಆದರೆ ಸಹ ಆರೋಪಿಗಳ ಮೇಲೆ ಮಾತ್ರ ತನಿಖೆ ನಡೆದು ಯಡಿಯೂರಪ್ಪ ಅವರನ್ನು ಹೊರಗಿಡುವುದಕ್ಕೆ ರಾಜ್ಯಪಾಲರ ಹಿಂದಿನ ನಿರ್ಣಯ ಅವಕಾಶ ಮಾಡಿಕೊಟ್ಟಿದೆ.

ಏನಿದು ಪ್ರಕರಣ?
ಬಿಡಿಎ ವ್ಯಾಪ್ತಿಯ ಬಿದರಹಳ್ಳಿ ಹೋಬಳಿ, ಕೊಡಸಪುರದಲ್ಲಿ 1 ಹಾಗೂ 3 ಮಹಡಿ ವಸತಿ ಸಮುತ್ಛಯವನ್ನು 567 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಿರ್ಧಾರ

ರಾಮಲಿಂಗಂ ಸಂಸ್ಥೆ 666.22 ಕೋಟಿ ರೂ., ನಾಗಾರ್ಜುನ 691.74 ಕೋಟಿ ರೂ.ಗೆ ಟೆಂಡರ್‌ ಕೋಟ್‌ ಮಾಡಿದ್ದವು.

Advertisement

ಅಂದಿನ ಸಿಎಂ ಯಡಿಯೂರಪ್ಪ ನೇಮಕ ಮಾಡಿದ ಬಿಡಿಎ ಆಯುಕ್ತ ಜಿ.ಸಿ. ಪ್ರಕಾಶ್‌ ರಾಮಲಿಂಗಂ ಕಂಪೆನಿಯಿಂದ 12 ಕೋಟಿ ರೂ. ಲಂಚ ಕೇಳಿದ ಆರೋಪ

ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ 2ನೇ ಆರೋಪಿ, ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಮೊಮ್ಮಗ ಶಶಿಧರ್‌ ಹೆಸರು ದೂರಿನಲ್ಲಿ ಉಲ್ಲೇಖ

ತೀರ್ಮಾನಕ್ಕೆ ಕಾರಣ?
ರಾಜ್ಯಪಾಲರು ಈ ಪ್ರಕರಣದಲ್ಲಿ ತಮ್ಮ ವಿವೇಚನೆ ಬಳಸದೆ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.

19-11-2020ರಲ್ಲಿ ದಾಖಲಾದ ದೂರಿನ ಆಧಾರದ ಮೇಲೆ 24-6-2021ರಂದು ರಾಜ್ಯಪಾಲರು ತನಿಖೆ ನಿರಾಕರಿಸಿರುವುದರ ಹಿಂದೆ ಅಂದಿನ ಸಿಎಂರನ್ನು ರಕ್ಷಿಸುವ ರಾಜಕೀಯ ಉದ್ದೇಶವಿರಬಹುದು.

ರಾಜ್ಯಪಾಲರ ಪೂರ್ವಾನುಮತಿ ಇಲ್ಲದಿರುವುದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುವುದಕ್ಕೆ ಅಡ್ಡಿಯಾಗಿದೆ.

ಬಿಎಸ್‌ವೈ, ವಿಜಯೇಂದ್ರ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿರುವ ಆಡಿಯೋ ದಾಖಲೆಗಳಿದ್ದು, ವಿವೇಚನೆ ಇಲ್ಲದೆ ನಿರಾಕರಣೆ ಮಾಡಲಾಗಿದೆ; ಹೀಗಾಗಿ ಮರುಪರಿಶೀಲನೆ ಸೂಕ್ತ ಎಂದು ಪರಿಗಣನೆ.

ಅಧಿಕಾರಿಗಳು ಮತ್ತಿತರ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿರುವಾಗ ಬಿಎಸ್‌ವೈ ಅವರನ್ನು ಮಾತ್ರ ರಕ್ಷಿಸುವುದು ಅರ್ಥಹೀನ.

Advertisement

Udayavani is now on Telegram. Click here to join our channel and stay updated with the latest news.

Next