Advertisement
ವಾಯವ್ಯ ಶಿಕ್ಷಕರ ಮತಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಲಕ್ಷ್ಮಣ ಸವದಿ ಮಾತನಾಡಿ, ವಿಧಾನ ಪರಿಷತ್ ಗಂಜಿಕೇಂದ್ರವಲ್ಲ ಅದೊಂದು ಚಿಂತಕರಚಾವಡಿ. ವಿಶ್ರಾಂತಿ ತೆಗೆದುಕೊಳ್ಳುವ ವ್ಯಕ್ತಿ ಕಾಂಗ್ರೆಸ್ ದಿಂದ ಸ್ಪರ್ಧೆ ಮಾಡಿರುವುದು ಯಾವ ಕಾರಣಕ್ಕಾಗಿ ಎಂದು ಟೀಕಿಸಿದರು.
ಸಚಿವ ಉಮೇಶ ಕತ್ತಿ ಮಾತನಾಡಿ, ರಾಜಕಾರಣದಲ್ಲಿ ಉದ್ಯೋಗ ಮಾಡಿಕೊಂಡಿರುವ ಪ್ರಕಾಶ ಹುಕ್ಕೇರಿ ಪದವೀಧರ ಮತ್ತು ಶಿಕ್ಷಕರು ಅಲ್ಲ ಅವರಿಗೆಕ್ಕೆ ಮತ ಹಾಕುತ್ತಿರಾ? ಎಂದು ಪ್ರಶ್ನಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ,ಬಿಜೆಪಿ ಸರಕಾರದ ಅವದಿಯಲ್ಲಿ ಶಿಕ್ಷಕರ ಬೇಡಿಕೆಗೆ ಸ್ಪಂಧಿಸಿದ್ದಾರೆ. ಅರುಣ ಶಹಾಪೂರ ಒಳ್ಳೆಯ ಕೆಲಸಗಾರ ಎಂದರು.
ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ,ಖಾಸಗಿ ಶಾಲೆಗಳಿಗೆ ಯಡಿಯೂರಪ್ಪ ಅನುದಾನ ನೀಡಿದ್ದಾರೆ. ಜ್ವಲಂತ ಸಮೊ ಪರಿಹಾರ ನೀಡಿರುವುದು ಬಿಜೆಪಿ. ವಿರೋಧ ಪಕ್ಷದ ಅಭ್ಯರ್ಥಿ ರಾಜಕೀಯ ಪುನರಕ್ಕಾಗಿ ಸ್ಪರ್ಧೆ ಮಾಡಿದ್ದಾರೆ. ವಿನಃ ಶಿಕ್ಷಣದ ಅಭಿವೃದ್ಧಿಗೆ ಸ್ಪರ್ಧೆ ಮಾಡಿಲ್ಲ ಎಂದರು.
ಪದವೀಧರ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ನಾಯಿಕ. ವಾದಿಗಳಿಗೆ ಸಹಾಯವಾಗಿ ಯಡಿಯೂರಪ್ಪ 10 ಕೋಟಿ ರೂ ಅನುದಾನ ನೀಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಲಾಗಿದೆ. ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದರು.
ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ ಮಾತನಾಡಿ, ಕಾಲ್ಪನಿಕ ವೇತನ ತಡೆಹಿಡಿದಿದ್ದು ಕಾಂಗ್ರೆಸ್ ಪಕ್ಷ. ಶಿಕ್ಷಕರೆಗೆ ಹಾಡಿಸ್ದುಯ ಬಿಜೆಪಿ. ಹೀಗಾಗಿ ಬರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು ಎಂದರು.
ವೇದಿಕೆ ಮೇಲೆ ಸಚಿವ ಮುರಗೇಶ ನಿರಾಣಿ. ಸಂಸದ ಅಣ್ಣಾಸಾಹೇಬ ಜೊಲ್ಲೆ. ಶಾಸಕರಾದ ಪಿ.ರಾಜೀವ. ದುರ್ಯೋಧನ ಐಹೋಳೆ. ಮಹೇಶ ಕುಮಟೋಳ್ಳಿ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ. ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ. ಜಗದೀಶ ಕವಟಗಿಮಠ. ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ. ಹಣಮಂತ ನಿರಾಣಿ. ವೈ ನಾರಾಯಣಸ್ವಾಮಿ. ಸಂಜಯ ಕವಟಗಿಮಠ. ಶಶಿಕಾಂತ ನಾಯಿಕ.ದುಂಡಪ್ಪ ಬೆಂಡವಾಡೆ. ಅಶೋಕ ಹರಗಾಪೂರೆ. ಬರತೇಶ ಬನವಣೆ. ಮಲ್ಲಿಕಾರ್ಜುನ ಕೋರೆ ಮುಂತಾದವರು ಇದ್ದರು.