ಬೆಂಗಳೂರು: ಮಾರ್ಚ್ 8ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದು ಎಲ್ಲಾ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಗಳು ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ ನಡೆಸಲಾಗಿದೆ. ಗೃಹ ಸೇರಿದಂತೆ ಇನ್ನೆರಡು ಇಲಾಖೆಗಳಿವೆ. ಅವುಗಳನ್ನು ಅರ್ಧ ದಿನದಲ್ಲಿ ಮಾಡಿದರೆ ಮುಗಿಯುತ್ತದೆ. ಇದಾದ ನಂತರ ಬಜೆಟ್ ಸಿದ್ದತೆಗಳು ಶುರುವಾಗುತ್ತವೆ ಎಂದರು.
ಇದನ್ನೂ ಓದಿ:391ನೇ ಛತ್ರಪತಿ ಶಿವಾಜಿ ಜಯಂತಿ : ಪ್ರಧಾನಿ ಸೇರಿ ಹಲವು ಪ್ರಮುಖ ನಾಯಕರಿಂದ ಶುಭಾಶಯ
ಏನೇನು ಕೊಡಬಹುದು, ಎಷ್ಟೆಷ್ಟು ಖರ್ಚಾಗಿದೆ ಎನ್ನುವುದರರ ಬಗ್ಗೆ ಚರ್ಚೆ ಮಾಡಿದ್ದೇವೆ. ಬಹಳ ಉಪಯುಕ್ತವಾದ ಸಭೆಯಾಗಿದೆ. ಹಣಕಾಸು ಇಲಾಖೆ ಅಧಿಕಾರಿ ಗಳ ಜೊತೆ ಚರ್ಚೆ ಮಾಡ್ತಿದ್ದೇವೆ. ಬಜೆಟ್ ಸಿದ್ದತೆ ಕೂಡ ಒಂದು ರೂಪಕ್ಕೆ ಬರುತ್ತಿದೆ ಎಂದರು.
ವಿವಿಧ ಸಮುದಾಯಗಳಿಂದ ಮೀಸಲಾತಿಗೆ ಬೇಡಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಸ್ಪಷ್ಟ ಮಾಡಿದ್ದೇನೆ. ಪ್ರತಿಯೊಬ್ಬ ಸಚಿವರು ಕೂಡ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಸಿಎಂ ಬಿಎಸ್ ವೈ ಹೇಳಿದರು.