Advertisement
ಈಗಾಗಲೇ ಎಲ್ಲ 224 ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಮಾ. 31ರಂದು ಬಿಜೆಪಿ ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಮೋರ್ಚಾದವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವೆಡೆ ಅಭಿ ಪ್ರಾಯ ಸಂಗ್ರಹ ತಡವಾಯಿತು. ಇವೆಲ್ಲವೂ ಒಂದು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.
ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ 90ರಿಂದ 105 ಸೀಟು ಗೆಲ್ಲಬಹುದು ಎಂದಿದೆ. ಜತೆಗೆ ಕರಾವಳಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸವಿದೆ. ಹೀಗಿರುವಾಗ ಅಭ್ಯರ್ಥಿಗಳ ಬದಲಾವಣೆ ಅಗತ್ಯವಿದೆಯೆ? ಒಂದು ವೇಳೆ ಬದಲಾಯಿಸಿದರೆ ಗೊಂದಲ ಸೃಷ್ಟಿಯಾಗುವುದೇ? ಅದನ್ನು ಸೀಮಿತ ದಿನಗಳಲ್ಲಿ ಸರಿಪಡಿಸಲು ಸಾಧ್ಯವೇ? ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಹಿರಿಯ ನಾಯಕರು ಲೆಕ್ಕ ಹಾಕುತ್ತಿದ್ದಾರೆ ಎನ್ನಲಾಗಿದೆ.
Related Articles
Advertisement
ಪರೋಕ್ಷ ಸೂಚನೆ?ವರಿಷ್ಠರು ಇನ್ನೂ ಯಾರ ಹೆಸರನ್ನೂ ಪ್ರಕಟಿಸಿಲ್ಲ. ಹಾಗೆಂದು ಕ್ಷೇತ್ರಗಳಲ್ಲಿ ಪಕ್ಷದ ಪ್ರಚಾರ ನಿಂತಿಲ್ಲ. ಬಹುತೇಕ ಟಿಕೆಟ್ ಖಚಿತ ಎಂದೆನಿಸಿರುವ ಅಭ್ಯರ್ಥಿಗಳ ಪರ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದು, ಶಾಸಕರು ಗಣ್ಯರು, ಹಿರಿಯರನ್ನು ಭೇಟಿ ಮಾಡುತ್ತಿದ್ದಾರೆ. ಇದು ಚುನಾವಣೆಗೆ ತಯಾರಾಗಿ ಎಂಬ ವರಿಷ್ಠರ ಪರೋಕ್ಷ ಸೂಚನೆಯ ಪರಿಣಾಮ ಎನ್ನಲಾಗುತ್ತಿದೆ. ಹೆಸರು ಪ್ರಕಟವಾದ ಮೇಲೆ ಅಭ್ಯರ್ಥಿಗಳ ಮನೆ ಮನೆ ಭೇಟಿ ಅಧಿಕೃತವಾಗಿ ಪ್ರಾರಂಭವಾಗಲಿದೆ. ದುಬಾರಿ ಆದೀತೆ?
ಸುಳ್ಯ, ಪುತ್ತೂರು ಕ್ಷೇತ್ರಗಳಲ್ಲಿ ಕಾಣಿಸಿದ ಬಿಕ್ಕ ಟ್ಟನ್ನು ಮುಂಚಿತವಾಗಿಯೇ ಹಿರಿಯ ನಾಯ ಕರು ಬಗೆಹರಿಸದಿರುವುದು ದುಬಾರಿಯಾಗಿ ಪರಿಣ ಮಿಸಬಹುದೇ ಎನ್ನುವ ಆತಂಕವೂ ಪಕ್ಷದ ಕಾರ್ಯಕರ್ತರಲ್ಲಿದೆ. ಮಂಗಳೂರು ಕ್ಷೇತ್ರ ದಲ್ಲೂ ಗುಂಪುಗಾರಿಕೆ ಇದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದೂ ಕಾರಣ. ಒಗ್ಗಟ್ಟಾಗಿ ಚುನಾ ವಣೆಗೆ ಹೋಗುವುದು ಬಿಟ್ಟು ಇಂಥ ಗುಂಪುಗಾರಿಕೆ ಸರಿಯಲ್ಲ ಎಂಬ ಅಭಿಪ್ರಾ ಯವೂ ಕಾರ್ಯಕರ್ತರಿಂದ ಕೇಳಿಬರುತ್ತಿದೆ.