ದಾವಣಗೆರೆ: ಭಗವಂತನನ್ನು ಬೇಕಾದರೂ ಕಾಣಬಹುದು. ಆದರೆ, ನಮ್ಮ ರಾಜ್ಯದ 25 ಜನ ಬಿಜೆಪಿ ಸಂಸದರಿಗೆ ಎರಡು ವರ್ಷದಿಂದ ಪ್ರಧಾನಮಂತ್ರಿ ಅವರನ್ನು ನೋಡಲಿಕ್ಕೂ ಆಗಿಲ್ಲ ಎಂದು ಚಿತ್ರದುರ್ಗ ಕ್ಷೇತ್ರದ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಬಿಜೆಪಿ ಸಂಸದರಿಗೆ ಪ್ರಧಾನಿ ಅವರನ್ನು ಭೇಟಿ ಆಗಲಿಕ್ಕೂ ಸಾಧ್ಯ ಇಲ್ಲ ಎಂದಾದ ಮೇಲೆ ಇಂತಹ ಸರ್ಕಾರ ಇರಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು. ಈಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯೇ ಇರಲಿಲ್ಲ ಎಂದಾದ ಮೇಲೆ ಸಂಸತ್, ಸಂವಿಧಾನ, ಸಂಸದರು ಯಾಕಿರಬೇಕು ಎನ್ನುವಂತಾಗುತ್ತದೆ ಎಂದರು.
ಇದನ್ನೂ ಓದಿ:ರೈಲ್ವೆ ಬ್ರಿಡ್ಜ್ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ: ನೀಲೂರು ಗ್ರಾಮದಲ್ಲಿ ನಿಷೇಧಾಜ್ಞೆ
ರಾಜ್ಯದಂತೆಯೇ ಕೇಂದ್ರದ ಆರೋಗ್ಯ ಸಚಿವರು ಯಾರು ಎಂಬುದು ಇಡೀ ದೇಶಕ್ಕೆ ಗೊತ್ತಿಲ್ಲ. ಕೋವಿಡ್-19 ಬಂದು ಆರು ತಿಂಗಳ ಆಗಿವೆ. ಕೇಂದ್ರದ ಆರೋಗ್ಯ ಸಚಿವರು ಪ್ರತಿ ದಿನ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯದ ಸ್ಥಿತಿಗತಿ, ಹಣಕಾಸು ಪರಿಸ್ಥಿತಿ, ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಉಪಕರಣ, ಮಾರ್ಗೋಪಾಯದ ಬಗ್ಗೆ ಚರ್ಚಿಸಿಲ್ಲ ಎಂದು ಹರಿಹಾಯ್ದರು.
ಕೆಪಿಸಿಸಿ ನೇತೃತ್ವದಲ್ಲಿ ಕಾಂಗ್ರೆಸ್ ನ ಕೋವಿಡ್ ವಾರಿಯರ್ಸ್ ಪ್ರಾಣದ ಹಂಗು ತೊರೆದು ಸೋಂಕು ನಿಯಂತ್ರಣಕ್ಕೆ ಜನರ ಬಳಿ ಹೋಗುತ್ತಿದ್ದಾರೆ. ಜನರಿಂದ ಗೆದ್ದಂತಹವರು ಯಾಕೆ ಜನರ ಬಳಿ ಹೋಗುತ್ತಿಲ್ಲ. ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ