Advertisement

ಪ್ರಗತಿಯಲ್ಲಿ ಬಿ.ಮೂಡ ಕಾಲೇಜು ಕಟ್ಟಡ ಕಾಮಗಾರಿ

02:44 PM Feb 10, 2021 | Team Udayavani |

ಬಂಟ್ವಾಳ: ನಗರ ಭಾಗದ ಸನಿಹದಲ್ಲೇ ಇದ್ದು, ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿರುವ ಬಿ.ಮೂಡ ಸರಕಾರಿ ಪ.ಪೂ. ಕಾಲೇಜಿನ ಕೊಠಡಿಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಂಜೂರುಗೊಂಡಿರುವ 1 ಕೋ.ರೂ.ಗಳ ನೂತನ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಒಂಭತ್ತು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Advertisement

558.3 ಚ.ಮೀ. ವಿಸ್ತೀರ್ಣದ ಜಿ ಪ್ಲಸ್‌ ವನ್‌ ನೂತನ ಕಟ್ಟಡದಲ್ಲಿ ಮೂರು ತರಗತಿ ಕೊಠಡಿಗಳು ಹಾಗೂ 2 ಪ್ರಯೋಗಾಲಯ ಕೊಠಡಿಗಳು ನಿರ್ಮಾಣಗೊಳ್ಳಲಿದೆ. ಬಿ.ಸಿ.ರೋಡ್‌ನಿಂದ ಗೂಡಿನಬಳಿ ರಸ್ತೆಯಲ್ಲಿ ಬಂಟ್ವಾಳ ರೈಲ್ವೇ ನಿಲ್ದಾಣದ ಪಕ್ಕದಲ್ಲಿ ಕಾಲೇಜಿದ್ದು, ನಗರ ಪ್ರದೇಶದಲ್ಲೇ ಇರುವುದರಿಂದ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕಾಲೇಜಿಗೆ ಹೆಚ್ಚಿನ ಕೊಠಡಿಗಳ ಬೇಡಿಕೆ ಇದ್ದು, ಕೆಲವು ತಿಂಗಳ ಹಿಂದೆ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಶಿಲಾನ್ಯಾಸ ನೆರವೇರಿಸಿದ್ದರು.

ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಪ್ರಸ್ತುತ ತಳಪಾಯದ ಕಾಮಗಾರಿ ಪ್ರಗತಿಯಲ್ಲಿದೆ. ಪಿಲ್ಲರ್‌ಗಳಿಗೆ ಕಬ್ಬಿಣದ ರಾಡ್‌ ಅಳವಡಿಕೆ ಪೂರ್ಣಗೊಂಡಿದೆ. ಲೋಕೋಪಯೋಗಿ ಇಲಾಖೆಯ ಮೂಲಕ ಜೆ.ಡಿ.ಸುವರ್ಣ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಯು ಕಾಲೇಜು ಕಟ್ಟಡದ ಕಾಮಗಾರಿ ನಿರ್ವಹಿಸುತ್ತಿದೆ.

ತಲಾ 279.15 ಚ.ಮೀ.ನ 2 ಮಹಡಿನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ತಳ ಮಹಡಿ ಹಾಗೂ ಮೇಲೆ ಒಂದು ಮಹಡಿಯನ್ನು ಒಳಗೊಂಡಿದ್ದು, ಎರಡೂ ಕೂಡ ತಲಾ 279.15 ಚದರ ಮೀಟರ್‌ ವಿಸ್ತೀರ್ಣವನ್ನು ಒಳಗೊಂಡಿರುತ್ತದೆ. ಎರಡರಲ್ಲಿಯೂ 2 ಮೀ. ಅಗಲದಲ್ಲಿ ಕಾರಿಡಾರ್‌ ನಿರ್ಮಾಣವಾಗಲಿದೆ.

ತಳ ಮಹಡಿಯಲ್ಲಿ 9 ಮೀ.x6.5 ಮೀ.ನ ಮೂರು ತರಗತಿ ಕೊಠಡಿಗಳು ನಿರ್ಮಾ ಣವಾಗಲಿವೆ. ಮೇಲಿನ ಮಹಡಿಯಲ್ಲಿ ಕಾಲೇಜಿನ ಎರಡು ಪ್ರಯೋಗಾಲಯ ಕೊಠಡಿಗಳು ನಿರ್ಮಾಣವಾಗಲಿದ್ದು, ಒಂದು 13.615 ಮೀ. x 6.5 ಮೀ. ಹಾಗೂ ಮತ್ತೂಂದು 9 ಮೀ. x 6.5 ಮೀ. ವಿಸ್ತೀರ್ಣವನ್ನು ಒಳಗೊಂಡಿರುತ್ತದೆ. ಜತೆಗೆ 4.38 ಮೀ. 6.5 ಮೀ. ವಿಸ್ತೀರ್ಣದ ಮಹಿಳೆಯರ ಶೌಚಾಲಯವೂ ನಿರ್ಮಾಣಗೊಳ್ಳಲಿದೆ. ಎರಡೂ ಮಹಡಿಗಳಲ್ಲಿ ಮೆಟ್ಟಿಲುಗಳ ಸ್ಟೇರ್‌ಕೇಸ್‌ ನಿರ್ಮಾಣವಾಗಲಿದೆ. ಪುರುಷರ ಶೌಚಾಲಯ ಪ್ರತ್ಯೇಕವಾಗಿ ನಿರ್ಮಾಣವಾಗಲಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ:ಸಾಮಾನ್ಯ ಹೆರಿಗೆಗೂ ಸಿಜೇರಿಯನ್‌ ಮಾಡಿಸಲು ವೈದ್ಯರ ಸೂಚನೆ!

ತಳ ಭಾಗ ಒಸರಿನ ಪ್ರದೇಶ

ಪ್ರಸ್ತುತ ಕಾಲೇಜು ಕಟ್ಟಡವು ಗೂಡಿನಬಳಿ ರಸ್ತೆಗಿಂತ ತಳ ಭಾಗದಲ್ಲಿ ಇದ್ದು, ಜತೆಗೆ ನೇತ್ರಾವತಿ ನದಿ ಪಕ್ಕದಲ್ಲೇ ಇರುವ ಕಾರಣ ತಳಭಾಗವು ಒಸರಿನಿಂದ ಕೂಡಿದೆ. ಕಟ್ಟಡಕ್ಕೆ ಪಿಲ್ಲರ್‌ಗಳನ್ನು ಎಬ್ಬಿಸುವುದಕ್ಕೆ ಪಾಯ ತೆಗೆಯುವ ವೇಳೆ ನೀರು ಸಿಕ್ಕಿತ್ತು. ಹೀಗಾಗಿ ಕಾಮಗಾರಿಯ ವೇಗಕ್ಕೆ ತಡೆ ಬಿದ್ದಿದೆ. ನೀರಿನ ಪ್ರದೇಶದಲ್ಲಿ ನಿರೀಕ್ಷೆಯಂತೆ ಕಾಮಗಾರಿ ನಡೆಸುವುದು ಅಸಾಧ್ಯವಾಗಿರುವ ಜತೆಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಗುತ್ತಿಗೆಯ ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next