Advertisement

ನಾವು ಯಾರಿಗೇನು ಕಡಿಮೆ?

12:55 AM Jan 19, 2019 | |

ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಇಂಗ್ಲೀಷ್‌ ತರಬೇತಿ ನೀಡವುದು, ಕಂಪ್ಯೂಟರ್‌ ಶಿಕ್ಷಣ ನೀಡುವುದು ಈ ಶಾಲೆಯ ವಿಶೇಷ ಪ್ರಯತ್ನಗಳು ಎನ್ನಬಹುದು.  ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದೇ ಇದ್ದರೆ ಶಿಕ್ಷಕರು ಮನೆ ಮನೆಗೆ ಹೋಗಿ ಮಕ್ಕಳು ಹೇಗೆ ಓದುತ್ತಾರೆ ಅನ್ನೋದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಮತ್ತೆ ಅವರನ್ನು ಶಾಲೆಗೆ ಕರೆ ತರುತ್ತಾರೆ. ಇದೇ ಬಿ. ಹೊಸೂರು ಶಾಲೆಯ ವಿಶೇಷ. 

Advertisement

ಶಿಕಾರಿಪುರ ತಾಲ್ಲೂಕಿನ ಬಿ.ಅಣ್ಣಾಪುರ, ಚಿಕ್ಕಾಪುರ ಗ್ರಾಮದ ಎರಡೂ ಸರ್ಕಾರಿ ಶಾಲೆಗಳು ಮುಚ್ಚಿ ಹೋದವು.  ಸರ್ಕಾರಿ ಶಾಲೆಗಳನ್ನು ಹೀಗೆ ಮಾಡಿದರೆ ಮುಂದೇನÅಪ್ಪಾ ಗತೀ ಅಂತ ಎಲ್ಲರ ಯೋಚನೆ ಶುರುವಾಯ್ತು. 

 ಈ ಆತಂಕ ಸಾಗರ ತಾಲೂಕಿಗೂ ಹರಡಿ, ಅಲ್ಲಿನ ಬಿ. ಹೊಸೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೂ ಹೊಕ್ಕು, ಇಲ್ಲಿ ಕಡಿಮೆ ಹಾಜರಾತಿ ಇದೆ. ಹಾಗಾಗಿ, ಈ ಶಾಲೇನೂ ಮುಚ್ಚೋಣ- ಅಂತ ಸರ್ಕಾರ ತೀರ್ಮಾನಿಸುವ ಹೊತ್ತಿಗೆ ಅಲ್ಲಿದ್ದ ಮುಖ್ಯ ಶಿಕ್ಷಕ ಕೆ.ಎಸ್‌. ಪ್ರಕಾಶ್‌ ಅಡ್ಡ ಬಂದರು.

Advertisement

 “ನನಗೆ ಸ್ವಲ್ಪ ಸಮಯ ಕೊಟ್ಟು ನೋಡಿ, ಈ ಶಾಲೇನ ಮಾದರಿ ಶಾಲೆ ಮಾಡ್ತೀವಿ ಅಂತ ಹೇಳಿದರು. ಈ ಮಾತನ್ನು ಮೇಲಿನ ಅಧಿಕಾರಿಗಳು ನಂಬಿದರು. ನಂತರ ಇದು ಮಾದರಿ ಪ್ರಾಥಮಿಕ ಶಾಲೆಯೂ ಆಯಿತು.  ಈ ಶಾಲೆಯ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ  ಅಲೆಮಾರಿ ಜನಾಂಗದವರೇ ಹೆಚ್ಚು. ಇದರೊಳಗೆ ಅನಕ್ಷರಸ್ಥರೂ ಸೇರಿದ್ದಾರೆ. ಹಾಗಾಗಿ, ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಲೇಬೇಕಾದ ಹೆಚ್ಚಿನ ಜವಾಬ್ದಾರಿ ಇದೆ. ಕಡಿಮೆ ಸಂಖ್ಯೆಯಲ್ಲಿ ಇದ್ದ ವಿದ್ಯಾರ್ಥಿಗಳ ಹಾಜರಿ ಶಿಕ್ಷಕರ ಪ್ರಯತ್ನ ದಿಂದ ದಿನೇ ದಿನೇ ಸಂಖ್ಯೆ ವೃದ್ದಿಸುತ್ತ ಬಂದಿದೆ. ಎಷ್ಟೆಂದರೆ, ಖಾಸಗಿ ಶಾಲೆಯ ಮಕ್ಕಳು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಶಾಲೆಗೆ ಸೇರ್ಪಡೆ ಗೊಳ್ಳುತ್ತಿದ್ದಾರೆ.  ಶಾಲೆಯಲ್ಲಿ ಪರಿಸರ, ಆರೋಗ್ಯ, ಸಾಮಾಜಿಕ ಚಿಂತನೆಗಳನ್ನು ರೂಢಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಶಿಬಿರಗಳನ್ನು ಆಯೋಜಿಸಲಾಗಿದೆ. 

ಕೃಷಿಗೆ ಆದ್ಯತೆ 
ಬೇರೆಶಾಲೆಗಳಿಗೆ ಹೋಲಿಸಿದರೆ ಬಿ.ಹೊಸೂರು ಶಾಲೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಗಳಿಗೆ ಹೆಚ್ಚು ಗಮನ ನೀಡುತ್ತಿದೆ.  ಮುಖ್ಯವಾಗಿ, ಕೃಷಿಯ ಬಗ್ಗೆ ಮಕ್ಕಳಿಗೆ ಪ್ರಾಕ್ಟಿಕಲ್‌ ಪಾಠ ಮಾಡಲಾಗುತ್ತಿದೆ. 

ಶಿಕ್ಷಕ ಕೆ.ಎಸ್‌ ಪ್ರಕಾಶ್‌ ಮಕ್ಕಳನ್ನು ಕೈ ತೋಟಕ್ಕೆ ಕರೆದು ಕೊಂಡು ಬಂದು ಪಾಠ ಮಾಡುತ್ತಾರೆ.  ಇಲ್ಲಿನ ಪರಿಸರಕ್ಕೆ ಪೂರಕವಾದ ತರಕಾರಿ ಹಣ್ಣುಗಳನ್ನು ಬೆಳೆಯುತ್ತಾರೆ. ಹಣ್ಣು, ತರಕಾರಿ ತಿಂದರೆ ಆರೋಗ್ಯ ಹೇಗೆ ವೃದ್ಧಿಸುತ್ತದೆ, ಅದರಲ್ಲಿ  ಎಂಥ ಪೋಷಕಾಂಶಗಳಿರುತ್ತದೆ ಎಂಬುದರ ಬಗ್ಗೆ ಪಾಠ ಮಾಡುತ್ತಾರೆ. ಇದರಿಂದ ಮಕ್ಕಳಿಗೆ ಪರಿಸರ ಪ್ರಜ್ಞೆ, ಕೃಷಿ ಜ್ಞಾನ ಎರಡೂ ವಿಸ್ತರಿಸುತ್ತದೆ. 

ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಇಂಗ್ಲೀಷ್‌ ತರಬೇತಿ ನೀಡವುದು, ಕಂಪ್ಯೂಟರ್‌ ಶಿಕ್ಷಣ ನೀಡುವುದು ಈ ಶಾಲೆಯ ವಿಶೇಷ ಪ್ರಯತ್ನಗಳು ಎನ್ನಬಹುದು.  ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದೇ ಇದ್ದರೆ ಶಿಕ್ಷಕರು ಮನೆ ಮನೆಗೆ ಹೋಗಿ ಮಕ್ಕಳು ಹೇಗೆ ಓದುತ್ತಾರೆ ಅನ್ನೋದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಮತ್ತೆ ಅವರನ್ನು ಶಾಲೆಗೆ ಕರೆ ತರುತ್ತಾರೆ. ಈ ಶಾಲೆ ಯಾವ ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲ. ಶಾಲೆ ಪ್ರಾರಂಭವಾಗುವ ಮೊದಲು, ನಂತರ ಹೆಚ್ಚುವರಿ ವಿಶೇಷ ತರಗತಿಗಳನ್ನೂ ನಡೆಯುತ್ತವೆ, ವರ್ಷದಲ್ಲಿ ಒಂದು ಸಲ ವಿದ್ಯಾರ್ಥಿಗಳಿಗೆ ಸೂಕ್ತ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಇವೆಲ್ಲದರ ಜೊತೆಗೆ ಸಂಗೀತ, ಕರಕುಶಲ ತರಬೇತಿಗಳನ್ನು ಹಮ್ಮಿ ಕೊಳ್ಳುತ್ತಿದ್ದಾರೆ. ಇವೆಲ್ಲಕ್ಕೂ ದಾನಿಗಳ ಸಹಕಾರವಿದೆಯಂತೆ. ರೈತ ಕುಟುಂಬದಿಂದ ಬಂದ ಮುಖ್ಯ ಶಿಕ್ಷಕ ಕೆ.ಎಸ್‌. ಪ್ರಕಾಶ್‌ ಅವರ ಶ್ರಮದಿಂದ ಮಕ್ಕಳು ವಿದ್ಯಾವಂತರಾಗಿದ್ದಾರೆ.   ಅವರ ಸೇವೆ ನಮ್ಮ ಮಕ್ಕಳಿಗೆ ದಾರಿ ದೀಪವಾಗಿದೆ ಎನ್ನುತ್ತಾರೆ ಗ್ರಾಮಸ್ಥ ರಾಮಜ್ಜ. ಶಿಕ್ಷಕ ಪ್ರಕಾಶ್‌ ಅವರಿಗೆ 2018-19 ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅರಸಿ ಬಂದಿದೆ. 

ಪ್ರದೀಪ

Advertisement

Udayavani is now on Telegram. Click here to join our channel and stay updated with the latest news.

Next