Advertisement
“ಆರ್ಟ್ ಮಾಸ್ಟರ್” ಎಂಬ ಗೌರವಕ್ಕೆ ಪಾತ್ರ ರಾಗಿ ಮಂಗಳೂರು ನಗರವನ್ನು ಸೀಮಿತವಾಗಿಟ್ಟುಕೊಳ್ಳದೆ ಕಲಾಸಕ್ತಿಯ ವಿದ್ಯಾರ್ಥಿಗಳ ಸಮಯ- ಅವಕಾಶಕ್ಕೆ ಸ್ಪಂದಿಸಿದರು. ತಮ್ಮ ಬಿಜಿಎಂ ಕಲಾಶಾಲೆಯ ಮೂಲಕ ಕಲಾ ಸಕ್ತಿಗೆ ತಕ್ಕಂತೆ ವಿವಿಧ ಮಾಧ್ಯಮಗಳಲ್ಲಿ ಚಿತ್ರಕಲೆಯ ಅರಿವು ಮೂಡಿಸಿದ ಹೆಗ್ಗಳಿಕೆ ಅವರದು. ರೇಖೆಗಳ ಚಿತ್ರ, ನಿಸರ್ಗದ ಚಿತ್ರಣ, ಏಳು ಬಣ್ಣಗಳ ಬಳಕೆ, ಸಂಯಮ, ಲೋಪ ದೋಷ ಗಳ ತಿದ್ದುವಿಕೆ… ಹೀಗೆ ಮಹಮ್ಮದ್ ಅವರು ಕಲಾ ವಿದ್ಯಾರ್ಥಿ ಸಮುದಾಯದ ವರಿಗೆ ನಾನಾ ಬಗೆಯ ಚಿತ್ರಗಳ ರಚನೆಗೆ ಪ್ರೇರಣೆ ನೀಡಿದ್ದರು. ವೃತ್ತಿಪರ ಚಿತ್ರಕಲಾವಿದರಾಗಲು ಬೆಂಬಲಿಸಿದರು. ಚಿತ್ರಕಲಾ ಪರೀಕ್ಷೆಗಳಲ್ಲಿ ಅಗ್ರ ಮಾನ್ಯ ಸ್ಥಾನ ಗಳಿಸಲು ಮಾರ್ಗದರ್ಶನ ನೀಡಿದರು.
ಚಿತ್ರ ಕಲಾವಿದರಾಗುವುದು ಸುಲಭವಲ್ಲ. ಆದರೆ ಸತತ ಪ್ರಯತ್ನ, ಬದ್ಧತೆಯಿದ್ದರೆ ಉತ್ತಮ ಚಿತ್ರಕಲಾವಿದರಾಗುವಂತೆ ಬಿ.ಜಿ.ಎಂ. ಕಲಾಶಾಲೆ ದಾರಿದೀಪವಾಗಿತ್ತು ಎಂದು ಸಸ್ಯ ಶಾಸ್ತ್ರ ಪ್ರಾಧ್ಯಾಪಕ, ಕಲಾವಿದ ಪ್ರೊ| ಅನಂತ ಪದ್ಮನಾಭ ರಾವ್ ನೆನಪಿಸಿಕೊಳ್ಳುತ್ತಾರೆ. ಗಣೇಶ ಸೋಮಯಾಜಿ, ಶರತ್ ಹೊಳ್ಳ, ನವೀನಾ ರೈ, ಶ್ರೀಲತಾ, ಸಪ್ನಾ ನೊರೊನ್ಹಾ, ಭಾರತಿ ಶೆಟ್ಟಿ (ವಿ.ಪ. ಸದಸ್ಯೆ), ಅರುಣ್ ಕುಮಾರ್ ಸುವರ್ಣ ಮುಂತಾ ದವರು “”ಮಾಸ್ಟರ್ ಚಿತ್ರಿ ಸುತ್ತಿದ್ದ ರೀತಿ ಈಗಲೂ ನಮಗೆಲ್ಲರಿಗೆ ವರವಾಗಿದೆ” ಎಂದೇ ಸ್ಮರಿಸುತ್ತಾರೆ. ಸೃಜನ ಶೀಲ ಕಲಾವಿ ದರಾಗಬೇಕು ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಮಹ ಮ್ಮದ್ ಅವರು ಚಿತ್ರಕಲೆ ಯಲ್ಲಿ ಪಳಗಿಸಲು ಪ್ರಾಮಾಣಿಕ ಯತ್ನ ಮಾಡಿದ್ದಾರೆಂಬುವುದು ಇಂದಿನ ಅವರ ಶಿಷ್ಯರ ಸದಭಿಪ್ರಾಯವಾಗಿದೆ.
Related Articles
Advertisement
ಜನ್ಮಶತಮಾನೋತ್ಸವ: ಶಿಷ್ಯರಿಂದ ಸ್ಮರಣೆ ಬಿ.ಜಿ. ಮಹಮ್ಮದ್ ಅವರು 90 ವರ್ಷಗಳು ಬದುಕಿ, 2010ರ ಜನವರಿ 26ರಂದು ನಿಧನ ಹೊಂದಿದರು. ಅವರ ಶಿಷ್ಯರು ಅವರ ಜನ್ಮ ಶತಮಾ ನೋತ್ಸವವನ್ನು ಯೋಗ್ಯ ರೀತಿಯಲ್ಲಿ ಆಚರಿ ಸುತ್ತಿ ದ್ದಾರೆ (ಅ.28, 30). ಇದರ ಅಂಗವಾಗಿ ಚಿತ್ರಕಲಾ ಪ್ರದರ್ಶನ, ಆಶು ಚಿತ್ರಕಲಾ ಪ್ರಾತ್ಯಕ್ಷಿಕೆ, ಉಪನ್ಯಾಸ ಏರ್ಪಡಿಸ ಲಾಗಿದೆ. ಚಿತ್ರಕಲಾವಿದರಾಗಿ ಅವರಿಂದ ಪ್ರೇರಣೆ ಪಡೆದು, ಕಲಾಸಾಧನೆ ಮಾಡಿದವ ರನ್ನು ಸಮ್ಮಾನಿಸಲಿದ್ದಾರೆ. ಬಿ.ಜಿ.ಎಂ. ಪ್ರಶಸ್ತಿ ಗೌರವಗಳಿಗಾಗಿ ಚಿತ್ರಶಾಲೆ ತೆರೆದವರಲ್ಲ. ಆದರೆ ಅವರ ಶಿಷ್ಯ ಬಳಗದವರು ಖ್ಯಾತನಾಮ ರಾಗಿ, ಚಿತ್ರಕಲಿಕೆಯ ಪ್ರಸಾರಕ್ಕಾಗಿ ಪರಿಶ್ರಮಿ ಸುತ್ತಿ ದ್ದಾರೆಂಬುದು ಬಿ.ಜಿ.ಎಂ. ಪ್ರೇರಣೆ!
– ಡಾ| ಎಸ್.ಎನ್. ಅಮೃತ ಮಲ್ಲ