ಚಿತ್ರದುರ್ಗ: ಇಲ್ಲಿನ ಬಿ.ಜಿ.ಕೆರೆ ಬಳಿ ರವಿವಾರ ಬೆಳಗ್ಗೆ ನಡೆದ ಕ್ರೂಸರ್- ಬಸ್ ನಡುವಿನ ಭೀಕರ ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದವರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಗಾಯಗೊಂಡವರ ಸಂಖ್ಯೆ ಎಂಟಕ್ಕೇರಿದೆ.
ದೇವದುರ್ಗ ಮೂಲದ ನಾಗಮ್ಮ(42), ಪುತ್ರ ಜ್ಯೋತಿ ಬಸವ (20), ಬುಡ್ಡಪ್ಪ (40) ಮೃತಪಟ್ಟವರು.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ರವಿವಾರ (ಡಿ.27) ಬೆಳಗಿನ ಜಾವ ಕ್ರೂಸರ್ ಮತ್ತು ಬಸ್ ನಡುವೆ ಅಪಘಾತ ನಡೆದಿತ್ತು. ಕ್ರೂಸರ್ ನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. 17 ಜನರು ಗಾಯಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಾವಣೆಗೆರೆಯ ಎಸ್ ಎಸ್ ಆಸ್ಪತ್ರೆಯಲ್ಲಿಂದು ಮೂವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ವಲಸಿಗರ ಬದುಕಿಗೆ ಭದ್ರತೆ :”ಗ್ರಾಮ ವಾಪಸಿ’ಯಾದ ಕುಟುಂಬಗಳ ಸಮೀಕ್ಷೆ
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನಿವಾಸಿಗಳಾದ ತಿಮ್ಮಣ್ಣ ಬಾಲಪ್ಪ (40), ರತ್ನಮ್ಮ ತಿಮ್ಮಣ್ಣ (38), ಚಾಲಕ ಮಹೇಶ ಶಿವಯ್ಯಸ್ವಾಮಿ (19), ದುರುಗಪ್ಪ ಶಿವಪ್ಪ (15) ಹಾಗೂ ಅಮರೇಶ ನಿಂಗಣ್ಣ (50) ಸ್ಥಳದಲ್ಲೇ ಮೃತಪಟ್ಟಿದ್ದರು.
ದೇವದುರ್ಗ ತಾಲೂಕಿನ ವಿವಿಧ ಗ್ರಾಮಗಳ ಇವರೆಲ್ಲ ಕೂಲಿ ಕೆಲಸಕ್ಕಾಗಿ ಕ್ರೂಸರ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು.