Advertisement

ಅಕಾಲಿಕ ಮಳೆಗೆ ಭತ್ತ ನಷ್ಟ: ರೈತರಿಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದ ಸಚಿವ ಬಿ ಸಿ ಪಾಟೀಲ್

01:17 PM Apr 09, 2020 | keerthan |

ಗಂಗಾವತಿ: ಅಕಾಲಿಕ ಮಳೆಗಾಳಿಗೆ ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಭತ್ತದ ಬೆಳೆದ ಪ್ರದೇಶಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಅಕಾಲಿಕ ಮಳೆಗೆ ರೈತರು ಬೆಳೆದ ಭತ್ತ ಸಂಪೂರ್ಣ ನಷ್ಟವಾಗಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಇದರಿಂದ ರೈತರು ಧೃತಿಗೆಡಬಾರದು. ಸರಕಾರ ರೈತರ ಪರವಾಗಿದ್ದು, ಮುಖ್ಯಮಂತ್ರಿಗಳಿಗೆ ಸರ್ವೇ ವರದಿ ಸಲ್ಲಿಸಿ ಪ್ರತಿ ಎಕರೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಪರಿಹಾರ ಕೊಡಲಾಗುತ್ತದೆ. ತೋಟಗಾರಿಕೆಯ ಬೆಳೆಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಇದಕ್ಕೂ ಪರಿಹಾರ ಕೊಡಿಸಲಾಗುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಭತ್ತ‌ ಹಾಗು ಕೃಷಿ ತೋಟಗಾರಿಕೆ ಬೆಳೆಗಳ ಖರೀದಿ ಮತ್ತು ಸಾಗಾಣಿಕೆ ನಡೆಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿ, ಪರವಾನಿಗೆ ನೀಡಲಾಗುತ್ತದೆ ಎಂದರು.

ಜೀರಾಳ ಕಲ್ಗುಡಿ, ಹಣವಾಳ ಬಾಪಿರೆಡ್ಡಿ ಕ್ಯಾಂಪ್, ಬಸಾಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ನಷ್ಟವಾದ ಭತ್ತದ ಗದ್ದೆಗರ ಭೇಟಿ ನೀಡಿ ವೀಕ್ಷಿಸಿ ರೈತರ ಜತೆ ಮಾತುಕತೆ ನಡೆಸಲಾಯಿತು.

ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ದಡೇಸುಗೂರು‌ ಬಸವರಾಜ, ಮಾಜಿ ಶಾಸಕ ಜಿ.ವೀರಪ್ಪ,ರಾಜ್ಯ ಕೃಷಿ ಬೆಲೆ  ಆಯೋಗದ ಅಧ್ಯಕ್ಷ ಬೆಳಗುರ್ಕಿ ಹನುಮನಗೌಡ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ರೈತ ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ತಿಪ್ಪೇರುದ್ರಸ್ವಾಮಿ ಸೇರಿ ಅನೇಕರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next