Advertisement
ಯಲಬುರ್ಗಾ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರ ಜೊತೆ ಮಾತನನಾಡಿ, ಡ್ರಗ್ ಮಾಫಿಯಾದಲ್ಲಿ ಯಾರ ಕೈವಾಡ ಇದೆ ಎನ್ನುವುದು ತನಿಖೆಯಿಂದ ಬಯಲಿಗೆ ಬರಲಿದೆ. ಆದರೆ ಡ್ರಗ್ ಮಾಫಿಯಾ ಎನ್ನೊದು ಕೆಟ್ಟ ಪರಿಮಾಣ ಬೀರುತ್ತದೆ. ಇದರ ನಿರ್ಮೂಲನೆಗೆ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
Related Articles
Advertisement
ಗಾಂಜಾ ಲೀಗಲ್ ಮಾಡೋದು ತಪ್ಪು. ಅದನ್ನು ಮಾಡಬಾರದು. ಇಂದು ತಂಬಾಕು ಮಾರಾಟ ಮಾಡುವುದು ತಪ್ಪೆ. ಒಂದು ಸಿಗರೇಟಿನಲ್ಲಿ ತಂಬಾಕು ಇದ್ದರೂ ಜನ ಅದನ್ನು ಸೇವನೆ ಮಾಡುತ್ತಾರೆ. ಆದರೆ ಡ್ರಗ್ ಎನ್ನೋದು ಅತಿರೇಕಕ್ಕೆ ಹೋಗುವಂತದ್ದು, ಮನುಷ್ಯನ ಜೀವನವನ್ನೆ ಬಲಿ ಪಡೆಯುತ್ತದೆ ಎಂದರು.
ಇನ್ನು ಕೃಷಿ ಪದವಿ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋಡಿಹಳ್ಳಿ ಅವರಿಗೆ ಈ ಬಗ್ಗೆ ಜ್ಞಾನ ಇಲ್ಲ ಅಂತ ನಾನು ತಿಳಿದುಕೊಳ್ಳುವೆ. ಪದವಿಯಲ್ಲಿ ಶೇ.40 ರಷ್ಟು ರೈತರ ಮಕ್ಕಳಿಗೆ ಅವಕಾಶ ಇದ್ದೆ ಇರುತ್ತದೆ. ನಾನೂ ರೈತನ ಮಗ ನಾವೂ ಕೃಷಿ ಮಾಡಿದ್ದೇನೆ. ನಮ್ಮ ಮುತ್ತಾತನ ಕಾಲದಿಂದಲೂ ಕೃಷಿಯಲ್ಲಿ ತೊಡಗಿದ್ದೇವೆ ಎಂದರು.
ಇದನ್ನೂ ಓದಿ: ಕುಂಟಿಕಾನ ವಸತಿ ಸಮುಚ್ಛಯ ತಡೆಗೋಡೆ ಕುಸಿತ:10ಕ್ಕೂ ಹೆಚ್ಚು ಕಾರುಗಳು ಮಣ್ಣಿನಡಿ ಹೂತಿರುವ ಶಂಕೆ
ಸಿನಿಮಾ ನಟನನ್ನು ಕೃಷಿ ಸಚಿವನನ್ನಾಗಿ ಮಾಡಿದ್ದಾರೆ ಎಂದಿದ್ದಾರೆ. ರೈತ ಪರವಾಗಿ ಹೋರಾಟ ಮಾಡಿ 20 ದಿನಗಳ ಕಾಲ ಹಿಂಡಲಗಾ ಜೈಲಿಗೆ ಹೋಗಿ ಬಂದಿದ್ದೇನೆ. ಆದರೆ ಕೋಡಿಹಳ್ಳಿ ಅವರು ಏಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ನಾವು ಕಳಪೆ ಬೀಜ ಪತ್ತೆ ಮಾಡಿದಾಗ ಯಾರೊಬ್ಬರೂ ನಮ್ಮ ಬಗ್ಗೆ ಮಾತನಾಡಲಿಲ್ಲ. ನಾವು ಒಳ್ಳೆ ಕೆಲಸ ಮಾಡುತ್ತಿದ್ದೇವೆ. ಯಾವ ಕೃಷಿ ಮಂತ್ರಿಯ ಕಾಲದಲ್ಲೂ ಕಳಪೆ ಬೀಜ ಹಿಡಿದಿಲ್ಲ. ನಾವು 12 ಕೋಟಿ ಕಳಪೆ ಬೀಜ ಹಿಡಿದಿದ್ದೇವೆ. ಕೋಡಿಹಳ್ಳಿ ಅವರು ಪ್ರಚಾರಕ್ಕಾಗಿ ಹೀಗೆ ಹೇಳಿದ್ದಾರೆ ಎಂದರು.
ವಿಧಾನ ಸೌಧಕ್ಕೆ ರೈತರ ಮುತ್ತಿಗೆ ವಿಚಾರ ಕಾಯ್ದೆಗಳ ತಿದ್ದುಪಡಿ ಕುರಿತು ಸರ್ಕಾರವು ಸದನಲ್ಲಿ ಸಮರ್ಪಕ ಉತ್ತರ ಕೊಡಲಿದೆ. ಮೆಕ್ಕೆಜೋಳ ಖರೀದಿ ಮಾಡುವಂತೆ ಉಪ ಸಮಿತಿಯಲ್ಲಿ ಒತ್ತಾಯ ಮಾಡಿದ್ದೀವಿ. ಇದನ್ನು ನಾನು ಗ್ಯಾರಂಟಿ ಕೊಡಲ್ಲ. ಈ ವರೆಗೂ ಖರೀದಿ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದರು.