Advertisement

ರಾಜ್ಯದಲ್ಲಿ ಕೃಷಿಗೆ ಬಳಸುವ 175 ಕಳಪೆ ಔಷಧಗಳ ಪತ್ತೆ: ಸಚಿವ ಬಿ.ಸಿ.ಪಾಟೀಲ್

03:30 PM Apr 14, 2020 | keerthan |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೃಷಿಗೆ ಬಳಸುವ ಔಷಧಗಳ ಪೈಕಿ ಸುಮಾರು 175 ಮಾದರಿಗಳು ಕಳಪೆ ಇರುವುದು ಬೆಳಕಿಗೆ ಬಂದಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಬಹಿರಂಗ ಪಡಿಸಿದರು.

Advertisement

ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ‌ ಭಾಗವಹಿಸಿದ‌ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕೃಷಿಗೆ ಬಳಸುವ ಔಷಧಗಳು ಪರಿಣಾಮವಾಗಿಲ್ಲ. ಬಹಳಷ್ಟು ಕಳಪೆ ಆಗಿವೆ ಎಂಬ ರೈತರಿಂದ ಬಂದ ದೂರಿn ಹಿನ್ನಲೆಯಲ್ಲಿ ಕೃಷಿ ಇಲಾಖೆ ಸುಮಾರು 370 ಔಷಧ ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ 175 ಔಷಧಗಳು ಕಳಪೆ ಆಗಿವೆ ಎಂದು ಕೃಷಿ‌ ಸಚಿವರು ಬಹಿರಂಗಪಡಿಸಿದರು. ಈಗಾಗಲೇ ಅವರ ವಿರುದ್ದ‌ ದೂರು ದಾಖಲಾಗಿದೆ ಎಂದರು. ರೈತರಿಗೆ ಯಾರೇ ವಂಚನೆ‌ ಅಥವಾ ಮೋಸ ಮಾಡಿದರೆ‌ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದರು.

ಲಾಕ್ ಡೌನ್ ನಿಂದ ಎಲರಗಿಂತ ರೈತರಿಗೆ ಹೆಚ್ವು ಪೆಟ್ಟು ಬಿದ್ದಿದೆ. ಆದ್ದರಿಂದ ಕೃಷಿ ವಲಯಕ್ಕೆ‌‌ ಸಂಬಂಧಿಸಿ ಎಲ್ಲಾ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ. ಲಾಕ್ ಡೌನ್ ನ್ನು ದುರ್ಬಳಕೆ ಮಾಡಿಕೊಂಡು ರೈತರಿಗೆ ಮೋಸ, ವಂಚನೆ ಮಾಡುವ ದಲ್ಲಾಳಿಗಳ ವಿರುದ್ದ ಸರ್ಕಾರ ಕಠಿಣ ಕ್ರಮ ವಹಿಸಲಿದೆ ಎಂದು‌ ಎಚ್ಚರಿಸಿದರು.

ಕೋಲ್ಡ್ ಸ್ಟೋರೇಜ್, ಸಂಸ್ಕರಣ ಘಟಕಕ್ಕೆ‌ ಚಿಂತನೆ: ರಾಜ್ಯದಲ್ಲಿ ಇತಂಹ ಕಷ್ಟಕಾಲ ರೈತರಿಗೆ ಯಾವಾಗ ಬೇಕಾದರೂ ಬರಬಹುದು. ಆದ್ದರಿಂದ ಆಹಾರ ಸಂಸ್ಕರಣೆ ಮಾಡುವ ಹಾಗೂ ರೈತರು ಬೆಳೆಯುವ ಹೂ, ಹಣ್ಣು ತರಕಾರಿಗಳನ್ನು ಕೆಡದಂತೆ ಸಂಸ್ಕರಣೆ ಮಾಡಲು ಅಗತ್ಯ ಇರುವ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ತೆರೆಯಬೇಕಿದೆ. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

Advertisement

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಶಾಸಕ ಜೆಕೆ ಕೃಷ್ಣಾರೆಡ್ಡಿ, ಬಾಗೇಪಲ್ಲಿ ಸುಬ್ಬಾರೆಡ್ಡಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next