Advertisement
ಕುಂದಾಪುರದಿಂದ 35 ಕಿ. ಮೀ. ದೂರದ, ಸಿದ್ದಾಪುರ ಸಮೀಪದ ಆಜ್ರಿ – ಬೆಳ್ಳಾಲಕ್ಕೆ ಸಂಪರ್ಕ ಕಲ್ಪಿಸುವ ಮೋರ್ಟು ಬಳಿ ಚಕ್ರಾ ನದಿಗೆ ಕಳೆದ ಜನವರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಮಂಜೂರಾಗಿದ್ದು, 3 ಕೋ.ರೂ. ಅನುದಾನ ಘೋಷಣೆಯಾಗಿತ್ತು. ಮಾರ್ಚ್‌ನಲ್ಲಿ ಕಾಮಗಾರಿಯೂ ಪ್ರಾರಂಭವಾಗಿದೆ. ಟೆಂಡರ್ ಆಗುವಾಗ ತಡವಾಗಿದ್ದರಿಂದ ಕಾಮಗಾರಿ ಶುರುವಾಗಲು ತಡವಾಗಿದೆ.
ಕಳೆದ ಮಾರ್ಚ್‌ನಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಮೇ ವರೆಗೆ ಕಾಮಗಾರಿಗೆ ಸಮಯವಿದ್ದರೂ 3 ಪಿಲ್ಲರ್ ಮತ್ತೂಂದು ಅರ್ಧ ಪಿಲ್ಲರ್ ಆಗಿದೆ.
ಮಳೆಗಾಲದಲ್ಲಿ ಸಂಪರ್ಕ ಕಡಿತ
ಸಿದ್ದಾಪುರ ಮಾರ್ಗವಾಗಿ ಆಜ್ರಿಯಿಂದ ಮೋರ್ಟು ದಾರಿಯಾಗಿ ಬೆಳ್ಳಾಲ ಗ್ರಾಮಕ್ಕೆ ತೆರಳಬೇಕಾದರೆ ನದಿ ದಾಟಬೇಕು. ಬೇಸಗೆಯಲ್ಲಿ ಈ ಊರಿನವರು ತಾತ್ಕಾಲಿಕ ಕಾಲು ಸಂಕದ ಮೂಲಕವೇ ನದಿ ದಾಟುತ್ತಾರೆ. ಇದರಲ್ಲಿ ದ್ವಿಚಕ್ರ ವಾಹನ ಸಂಚಾರ ಸಾಧ್ಯವಿದೆ. ಅದು ಬಿಟ್ಟರೆ ಬೇರಾವುದೇ ವಾಹನ ಚಾಲನೆ ಸಾಧ್ಯವಿಲ್ಲ.
ನೂರಾರು ಮಕ್ಕಳಿಗೆ ತೊಂದರೆ
ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಕಡೆಗಳಿಂದ ಸಿದ್ದಾಪುರ, ಹೆಮ್ಮಕ್ಕಿ, ಶಂಕರನಾರಾಯಣ ಶಾಲೆ- ಕಾಲೇಜುಗಳಿಗೆ ವಿದ್ಯಾರ್ಜನೆಗಾಗಿ ಸುಮಾರು 250 ರಿಂದ 300 ಮಕ್ಕಳು ಬರು ತ್ತಿದ್ದು, ಮಳೆಗಾಲದಲ್ಲಿ ಅವರು ಸುತ್ತು ಹಾಕಿ ತೆರಳುತ್ತಾರೆ. ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಕುಂದಾಪುರವೇ ಹತ್ತಿರ…!
ಆಜ್ರಿಯಿಂದ ಚಕ್ರ ನದಿ ದಾಟಿ ಮೋರ್ಟು-ಬೆಳ್ಳಾಲ- ಕೆರಾಡಿ- ಮಾರಣಕಟ್ಟೆಯಾಗಿ ಕೊಲ್ಲೂರಿಗೆ ತೆರಲು ಹತ್ತಿರದ ಮಾರ್ಗ ಇದಾಗಿದೆ. ಆದರೆ ಸೇತುವೆಯಿಲ್ಲದೆ ಸುತ್ತು ಬಳಸಬೇಕಾಗಿದೆ. ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಭಾಗದಲ್ಲಿ ಸುಮಾರು 1,000ಕ್ಕೂ ಹೆಚ್ಚು ಮನೆಗಳಿದ್ದು, ಈ ಭಾಗದ ಜನರಿಗೆ ಸಿದ್ದಾಪುರ ಹತ್ತಿರದ ಪೇಟೆ. ಆದರೆ ಮಳೆಗಾಲ ಆರಂಭವಾದ ಮೇಲೆ ಸಿದ್ದಾಪುರಕ್ಕೆ ಹೋಗಬೇಕಾದರೆ 30 ಕಿ.ಮೀ. ಸುತ್ತು ಹಾಕಿ ತೆರಳಬೇಕು. ಆದ್ದರಿಂದ ಇವರಿಗೆ ಕುಂದಾಪುರವೇ ಹತ್ತಿರ ಎನ್ನುವ ಸ್ಥಿತಿ ಇದೆ.
Related Articles
ಬೆಳ್ಳಾಲದಿಂದ ಆಜ್ರಿಗೆ ಸಂಪರ್ಕ ಕಲ್ಪಿಸುವ ಮೋರ್ಟು ಬಳಿ ಸೇತುವೆಗೆ 3 ಕೋ.ರೂ. ಮಂಜೂರಾಗಿದೆ. ಅನುದಾನವೂ ಬಿಡುಗಡೆಗೊಂಡಿದ್ದು, ಕಾಮಗಾರಿಯೂ ಪ್ರಾರಂಭವಾಗಿದೆ. ಈಗ ಮಳೆಗಾಲವಾಗಿದ್ದು, ಆ ಬಳಿಕ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ ಶೆಟ್ಟಿ,
ಬೈಂದೂರು ಶಾಸಕರು
Advertisement
ಆಗಿದ್ದರೆ ತುಂಬಾ ಪ್ರಯೋಜನಮೋರ್ಟುಗೆ ಸೇತುವೆ ಮಂಜೂರಾಗಿರುವುದು ತುಂಬಾ ಸಂತೋಷದ ವಿಚಾರ. ಹಾಗೆಯೇ ಕಾಮಗಾರಿಯೂ ಆದಷ್ಟು ಬೇಗ ಮುಗಿದರೆ ಒಳ್ಳೆಯದು. ಈ ವರ್ಷವೇ ಆಗಿದ್ದರೆ ಈ ಭಾಗದ ಜನರು, ಶಾಲಾ – ಕಾಲೇಜು ಮಕ್ಕಳಿಗೆ ಮಳೆಗಾಲದಲ್ಲಿ ಪ್ರಯೋಜನವಾಗುತ್ತಿತ್ತು.
– ಉದಯ ಪೂಜಾರಿ ಮೋರ್ಟು – ಪ್ರಶಾಂತ್ ಪಾದೆ