Advertisement
ಶನಿವಾರ ನಡೆದ ಪ್ರಶಸ್ತಿ ಕಾಳಗದ ನಿಗದಿತ ಅವಧಿಯನ್ನು ಇತ್ತಂಡಗಳು 1-1 ಗೋಲುಗಳಿಂದ ಸಮಬಲದಿಂದ ಮುಗಿಸಿದವು. ಆದರೆ ಶೂಟೌಟ್‌ನಲ್ಲಿ ಭಾರತಕ್ಕೆ ಅದೃಷ್ಟ ಕೈಕೊಟ್ಟಿತು. ದಕ್ಷಿಣ ಕೊರಿಯಾ 4-2 ಗೋಲುಗಳಿಂದ ಭಾರತವನ್ನು ಮಣಿಸಿ ಟ್ರೋಫಿಯನ್ನೆತ್ತಿತು. 5 ಬಾರಿಯ ಚಾಂಪಿಯನ್ ಭಾರತ 2010ರಲ್ಲಿ ಕೊನೆಯ ಸಲ ಈ ಕೂಟದ ಚಾಂಪಿಯನ್ ಆಗಿ ಮೂಡಿಬಂದಿತ್ತು. ವಿಶೇಷವೆಂದರೆ, ಅಂದು ದಕ್ಷಿಣ ಕೊರಿಯಾ ವಿರುದ್ಧ ಜಂಟಿಯಾಗಿ ಪ್ರಶಸ್ತಿಯನ್ನೆತ್ತಿತ್ತು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದೊಂದಿಗೆ ಎಲ್ಲ ತಂಡಗಳಿಗಿಂತಲೂ ಮುಂದಿದ್ದ ಭಾರತ ಈ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ದಕ್ಷಿಣ ಕೊರಿಯಾ 17ನೇ ರ್‍ಯಾಂಕಿಂಗ್‌ನ ತಂಡವಾಗಿತ್ತು. ಆದರೆ ಲೀಗ್‌ನಲ್ಲಿ ಇತ್ತಂಡಗಳು 1-1 ಅಂತರದಿಂದ ಡ್ರಾ ಸಾಧಿಸಿದ್ದವು. ಆಗಲೇ ಭಾರತ ಹೆಚ್ಚು ಎಚ್ಚರಿಕೆಯಿಂದ ಇರಬೇಕಿತ್ತು. ಪಂದ್ಯದ 9ನೇ ನಿಮಿಷದಲ್ಲೇ ಸಿಮ್ರನ್‌ಜಿàತ್ ಸಿಂಗ್ ಆಕರ್ಷಕ ಫೀಲ್ಡ್ ಸ್ಟ್ರೈಕ್ ಮೂಲಕ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ಕೊಡಿಸಿದರು. ಕೊರಿಯಾ ಸಮಬಲ ಸಾಧಿಸುವಾಗ 46 ನಿಮಿಷಗಳ ಆಟ ಮುಗಿದಿತ್ತು. 47ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಲಭಿಸಿತು. ಇದಕ್ಕೆ ಭಾರತ “ವೀಡಿಯೋ ರೆಫರಲ್’ ಬಯಸಿದರೂ ತೀರ್ಪು ಬದಲಾಗಲಿಲ್ಲ. ಜಾನ್ ಜಾಂಗ್ ಹ್ಯುನ್ ಯಾವ ತಪ್ಪು ಕೂಡ ಮಾಡಲಿಲ್ಲ.
Related Articles
Advertisement
ಶೂಟೌಟ್‌ನಲ್ಲಿ ಎರಡೇ ಗೋಲುಶೂಟೌಟ್ನಲ್ಲಿ ಭಾರತಕ್ಕೆ ಗಳಿಸಲು ಸಾಧ್ಯವಾದದ್ದು 2 ಗೋಲು ಮಾತ್ರ. ಮೊದಲ, 4ನೇ ಹಾಗೂ 5ನೇ ಅವಕಾಶವನ್ನು ಭಾರತ ಮಿಸ್ ಮಾಡಿಕೊಂಡಿತು. ಮನ್‌ದೀಪ್ ಸಿಂಗ್, ಸುಮಿತ್ ಕುಮಾರ್ ಜೂನಿಯರ್ ಮತ್ತು ಸುಮಿತ್ ವಿಫಲರಾದರು. ಯಶಸ್ಸು ಕಂಡವರು ಅನುಭವಿ ಬೀರೇಂದ್ರ ಲಾಕ್ರಾ ಮತ್ತು ವರುಣ್ ಮಾತ್ರ. ಕೆನಡಾವನ್ನು 4-2 ಗೋಲುಗಳಿಂದ ಪರಾಭವಗೊಳಿಸಿದ ಆತಿಥೇಯ ಮಲೇಶ್ಯ ತೃತೀಯ ಸ್ಥಾನಿಯಾಯಿತು.