Advertisement
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿನ ಎಂ ಎ ಎಜುಕೇಶನ್ ಪ್ರೋಗ್ರಾಂ, ಶಿಕ್ಷಣ ರಂಗದಲ್ಲಿ ದುಡಿಯಲು ಅವಶ್ಯವಿರುವ ಸಾಮರ್ಥ್ಯ, ಅರ್ಹತೆ ಮತ್ತು ತಿಳಿವಳಿಕೆಯನ್ನು ಸುಧಾರಿಸುವ ಉದ್ದೇಶದೊಂದಿಗೆ ವಿದ್ಯಾರ್ಥಿಗಳಿಗೆ ವಿಶಿಷ್ಟವೂ ಅನನ್ಯವೂ ಆದ ಶೈಕ್ಷಣಿಕ ಅನುಭವವನ್ನು ಕೊಡುವ ಉದ್ದೇಶ ಹೊಂದಿದೆ.
Related Articles
Advertisement
ಸಾಮಾಜಿಕ ಕ್ಷೇತ್ರದಲ್ಲಿನ ಅವಕಾಶಗಳು:
ಇಂದು ಸಾಮಾಜಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿಪುಲವಾದ ಅವಕಾಶಗಳಿವೆ. ಇಂತಹ ಅವಕಾಶಗಳು ತಳಮಟ್ಟದಿಂದ ಬಗೆ, ಬಗೆಯ ಹುದ್ದೆಗಳನ್ನು ನಿಭಾಯಿಸುವಲ್ಲಿ ಸಹಕಾರಿಯಾಗುತ್ತದೆ. ಅದರಲ್ಲಿ ಪ್ರೊಗ್ರಾಂ ಮ್ಯಾನೇಜ್ ಮೆಂಟ್, ಪಾಲಿಸಿ ಸಂಬಂಧಿತ ಕೆಲಸ, ಟೀಚಿಂಗ್, ಸಾಮರ್ಥ್ಯದ ಹೆಚ್ಚಳ, ತಂತ್ರಜ್ಞಾನ ಹೀಗೆ ಹಲವಾರು ಕ್ಷೇತ್ರಗಳು ಸೇರಿವೆ.
ದಾಖಲೆಯ ನೇಮಕಾತಿ:
5 ಬ್ಯಾಚಸ್ ಗಳ ಸುಮಾರು ಒಂದು ಸಾವಿರಕ್ಕೂ ಅಧಿಕ ಪದವೀಧರರನ್ನು ದಾಖಲೆ ಮಟ್ಟದಲ್ಲಿ ನೇಮಕಾತಿ ಮಾಡಿಸಿದ ಹೆಗ್ಗಳಿಕೆ ಅಜೀಂ ಪ್ರೇಮ್ ಜೀ ಯೂನಿರ್ವಸಿಟಿಯದ್ದಾಗಿದೆ. ಇದರಲ್ಲಿನ ಪ್ರಮುಖ ಹೈಲೈಟ್ಸ್ ಗಮನಿಸಿ..
*ಈವರೆಗೆ ನಮ್ಮ ಕ್ಯಾಂಪಸ್ ನೇಮಕಾತಿಯಲ್ಲಿ ಸುಮಾರು 250ಕ್ಕೂ ಅಧಿಕ ಸಂಸ್ಥೆಗಳು ಪಾಲ್ಗೊಂಡಿದ್ದವು. ಎನ್ ಜಿಓ ನಂತಹ ದೊಡ್ಡ ಪ್ರಮಾಣದ ಸಂಸ್ಥೆಗಳೇ ಆಗಮಿಸಿದ್ದವು. ಸಾಮಾನ್ಯ ಸಣ್ಣ ಸಂಸ್ಥೆಗಳು ಸೇರಿದಂತೆ ಸಂಶೋಧನಾ ಸಂಸ್ಥೆ, ಸರ್ಕಾರಿ ಸಂಸ್ಥೆಗಳು, ಶಾಲೆ, ಸಿಎಸ್ ಆರ್ ಎಸ್ ವಿವಿಧ ಸಂಸ್ಥೆಗಳು. ಬಹುತೇಕ ಸಂಸ್ಥೆಗಳು ತುಂಬಾ ಉತ್ತಮವಾದ ಅವಕಾಶಗಳನ್ನು ಒದಗಿಸಿದ್ದವು. ಅಲ್ಲದೇ ಸಾಮಾಜಿಕ ಕ್ಷೇತ್ರದಲ್ಲಿ ಇಂದು ಸ್ಪರ್ಧಾತ್ಮಕ ಜನರ ಅಗತ್ಯವೇ ಹೆಚ್ಚಾಗಿದೆ.
*ಶೇ.90ರಷ್ಟು ನಮ್ಮ ವಿದ್ಯಾರ್ಥಿಗಳು ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಅವರ ಸಾಮಾಜಿಕ ಬದ್ಧತೆಯನ್ನೂ ಕಾಣಬಹುದಾಗಿದೆ.
*ಕ್ಯಾಂಪಸ್ ನೇಮಕಾತಿಯಲ್ಲಿ ಆರಂಭಿಕ ತಿಂಗಳ ಸಂಬಳ 25000ರಿಂದ 30,000 ರೂ.ವರೆಗೆ. ವಿದ್ಯಾರ್ಥಿಗಳು ಮೊದಲೇ ಕೆಲಸದ ಅನುಭವ ಹೊಂದಿದ್ದರೆ ಸಂಬಳದ ಪ್ರಮಾಣ ಹೆಚ್ಚು.
*ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸವನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಅಥವಾ ಆಸಕ್ತಿ ಹೊಂದಿದ್ದರೆ ಫೆಲೋಶಿಫ್ ಆಕಾಂಕ್ಷಿಯಾಗಬಹುದಾಗಿದೆ.
ನೇಮಕಾತಿ ಸಮಿತಿ:
ನೇಮಕಾತಿ ಸಮಿತಿಯ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ನೇಮಕಾತಿಯ ಪ್ರಮುಖ ರೂಪರೇಶೆಗಳನ್ನು ಸಮಿತಿ ನಿರ್ಧರಿಸುತ್ತದೆ. ಪ್ರಮುಖ ಅಂಶಗಳು ಇವು:
*ನೇಮಕಾತಿ ದಿನಾಂಕ ಮತ್ತು ನೇಮಕಾತಿಗೆ ಸಂಬಂಧಪಟ್ಟ ನಡಾವಳಿಯನ್ನು ನಿಗದಿಪಡಿಸುತ್ತದೆ.
*ಉದ್ಯೋಗಾವಕಾಶಗಳ ಗುರುತಿಸುವಿಕೆ, ಫೆಲೋಶಿಫ್ಸ್, ಉನ್ನತ ಶಿಕ್ಷಣಾಭ್ಯಾಸ ಮತ್ತು ವಿದ್ಯಾರ್ಥಿ ಸಂಘಟನೆ ಮತ್ತು ಸಂಸ್ಥೆಗಳ ಜತೆ ಸಂಹವನ.
*ನೇಮಕಾತಿ ಕಾರ್ಯಕ್ರಮದ ಆಯೋಜನೆ
*ಸಾಫ್ಟ್ ಸ್ಕಿಲ್ಸ್ ತರಬೇತಿ, ಸಂವಹನ, ಆಸಕ್ತಿಕರ ಕ್ಷೇತ್ರಗಳ ಗುರುತಿಸುವಿಕೆ, ಸಂದರ್ಶನಾ ಕೌಶಲ್ಯ, ರೆಸ್ಯೂಂ ಕೌಶಲ್ಯ ಇತ್ಯಾದಿ.
ನೇಮಕಾತಿ ಪ್ರಕ್ರಿಯೆ:
ಕ್ಯಾಂಪಸ್ ನೇಮಕಾತಿಯಲ್ಲಿ ಭಾಗವಹಿಸುವ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೇಮಕಾತಿ ವಿವರದ ಮಾಹಿತಿ ಕೈಪಿಡಿಯನ್ನು ನೀಡುತ್ತವೆ. ಅಗತ್ಯವಿದ್ದರೆ ನೇಮಕಾತಿ ಮೊದಲೇ ಸಂಸ್ಥೆಗಳು ನೇಮಕಾತಿ ವಿವರ ನೀಡಲಿವೆ.
ನೇಮಕಾತಿ ಪ್ರಾರಂಭ:
ನೇಮಕಾತಿ ಪ್ರಕ್ರಿಯೆ ಪ್ರತಿವರ್ಷ ಫೆಬ್ರುವರಿ ಅಥವಾ ಜೂನ್ ಅಂತ್ಯಕ್ಕೆ ನಡೆಯಲಿದೆ. ಈ ಸಮಯದಲ್ಲಿ ಕ್ಯಾಂಪಸ್ ನಲ್ಲಿ ಆಯ್ದ ಆಹ್ವಾನಿತ ಸಂಘಟನೆಗಳು ಭಾಗವಹಿಸುತ್ತವೆ. ಒಂದು ವೇಳೆ ಸಂಸ್ಥೆಗಳು ನಿಗದಿತ ವಾರದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ,ಅನುಕೂಲಕರವಾದ ದಿನಾಂಕ ನಿಗದಿಪಡಿಸಲಾಗುವುದು.