Advertisement

ಸದ್ಯದಲ್ಲೇ ಅಜೀಂ ವಿದಾಯ

01:09 AM Jun 07, 2019 | sudhir |

ನವದೆಹಲಿ: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಾಹಿತಿತಂತ್ರಜ್ಞಾನ ಸಂಸ್ಥೆ ವಿಪ್ರೋದ ಸಂಸ್ಥಾಪಕ ಅಜೀಂ ಪ್ರೇಂಜಿ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಜೂ.30ಮುಂದಿನ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ. ಬರೋಬ್ಬರಿ 53 ವರ್ಷಗಳ ಕಾಲ ಸಂಸ್ಥೆಯನ್ನು ವಿವಿಧ ರೀತಿಯಲ್ಲಿ ಅವರು ಮುನ್ನಡೆಸಿದ್ದರು.

Advertisement

ಪ್ರೇಂ ಜಿ ಸ್ಥಾನಕ್ಕೆ ಸಿಇಒ ಅಬಿದಲೈ ಝೆಡ್‌. ನೀಮುಚ್ವಾಲಾ ಅವರನ್ನು ನೇಮಿಸಲಾಗಿದ್ದರೆ, ಸದ್ಯ ವ್ಯೂಹಾತ್ಮಕ ಅಧಿಕಾರಿಯಾಗಿರುವ ರಿಶದ್‌ ಪ್ರೇಂಜಿ ಅವರನ್ನು ನೂತನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಲಿದ್ದಾರೆ. ಈ ಬಗ್ಗೆ ಗುರುವಾರ ಸಂಸ್ಥೆ ಮಾಹಿತಿ ನೀಡಿದೆ. ಆದರೆ ವಿಪ್ರೋ ಸಂಸ್ಥಾಪಕ ಕಾರ್ಯನಿರ್ವಾಹಕೇತರ ನಿರ್ದೇಶಕ ಮತ್ತು ಸಂಸ್ಥಾಪಕ ಅಧ್ಯಕ್ಷ ಹುದ್ದೆಯಲ್ಲಿ ಜೂ.31ರಿಂದ ಅನ್ವಯವಾಗುವಂತೆ ಐದು ವರ್ಷಗಳ ಕಾಲ ಮುಂದುವರಿಯಲಿದ್ದಾರೆ. ಪ್ರೇಂಜಿ ಮಾ.14ರಂದು 1.45 ಲಕ್ಷ ಕೋಟಿ ರೂ. ಮೊತ್ತವನ್ನು ದಾನವಾಗಿ ನೀಡಿದ್ದಾರೆ. ಈ ಮೂಲಕ ವಿಶ್ವದಲ್ಲಿ ಐದನೇ ಮತ್ತು ಏಷ್ಯಾದಲ್ಲಿ ಅತ್ಯಂತ ದೊಡ್ಡ ಮೊತ್ತ ನೀಡಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2013ರಲ್ಲಿ ಸಂಸ್ಥೆಯನ್ನು ಮಾಹಿತಿ ತಂತ್ರಜ್ಞಾನ ಮತ್ತು ಇತರ ಉದ್ದಿಮೆಗಳು ಎಂದು ವಿಭಾಗಿಸಲಾಗಿತ್ತು. 1945ರ ಡಿ.29ರಂದು ಸಂಸ್ಥೆ ಆರಂಭವಾಗಿತ್ತು. 1970 ಮತ್ತು 1980ರ ದಶಕದಲ್ಲಿ ಸಂಸ್ಥೆ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್‌ ಕ್ಷೇತ್ರದತ್ತ ವಿಸ್ತರಿಸಲು ಯೋಜನೆ ನಡೆಸಿತ್ತು. ಸಂಸ್ಥೆ ವೆಸ್ಟರ್ನ್ ಇಂಡಿಯಾ ಪ್ರಾಡಕ್ಟ್ಸ್ ಲಿಮಿಟೆಡ್‌, ವಿಪ್ರೋ ಕನ್ಸ್ಯೂಮರ್‌ ಕೇರ್‌ ಆ್ಯಂಡ್‌ ಲೈಟಿಂಗ್‌, ವಿಪ್ರೋ ಇನ್ಫ್ರಾಸ್ಟ್ರಕ್ಚರ್‌ ಎಂಜಿನಿಯರಿಂಗ್‌, ವಿಪ್ರೋ ಜಿಇ ಮೆಡಿಕಲ್ ಸಿಸ್ಟಮ್ಸ್‌ ಎಂಬ ಸಹವರ್ತಿ ಸಂಸ್ಥೆಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next