Advertisement

ಪಾಕಿಗೆ ಅಜರ್‌ ಅಲಿ ರಕ್ಷಣೆ

12:19 AM May 12, 2017 | Team Udayavani |

ರೊಸೇಯೂ (ಡೊಮಿನಿಕಾ): ಮಳೆಯಿಂದ ಅಡಚಣೆಗೊಳಗಾದ ವೆಸ್ಟ್‌ ಇಂಡೀಸ್‌ – ಪಾಕಿಸ್ಥಾನ ನಡುವಿನ 3ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಅಜರ್‌ ಅಲಿ ಪಾಕ್‌ ತಂಡದ ರಕ್ಷಣೆಗೆ ನಿಂತಿದ್ದಾರೆ. ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪ್ರವಾಸಿ ಪಾಕಿಸ್ಥಾನ 3 ವಿಕೆಟಿಗೆ 191 ರನ್‌ ಗಳಿಸಿ ದ್ವಿತೀಯ ದಿನದಾಟವನ್ನು ಮುಂದುವರಿಸುತ್ತಿದೆ. ಆರಂಭಕಾರ ಅಜರ್‌ ಅಲಿ 98 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ಪಂದ್ಯದ ಮೊದಲ ದಿನವಾದ ಬುಧವಾರ ದ್ವಿತೀಯ ಅವಧಿಯ ಆಟ ಮಳೆಯಿಂದಾಗಿ ಸಂಪೂರ್ಣ ನಷ್ಟವಾಗಿತ್ತು. ದಿನದ 69 ಓವರ್‌ಗಳ ಆಟದಲ್ಲಿ ಪಾಕ್‌ 2 ವಿಕೆಟಿಗೆ 169 ರನ್‌ ಗಳಿಸಿತ್ತು. ದ್ವಿತೀಯ ದಿನವಾದ ಗುರುವಾರ ಯೂನಿಸ್‌ ಖಾನ್‌ (18) ವಿಕೆಟ್‌ ಉರುಳಿಸಿದ ವಿಂಡೀಸ್‌, ಪ್ರವಾಸಿಗರಿಗೆ ಆರಂಭಿಕ ಆಘಾತವಿಕ್ಕಿದೆ. ಅಲಿ ಹಾಗೂ ಖಾತೆ ತೆರೆಯದ ಮಿಸ್ಬಾ ಬ್ಯಾಟಿಂಗ್‌ ಮುಂದುವರಿಸುತ್ತಿದ್ದಾರೆ. ಶಾನ್‌ ಮಸೂದ್‌ 9, ಬಾಬರ್‌ ಆಜಂ 55 ರನ್‌ ಮಾಡಿ ನಿರ್ಗಮಿಸಿದ್ದಾರೆ. ವೆಸ್ಟ್‌ ಇಂಡೀಸ್‌ ಪರ ಅಲ್ಜಾರಿ ಜೋಸೆಫ್, ರೋಸ್ಟನ್‌ ಚೇಸ್‌ ಮತ್ತು ಜಾಸನ್‌ ಹೋಲ್ಡರ್‌ ಒಂದೊಂದು ವಿಕೆಟ್‌ ಉರುಳಿಸಿದ್ದಾರೆ. ಸರಣಿ 1-1 ಸಮಬಲದಲ್ಲಿರುವ ಕಾರಣ ಈ ಪಂದ್ಯ ನಿರ್ಣಾಯಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next