Advertisement

ತಿರಂಗಾ ಹಾರಿಸುವಾಗ ಧ್ವಜ ಸಂಹಿತೆ ಮರೆಯಬೇಡಿ

11:43 PM Aug 09, 2022 | Team Udayavani |

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಈ ಹೊತ್ತಲ್ಲಿ ದೇಶಾದ್ಯಂತ ಆಜಾದಿ ಕೀ ಅಮೃತ ಮಹೋತ್ಸವ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈಗಾಗಲೇ ಪ್ರತಿ ಹಳ್ಳಿಯ ಪ್ರತಿ ಮನೆ ಮನೆಗಳ ಮೇಲೆ ತಿರಂಗಾ ಧ್ವಜ ಹಾರಿಸುವಂತೆ ಕೇಂದ್ರ ಸರಕಾರವೇ ಕರೆ ಕೊಟ್ಟಿದ್ದು, ಇದಕ್ಕೆ ಉತ್ತಮ ಸ್ಪಂದನೆಯೂ ದೊರೆಯುತ್ತಿದೆ.

Advertisement

ದೇಶದ ಧ್ವಜವೆಂದರೆ ಅದು ನಮ್ಮೆಲ್ಲರ ಹೆಮ್ಮೆ ಕೂಡ. ಎಲ್ಲದಕ್ಕಿಂತ ಧ್ವಜದ ಪಾವಿತ್ರ್ಯತೆ ಅತ್ಯಂತ ಮುಖ್ಯವಾದದ್ದು. ಇಲ್ಲಿಯತನಕ ಕೇವಲ ಖಾದಿ ರಾಷ್ಟ್ರಧ್ವಜಗಳನ್ನು ಮಾತ್ರ ಹಾರಿಸಬೇಕು ಎಂಬ ನಿಯಮವಿತ್ತು. ಆದರೆ ಈ ಬಾರಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ನಿಯಮ ಸಡಿಲ ಮಾಡಲಾಗಿದೆ. ಈ ಬಗ್ಗೆ ಒಂದಷ್ಟು ವಿವಾದಗಳು ಎದ್ದಿದ್ದರೂ ಹೆಚ್ಚು ದೂರ ಎಳೆಯುವುದು ಸರಿಯಲ್ಲ ಎಂಬ ಭಾವನೆಯೂ ಇದೆ.

ಸದ್ಯ ದೇಶಾದ್ಯಂತ ಹರ್‌ಘರ್‌ ತಿರಂಗಾ ಆಚರಣೆ ನಡೆಯುವುದು ಆ.13ರಿಂದ ಆ.15ರ ವರೆಗೆ. ಈಗ ಇದಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ವಿಶೇಷವೆಂದರೆ, ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನಿವಾಸಗಳಿಗೇ ಹೋಗಿ ಅವರನ್ನು ಸಮ್ಮಾ¾ನಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕೆಲಸವೇ ಸರಿ.

ಇನ್ನು ಮನೆ ಮನೆ ತಿರಂಗಾ ಆಚರಣೆಗಾಗಿ ಸಾಕಷ್ಟು ಸಿದ್ಧತೆಗಳೂ ನಡೆಯುತ್ತಿವೆ. ಅಂಚೆ ಕಚೇರಿಯಲ್ಲಿ ಆರ್ಡರ್‌ ಮಾಡಿದರೆ, ಅವರೇ ಮನೆ ಬಾಗಿಲಿಗೆ ಧ್ವಜ ತಂದುಕೊಡುತ್ತಾರೆ. ಈಗಲೂ ಆರ್ಡರ್‌ ಮಾಡಿ ತರಿಸಿಕೊಳ್ಳಬಹುದು. ಅಲ್ಲದೆ, ಈ ಕೆಲಸವನ್ನು ಅಂಚೆ ಇಲಾಖೆಯು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದು, ಅವರ ಬೆನ್ನುತಟ್ಟಲೇಬೇಕು. 75ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ಇರುವ ನಾವೆಲ್ಲರೂ ಇಂಥದ್ದೊಂದು ದೇಶಪ್ರೇಮದ ಕಾರ್ಯಕ್ರಮದಲ್ಲಿ ಭಾಗಿಯಾಗಲೇಬೇಕು. ಇದು ಯಾವುದೇ ಪಕ್ಷದ ಆಚರಣೆಯಲ್ಲದಿರುವುದರಿಂದ ಎಲ್ಲರೂ ಎಂಥದ್ದೇ ಬೇಧ ಭಾವಗಳನ್ನು ಮರೆತು ಇದರಲ್ಲಿ ಭಾಗಿಯಾದರೆ ಉತ್ತಮವಾದ ಕೆಲಸ. ಇದಲ್ಲೆದಕ್ಕಿಂತ ಪ್ರಮುಖವಾಗಿ ದೇಶದ ಹೆಮ್ಮೆ ಎನ್ನಿಸಿರುವ ರಾಷ್ಟ್ರಧ್ವಜವನ್ನು ನಾವು ಹೇಗೆ ಕಾಪಿಡುತ್ತೇವೆ ಎಂಬುದು ಬಹಳ ಮುಖ್ಯ. ದೇಶದ ಹೆಮ್ಮೆಯ ಪ್ರತೀಕವೆನಿಸಿರುವ ಇದನ್ನು ಸರಿಯಾದ ಕ್ರಮದಲ್ಲಿ ಜೋಡಿಸಿಡಬೇಕು. ಅಂದರೆ, ಧ್ವಜವನ್ನು ಹೇಗೆ ಮ‚ಡಿಚಿಡಬೇಕು? ಹೇಗೆ ತೆಗೆದುಕೊಂಡು ಹೋಗಬೇಕು? ಮತ್ತು ಹೇಗೆ ಹಾರಿಸಬೇಕು ಎಂಬ ಬಗ್ಗೆ ಕೇಂದ್ರ ಸರಕಾರವೇ ಒಂದು ಮಾರ್ಗಸೂಚಿಯನ್ನು ನೀಡಿದೆ. ಕಡ್ಡಾಯವಾಗಿ ಇದನ್ನು ಎಲ್ಲರೂ ಪಾಲನೆ ಮಾಡಬೇಕು.

ಇನ್ನು ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಈಗಲೂ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರವೇ ನಡೆಯುತ್ತಿದೆ. ಖಂಡಿತವಾಗಿಯೂ ಇದು ತರವಲ್ಲ. ಸ್ವಾತಂತ್ರೊéàತ್ಸವದ ಹೊತ್ತಿನಲ್ಲಿ ರಾಜಕೀಯ ಮಾಡಿದರೆ, ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದೂ ಗಮನದಲ್ಲಿರಬೇಕು.

Advertisement

ಅಲ್ಲದೆ, ಇದು ಯಾವುದೇ ಧರ್ಮ, ಜಾತಿ, ಸಮುದಾಯಕ್ಕೂ ಸೇರಿ ದ್ದಲ್ಲ. ಎಲ್ಲರೂ ಜತೆಯಾಗಿ, ಒಗ್ಗಟ್ಟಿನಿಂದ ರಾಷ್ಟ್ರಧ್ವಜ ಹಾರಿಸುವ ಅಗ ತ್ಯವೂ ಇದೆ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿ ಇರಿಸಿಕೊಂಡಿರಬೇಕು. ಏನೇ ಆಗಲಿ, ದೇಶಾದ್ಯಂತ ಕೋಟಿ ಕೋಟಿ ಸಂಖ್ಯೆಯಲ್ಲಿ ರಾಷ್ಟ್ರ ಧ್ವಜ ಹಾರಿಸಲು ಸಿದ್ಧತೆ ನಡೆದಿದೆ. ಇದಕ್ಕೆ ಎಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವೂ ಆಗಿದೆ. ಈ ಮೂಲಕ ಆಂದೋ ಲನಕ್ಕೆ ಯಶಸ್ಸು ಸಿಗಲಿ ಎಂಬುದೇ ಎಲ್ಲರ ಹಾರೈಕೆಯೂ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next