Advertisement

ಯುವಜನತೆ ದೇಶಾಭಿಮಾನ ಬೆಳೆಸಿಕೊಳ್ಳಲಿ

03:59 PM Mar 23, 2021 | Team Udayavani |

ತುಮಕೂರು: ಯುವ ಜನತೆ ದೇಶಭಕ್ತಿ, ದೇಶಾಭಿಮಾನ ಬೆಳೆಸಿಕೊಂಡು ನಮ್ಮ ದೇಶದ ಸ್ವಾತಂತ್ರ್ಯವನ್ನು ಗೌರವದಿಂದ ಕಂಡು ನಾಡು ನುಡಿಸಂಸ್ಕೃತಿ ಪರಂಪರೆಯನ್ನು ಬೆಳೆಸಬೇಕು ಎಂದು ಚಿಕ್‌ಮಸ್ಕಲ್‌ ಮಠದ ಶ್ರೀ ಬಸವರಾಜಯ್ಯ ಸ್ವಾಮೀಜಿ ಹೇಳಿದರು.

Advertisement

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಎನ್‌ಎಸ್‌ಎಸ್‌ ಘಟಕದಿಂದ ಮಹಾತ್ಮ ಗಾಂಧೀಜಿ ತಂಗಿದ್ದ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ಆವರಣದಲ್ಲಿ ಇರುವ ಗಾಂಧಿ ಸ್ಮಾರಕದ ಮುಂದೆ ಏರ್ಪಡಿಸಿದ್ದ -75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿವಿದ್ಯಾರ್ಥಿಗಳು ಮಾರಕ ಚಟುವಟಿಕೆ ಗಳಿಗೆ ಬಲಿಯಾಗಿ ನಮ್ಮ ಇತಿಹಾಸ ಅಧ್ಯಯನ ಮಾಡದಿರುವುದು ಮತ್ತು ಅವರ ತ್ಯಾಗ ಮತ್ತು ಬಲಿದಾನಗಳ ಅರಿವು ಇಲ್ಲದಿರುವುದಕ್ಕೆ ವಿಷಾದಿಸಿದರು.

ಸ್ವಾತಂತ್ರ್ಯ ದ ಹಾದಿ ಸುಲಭವಾಗಿರಲಿಲ್ಲ: ಲಾಲ್‌ ಲಜಪತರಾಯ್‌, ಬಾಲ ಗಂಗಾಧರ್‌ ತಿಲಕ್‌ ಮತ್ತು ಬಿಪಿನ್‌ ಚಂದ್ರಪಾಲ್‌ ಅವರು ಸ್ವದೇಶಿ ವಸ್ತುಗಳನ್ನು ಉತ್ಪಾದಿಸಿ ಅವುಗಳನ್ನೆ ಉಪಯೋಗಿಸಬೇಕೆಂದು ಹೇಳುತ್ತಾ ಸ್ವದೇಶಿ ಚಳವಳಿಗೆ ಕಹಳೆ ಊದಿದ್ದರು.

1905ರಲ್ಲಿ ಅವರು ನೀಡಿದ ಈ ಕರೆ ಸ್ವಾವಲಂಬಿಯ ಸಂದೇಶವಾಗಿತ್ತು. ರಾಷ್ಟ್ರಾದ್ಯಂತ ಓಡಾಡಿ ಬಂಗಾಳವಿಭಜನೆ ವಿರೋಧಿಸಿದರು. ಈ ಸಮಯದಲ್ಲಿ ಇವರನ್ನು ಜೈಲಿಗೆ ಕಳುಹಿಸಲಾಯಿತು. ಸ್ವಾತಂತ್ರ್ಯ ದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಇಂದಿನ ಜನತೆ ಈ ಸ್ವಾತಂತ್ರ್ಯ ವನ್ನು ಗೌರವದಿಂದ ಕಂಡು ನಾಡು ನುಡಿಗೆ ಮೌಲ್ಯವನ್ನು ನೀಡಬೇಕೆಂದು ಹೇಳಿದರು.

ಪ್ರಾತಃಸ್ಮರಣೀಯರನ್ನು ನೆನಪಿಸಿಕೊಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.

Advertisement

ಎಸ್‌.ಜಗದೀಶ್‌ ಮಾತನಾಡಿ, ಇಂದಿನ ಯುವಜನತೆ ಸ್ವ ತಂತ್ರ್ಯ ನಂತರದಲ್ಲಿ ಹುಟ್ಟಿದವರು. ಅವರಿಗೆ ಸ್ವಾತಂತ್ರ್ಯ ಚಳವಳಿಯ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಅಗತ್ಯವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಈ ಸಂದರ್ಭದಲ್ಲಿ ಈ ಎಲ್ಲ ಪ್ರಾತಃಸ್ಮರಣೀಯರನ್ನುಗೌರವದಿಂದ ನೆನಪಿಸಿಕೊಳ್ಳಬೇಕಾದದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ಎಂದು ತಿಳಿಸಿದರು.

ಇತಿಹಾಸ ಸಹ ಪ್ರಾಧ್ಯಾಪಕ ಪ್ರೊ. ರವೀಂದ್ರ ಶರ್ಮ ಭಾರತದ ಸ್ವಾತಂತ್ರ್ಯ ಸಂಗ್ರಾಮ ವಿಷಯವಾಗಿ ವಿಶೇಷ= ಉಪನ್ಯಾಸ ನೀಡಿ, ಭಾರತದ ಸ್ವಾತಂತ್ರ್ಯ ಕ್ಕೆ ಹಲವು ಮಂದಿ ಜೀವ ತೆತ್ತತಿದ್ದಾರೆ. ಹಲವರ ಬಲಿದಾನ ತ್ಯಾಗ, ಶ್ರಮದ ಫ‌ಲವಾಗಿ ಭಾರತ ಸ್ವಾತಂತ್ರ್ಯ ಪಡೆದಿದೆ. ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಟಿ.ಆರ್‌. ಲೀಲಾವತಿ, ಉಪ ಪ್ರಾಂಶುಪಾಲರಾದ ನೂರ್‌ಫಾತಿಮಾ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿಡಾ.ಬಿ.ಆರ್‌. ರೇಣುಕಾ ಪ್ರಸಾದ್‌, ಎನ್‌.ಎಂ.ಮಮತಾ, ಸಹಾಯಕ ಪ್ರಾಧ್ಯಾಪಕರಾದ ಲೀಲಾವತಿ, ಸಿ. ನಂದಿನಿ ಇದ್ದರು

ಸ್ವಾತಂತ್ರ್ಯ ಸಿಕ್ಕಿದ್ದಲ್ಲ, ಹೋರಾಟದಿಂದ ಪಡೆದದ್ದು  :

ಭಾರತದ ಸ್ವಾತಂತ್ರ್ಯ ಸಿಕ್ಕಿದಲ್ಲ. ಅದು ಹೋರಾಟದಿಂದ ಪಡೆದದ್ದು ಎಂದು ವಿವರಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಮಹಾತ್ಮಾಗಾಂಧೀಜಿ ನೇತೃತ್ವದಲ್ಲಿ ಸತ್ಯಾಗ್ರಹದ ನೆಲೆಯಲ್ಲಿ ರೂಪುಗೊಂಡಿತು. ಅನೇಕ ದೇಶಾಭಿಮಾನಿಗಳಬಲಿದಾನದ ಹೋರಾಟ ಸ್ವಾತಂತ್ರ್ಯ ವನ್ನು ಪಡೆಯುವಲ್ಲಿ ಸಫ‌ಲವಾಯಿತು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಸ್‌.ಜಗದೀಶ್‌ ತಿಳಿಸಿದರು.

ನಮ್ಮ ದೇಶವನ್ನು ಬ್ರಿಟೀಷರ ಸಂಕೋಲೆಯಿಂದ ಬಿಡಿಸಿಕೊಳ್ಳಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಬಲಿದಾನ ದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ವಿದ್ಯಾರ್ಥಿಗಳುದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಸೇವೆಗೆ ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗಬೇಕು. -ಡಾ.ಟಿ.ಆರ್‌.ಲೀಲಾವತಿ, ಪ್ರಾಂಶುಪಾಲೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು.

Advertisement

Udayavani is now on Telegram. Click here to join our channel and stay updated with the latest news.

Next