ಶಹಾಬಾದ: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ನಿಜಕ್ಕೂ ದೇಶ ಕಂಡ ಅತ್ಯುತ್ತಮ ಯೋಧ ಎಂದು ಎಐಡಿವಾಯ್‌ಓ ಜಿಲ್ಲಾಧ್ಯಕ್ಷ ಎಸ್.ಎಚ್. ಜಗನ್ನಾಥ ಹೇಳಿದರು.
ನಗರದ ಎಐಡಿವೈಒ ವತಿಯಿಂದ ರಾಮಘಡ ಆಶ್ರಯ ಕಾಲೋನಿಯಲ್ಲಿ ಆಯೋಜಿಸಲಾದ ಕ್ರಾಂತಿಕಾರಿ ಚಂದ್ರಶೇಖರ ಆಜಾದರವರ 92ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಸಿವು, ಬಡತನ, ಅನಕ್ಷರತೆ, ಜಾತಿ, ಕೋಮು ಗಲಭೆಗಳ ಮುಕ್ತ ಸಮಾಜ ಅವರ ಕನಸಾಗಿತ್ತು. ಅವರ ಕನಸು ನನಸಾಗಬೇಕಾದರೆ ನಾವೆಲ್ಲರೂ ಒಂದಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.
ಯಾವುದೇ ಮಹಾನ್ ವ್ಯಕ್ತಿಗಳನ್ನು ಒಂದು ಜಾತಿಗೆ ಸಿಮೀತ ಮಾಡದೇ, ಬದಲಿಗೆ ಮಹನೀಯರ ಜೀವನ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಆದರಿಂದ ಸ್ಫೂರ್ತಿ ಪಡೆಯಬೇಕು. ಆಜಾದ್ ಅವರ ಜೀವನ ಮಾತ್ರವಲ್ಲ ಅವರ ಮರಣವೂ ಸಹ ಎಲ್ಲರಿಗೂ ಸ್ಪೂರ್ತಿದಾಯಕ ಹೇಳಿದರು. ಎಐಡಿವೈಒ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದು ಚೌಧರಿ ಮಾತನಾಡಿ, ಚಂದ್ರ ಶೇಖರ್ ಆಜಾದ್ ಬಡ ಕುಟುಂಬದಲ್ಲಿ ಜನಿಸಿದ ಅವರು ಮುಂದೆ ದೇಶದ ಪರಿಸ್ಥಿಯನ್ನು ನೋಡಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೊಡಗಿಸಿಕೊಂಡರು. ಆದರೆ ಇವತ್ತಿನ ಸರಕಾರ ದೇಶಕ್ಕಾಗಿ ಹೋರಾಡಿದ ಹಲವಾರು ಕ್ರಾಂತಿಕಾರಿಗಳ ನೈಜ ಇತಿಹಾಸವನ್ನು ಪಠ್ಯ-ಪುಸ್ತಕದಿಂದ ಕೈ ಬಿಟ್ಟದೆ ಎಂದು ವಿಷಾದಿಸಿದರು.
ಇಂದು ವಿದ್ಯಾರ್ಥಿ-ಯುವಜನರು ಆಜಾದ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಅವರ ಕನಸಿನ ಸಮಾಜವಾದ ಭಾರತವನ್ನು ಕಟ್ಟಲು ಪಣತೊಡೊಣ ಎಂದು ಹೇಳಿದರು.
ಎಐಡಿವೈಒ ಕಾರ್ಯದರ್ಶಿ ರಮೇಶ ದೇವಕರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಆನಂದ ದಂಡಗುಲಕರ್, ಶ್ರೀನಿವಾಸ ದಂಡಗುಲಕರ್, ನಾಗರಾಜ ದೇವಕರ ಸೇರಿದಂತೆ ಅನೇಕರು ಇದ್ದರು.