ವಿಶ್ವವಿದ್ಯಾಲಯ ತನ್ನ ಮೂರನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್ ನೀಡಲು ನಿರ್ಧರಿಸಿದೆ.
Advertisement
ಈ ಕುರಿತು ವಿವಿ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜು.13ರ ಬೆಳಗ್ಗೆ ವಿವಿಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಡಾಕ್ಟರೆಟ್ ನೀಡಲಾಗುತ್ತಿದೆ. ಕಲೆಯಲ್ಲಿ ಹೆಸರು ಮಾಡಿರುವಕಲಬುರಗಿಯ ಜೆ.ಎಸ್. ಖಂಡೇರಾವ್, ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಖ್ಯಾತ ದಲಿತ ಕವಿ, ಡಾ. ಸಿದ್ದಲಿಂಗಯ್ಯ, ಮಾಜಿ ರಾಷ್ಟ್ರ ಪತಿ ದಿ. ಅಬ್ದುಲ್ ಕಲಾಂ ಜತೆ ಕೆಲಸ ಮಾಡಿರುವ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ. ಟೆಸ್ಸಿ ಥಾಮಸ್ ಹಾಗೂ ಶ್ರೇಷ್ಠ ಭೌತವಿಜ್ಞಾನಿ ಡಾ. ಬಾಲ ಸುಬ್ರಹ್ಮಣ್ಯನ್ ಆರ್. ಅಯ್ಯರ್ ಅವರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಗುತ್ತಿದೆ ಎಂದರು. ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿ)ಚೇರ್ಮನ್ ಪ್ರೊ. ಅನಿಲ ಡಿ. ಸಹಸ್ರಬುಧೆ ಘಟಿಕೋತ್ಸವ ಭಾಷಣ ಮಾಡಲಿದ್ದು, ಗೌರವ ಡಾಕ್ಟರೆಟ್ ಪ್ರದಾನ ಮಾಡುವರು. ವಿವಿ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.