Advertisement

ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿಯಿಂದ ಯಕ್ಷ ನೃತ್ಯರೂಪಕ

05:01 PM Feb 22, 2017 | |

ಪುಣೆ: ಶ್ರೀ  ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಸಂಯೋಜನೆಯಲ್ಲಿ  ಯಕ್ಷ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಅವರ  ನಿರ್ದೇಶನದಲ್ಲಿ  ಯಶವಂತ್‌ರಾವ್‌ ಚವಾಣ ಸಭಾ ಗೃಹದಲ್ಲಿ ಪುಣೆಯ ಕರ್ನಾಟಕ ಹೈಸ್ಕೂಲ್‌ ವಿದ್ಯಾರ್ಥಿಗಳಿಂದ ಸಮುದ್ರ ಮಂಥನ ಯಕ್ಷ ನಾಟ್ಯ ನೃತ್ಯ ರೂಪಕ ಪ್ರದರ್ಶನಗೊಂಡಿತು.   

Advertisement

ಸುಮಾರು 40 ಕನ್ನಡಿಗ ಮಕ್ಕಳು ಈ  ಪ್ರದರ್ಶನದಲ್ಲಿ ಭಾಗವಹಿಸಿದ್ದು ಯಕ್ಷಗುರು ಆನಂದ ಭಟ… ನಾಟ್ಯಾಭ್ಯಾಸವನ್ನು ಕಲಿಸಿ ವಿದ್ಯಾರ್ಥಿಗಳನ್ನು ತಯಾರು ಗೊಳಿಸಿದ್ದರು.

ತುಂಬಿದ ಸಭಾಗೃಹದಲ್ಲಿ ಪ್ರೇಕ್ಷಕರ ಕರತಾಡನಕ್ಕೆ ಸಾಕ್ಷಿಯಾದ ಈ ಪ್ರದರ್ಶನಕ್ಕೆ ಹಿಮ್ಮೇಳದಲ್ಲಿ ಮಂಡಳಿಯ ಕಲಾವಿದರುಗಳಾದ ವಿಕೇಶ್‌  ರೈ ಶೇಣಿ, ವಾಸು ಕುಲಾಲ್‌ ವಿಟ್ಲ, ಸುಕೇಶ್‌  ಶೆಟ್ಟಿ ಎಣ್ಣೆಹೊಳೆ ಸಹಕಾರ ನೀಡಿದರು. 

ಮಂಡಳಿ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next